ಜಿಲ್ಲೆಗಳು

ವೆಸ್ಲಿ ಸೇತುವೆ ಬಳಿ ಸ್ವಾಮೀಜಿ ಮೃತ ದೇಹ ಪತ್ತೆ

ಚಾಮರಾಜನಗರ: ಕಾಣೆಯಾಗಿದ್ದ ಸ್ವಾಮೀಜಿ ಶವವಾಗಿ ಪತ್ತೆಯಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ವೆಸ್ಲಿ ಸೇತುವೆ ಸಮೀಪ ನಡೆದಿದೆ. ಹನೂರು ತಾಲೂಕಿನ ಪಿ ಜಿ ಪಾಳ್ಯ ಗ್ರಾಮದಲ್ಲಿರುವ ಹೊಸ ಮಠದ ರಾಜಶೇಖರ ಸ್ವಾಮೀಜಿ (70) ಮೃತ ದುರ್ದೈವಿ. ಇಂದು ಕಾವೇರಿ ನದಿ ತೀರದಲ್ಲಿ ಅಪರಿಚಿತ ಮೃತದೇಹ ದೊರೆತಿದೆ ಎಂಬ ಮಾಹಿತಿ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಿಸಿದ ಬಳಿಕ ಸ್ವಾಮೀಜಿ ಮೃತಪಟ್ಟಿರುವುದು ಗೊತ್ತಾಗಿದೆ.

ಕೊಳ್ಳೇಗಾಲದ ಕಡೆ ಹೋಗಿ ಬರುತ್ತೇನೆಂದು ಹೋದವರು ಮಠಕ್ಕೆ ಹಿಂದಿರುಗಿರಲಿಲ್ಲ ಎಂದು ಸ್ವಾಮೀಜಿ ಸಹೋದರ ಪ್ರಕಾಶ್ ಎಂಬುವರು ದೂರು ಕೊಟ್ಟಿದ್ದು, ಅದರಲ್ಲಿ ಸ್ವಾಮೀಜಿ ಅನಾರೋಗ್ಯ ಪೀಡಿತರಾಗಿದ್ದರು ಹಾಗೂ ಹೊಟ್ಟೆನೋವಿನಿಂದಲೂ ಬಳಲುತ್ತಿದ್ದರು. ಜ.17 ರಂದು ಕೊಳ್ಳೇಗಾಲದ ಕಡೆ ಹೋಗಿ ಬರುತ್ತೇನೆಂದು ಹೋದವರು ಮಠಕ್ಕೆ ಹಿಂದಿರುಗಿರಲಿಲ್ಲ. ಎಲ್ಲ ಕಡೆ ಹುಡುಕಿದರೂ ಸಿಕ್ಕಿರಲಿಲ್ಲ.

 

andolanait

Recent Posts

ಆಕ್ರಮಣ ತಡೆಯಲು ಸಿದ್ದ : ಅಮೆರಿಕಗೆ ಕ್ಯೂಬಾ ಎಚ್ಚರಿಕೆ

ಹವಾನಾ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಗೊಡ್ಡು ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ ಎಂದು ಕ್ಯೂಬಾ ದೇಶದ ವಿದೇಶಾಂಗ…

36 seconds ago

ಹನೂರು | ಇಂದಿರಾ ಕ್ಯಾಂಟೀನ್‌ಗೆ ದಿಢೀರ್‌ ಭೇಟಿ ನೀಡಿದ ಶಾಸಕ ಮಂಜುನಾಥ್‌

ಹನೂರು : ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಶಾಸಕ ಎಂ.ಆರ್ ಮಂಜುನಾಥ್ ದಿಢೀರ್ ಭೇಟಿ ನೀಡಿ ಗ್ರಾಹಕರಿಗೆ ತಯಾರಿಸಿದ್ದ ಅನ್ನ ಸಾಂಬಾರ್…

17 mins ago

ನ್ಯೂಯಾರ್ಕ್‌ | ಲ್ಯಾಂಡಿಂಗ್‌ ವೇಳೆ ಟ್ರಕ್‌ಗೆ ವಿಮಾನ ಡಿಕ್ಕಿ : ಇಬ್ಬರು ಸಾವು

ನ್ಯೂಯಾರ್ಕ್‌ : ಲ್ಯಾಂಡಿಂಗ್‌ ವೇಳೆ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನ ಫೈರ್ ಟ್ರಕ್‌ಗೆ ಡಿಕ್ಕಿಯಾಗಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, 100ಕ್ಕೂ…

21 mins ago

IPL | ಮೊದಲ ಪಂದ್ಯದಲ್ಲಿ ಆರ್‌ಸಿಬಿ-ಎಸ್‌ಆರ್‌ಎಚ್‌ ಮುಖಾಮುಖಿ

ಬೆಂಗಳೂರು : ಬಹುನಿರೀಕ್ಷಿತ ಐಪಿಎಲ್‌ನ 19ನೇ ಆವೃತ್ತಿಯ ಟೂರ್ನಿಗೆ ಮಾ.28ಕ್ಕೆ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ. ಇದಕ್ಕಾಗಿ ಬಹುತೇಕ…

40 mins ago

ಹೆಚ್ಚುವರಿಯಾಗಿ 1 ಸಾವಿರ ವಾಣಿಜ್ಯ ಸಿಲಿಂಡರ್‌ ಪೂರೈಕೆ; ನೋಂದಣಿ ಕಡ್ಡಾಯ : ಸಚಿವ ಮುನಿಯಪ್ಪ

ಬೆಂಗಳೂರು : ಹೆಚ್ಚುವರಿಯಾಗಿ ಒಂದು ಸಾವಿರ ವಾಣಿಜ್ಯ ಸಿಲಿಂಡರ್‌ ಪೂರೈಕೆ ಮಾಡುವುದಾಗಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. ಗ್ಯಾಸ್ ಕಂಪನಿಗಳು ಮತ್ತು…

42 mins ago

ಮಾಂದಲಪಟ್ಟಿಯಲ್ಲಿ ಮುಂದುವರಿದ ರಸ್ತೆ ದುರಸ್ತಿ ಕಾರ್ಯ

ಬೃಹತ್ ಯಂತ್ರ ಬಳಸದೆ ಕೆಲಸ; ಇನ್ನೂ 10-15 ದಿನ ಪ್ರವಾಸಿಗರ ಪ್ರವೇಶಕ್ಕಿಲ್ಲ ಅವಕಾಶ ನವೀನ್ ಡಿಸೋಜ ಮಡಿಕೇರಿ : ಕೊಡಗಿನ…

1 hour ago