ಮೈಸೂರಿಗೆ ನಾಳೆ ಬರಲಿರುವ ರೈಲು
ನ.೧೨ ರಂದು ಬೆಳಿಗ್ಗೆ ೫-೫೦ಕ್ಕೆ ವಂದೇ ಭಾರತ್ ರೈಲು ಚೆನ್ನೈ ನಿಲ್ದಾಣದಿಂದ ನಿರ್ಗಮಿಸಲಿದೆ.೧೦-೨೦ಕ್ಕೆ ಬೆಂಗಳೂರಿಗೆ ಆಗಮಿಸಿ ೧೦-೨೫ಕ್ಕೆ ಬೆಂಗಳೂರು ನಿಲ್ದಾಣ ಬಿಟ್ಟು ಮಧ್ಯಾಹ್ನ ೧೨-೨೦ ಕ್ಕೆ ಮೈಸೂರು ನಿಲ್ದಾಣಕ್ಕೆ ಆಗಮಿಸಲಿದೆ. ಇದೇ ಸಮಯ ಮುಂದುವರಿಯಲಿದೆ.
ಮೈಸೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಯೋಜನೆಯ ಭಾಗವಾದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ನ.೧೧ ರಂದು ಬೆಂಗಳೂರು- ಚೆನ್ನೈ ನಡುವೆ ಸಂಚಾರ ಆರಂಭಿಸಲಿದೆ.
ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಈ ಎಕ್ಸ್ ಪ್ರೆಸ್ ರೈಲನ್ನು ಪರಿಚಯಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಈ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಇದು ಭಾರತದಲ್ಲಿ ಅತಿವೇಗದಲ್ಲಿ ಸಂಚರಿಸುವ ಪ್ರಪ್ರಥಮ ರೈಲಾಗಿದೆ.
ಈ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಭಾರತದಲ್ಲಿ ಪರಿಚಯಿಸುತ್ತಿರುವ ಐದನೆಯದಾಗಿದೆ. ಇದಕ್ಕೂ ಮೊದಲು ರಾಷ್ಟ್ರದ ರಾಜಧಾನಿ ಹೊಸದಿಲ್ಲಿ-ದೇಶದ ವಾಣಿಜ್ಯನಗರಿ ಮುಂಬೈ, ಗುಜರಾತ್‌ನ ಅಹಮದಾಬಾದ್ – ಕಾನ್‌ಪುರ- ವಾರಣಾಸಿ ಮತ್ತಿತರ ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ನಾಲ್ಕು ವಂದೇ ಭಾರತ್ ಅತಿವೇಗದ ಎಕ್ಸ್ ಪ್ರೆಸ್ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಈ ರೈಲು ಬೆಂಗಳೂರು ಮತ್ತು ಮೈಸೂರು ಹಾಗೂ ತಮಿಳುನಾಡು ರಾಜಧಾನಿ ಚೆನ್ನೈ ಮಹಾನಗರವನ್ನು ಸಂಪರ್ಕಿಸಲಿದೆ.
ಸುಸಜ್ಜಿತ ವ್ಯವಸ್ಥೆ: ಈ ಎಕ್ಸ್ ಪ್ರೆಸ್ ರೈಲು ಒಟ್ಟು ೧೬ ಬೋಗಿಗಳನ್ನು ಹೊಂದಿದ್ದು ಆಟೋಮ್ಯಾಟಿಕ್ ತಂತ್ರಜ್ಞಾನದ ಬಾಗಿಲುಗಳು ಮತ್ತು ೧೮೦ ಡಿಗ್ರಿಯಲ್ಲಿ ತಿರುಗಬಹುದಾಗ ಆಸನ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ.ಒಂದು ವಂದೇ ಭಾರತ್ ರೈಲಿನ ಹದಿನಾರು ಬೋಗಿಗಳನ್ನು ತಯಾರಿಸಲು ೯೭ ಕೋಟಿ ರೂ.ವೆಚ್ಚ ತಗಲುತ್ತದೆ.
ಗಂಟೆಗೆ ಅತಿ ಹೆಚ್ಚು ಅಂದರೆ ೧೬೦ ರಿಂದ ೧೮೦ ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವಿರುವ ಈ ರೈಲು, ಶತಾಬ್ದಿ ರೈಲಿಗಿಂತ ವೇಗವಾಗಿ ಸಂಚರಿಸಲಿದೆ. ಈಗ ಮೈಸೂರು -ಚೆನ್ನೈ ನಡುವೆ ಬೆಂಗಳೂರು ಮಾರ್ಗವಾಗಿ ಸಂಚರಿಸುತ್ತಿರುವ ಶತಾಬ್ದಿ ಎಕ್ಸ್ ಪ್ರೆಸ್ ರೈಲು ಚೆನ್ನೈನಿಂದ ಮೈಸೂರು ತಲುಪಲು ೭.೧೫ ಗಂಟೆ ತೆಗೆದು ಕೊಳ್ಳುತ್ತದೆ.ಈಗ ಪರಿಚಯಿಸುತ್ತಿರುವ ವಂದೇ ಭಾರತ್ ೬.೪೦ ಗಂಟೆ ತೆಗೆದುಕೊಳ್ಳುತ್ತದೆ.ಈ ಎರಡೂ ರೈಲುಗಳ ಸಂಚಾರದ ವೇಗದಲ್ಲಿ ೩೫ ನಿಮಿಷ ಮಾತ್ರ ಅಂತರವಿದೆ.
ಅತಿ ಹಗುರ ರೈಲು
ಭಾರತೀಯ ರೈಲ್ವೆ ಸಂಪೂರ್ಣ ದೇಸೀ ನಿರ್ಮಿತವಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಭಾರತ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟು ಸ್ವಾತಂತ್ರ್ಯ ಪಡೆದ ನಂತರವೂ ೧೪೦೦ ರಿಂದ ೧೫೦೦ ಟನ್‌ನಷ್ಟು ತೂಕದ ರೈಲುಗಳೇ ದೇಶದಲ್ಲಿ ಸಂಚರಿಸುತ್ತಿವೆ. ಆದರೆ ವಂದೇ ಭಾರತ್ ರೈಲಿನ ತೂಕ ಕೇವಲ ೩೯೨ ಟನ್‌ನಷ್ಟು ಮಾತ್ರ ಇರುತ್ತದೆ. ಇದು ಭಾರತ ರೈಲ್ವೆ ಇತಿಹಾಸದಲ್ಲಿ ಅತ್ಯಂತ ಹಗುರ ತೂಕದ ರೈಲು ಇದಾಗಿದೆ. ಜಗತ್ತಿನ ಗಮನ ಸೆಳೆದಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
* ವಂದೇ ಭಾರತ್ ರೈಲು ವಾರದ ೬ ದಿನಗಳಲ್ಲಿ ಸಂಚರಿಸಲಿದ್ದು, ಪ್ರತಿ ಬುಧವಾರ ಇದರ ಸಂಚಾರವಿರುವುದಿಲ್ಲ.
* ಮೈಸೂರು- ಚೆನ್ನೈ ನಡುವೆ ಈ ರೈಲು ಗಂಟೆಗೆ ೭೫ರಿಂದ ೭೭ ಕಿ.ಮೀ. ವೇಗದಲ್ಲಿ ಸಂಚಾರ
* ಚೆನ್ನೈನಿಂದ ಮುಂಜಾನೆ ೫.೫೦ಕ್ಕೆ ನಿರ್ಗಮನ
* ಮಧ್ಯಾಹ್ನ ೧೨.೩೦ಕ್ಕೆ ಮೈಸೂರು ನಿಲ್ದಾಣ ತಲುಪುವ ರೈಲು
* ಮತ್ತೆ ಮಧ್ಯಾಹ್ನ ೧.೫ಕ್ಕೆ ವಾಪಸ್ ಹೊರಟು ಬೆಂಗಳೂರಿಗೆ ೨.೨೫ಕ್ಕೆ ತಲುಪಲಿದೆ
* ಅಂದು ರಾತ್ರಿ ೭೩೫ಕ್ಕೆ ಚೆನ್ನೈ ತಲುಪಲಿದೆ
ಬಾರಾಮತಿ: ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಡಿಸಿಎಂ ಅಜಿತ್ ಪವಾರ್ ಸಾವನ್ನಪ್ಪಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ…
ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ ಅಂತ ಚಿನ್ನ ಬೆಳ್ಳಿ! ಬೆಲೆ ಎಷ್ಟಾದರೂ ನಾವು ಬಗ್ಗೋದೇ ಇಲ್ಲ ಅಂತ ಕೆಲ ಗ್ರಾಹಕರು…
ವಿದೇಶಿ ನೆಲದಲ್ಲಿ ದೇಶವನ್ನು ಟೀಕಿಸುವುದಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನಿಲುವು ಸ್ವಾಗತಾರ್ಹವಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲೇ ಅವರು…
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬಾಂಗ್ಲಾ ದೇಶಕ್ಕೆ ೧೯೭೨ ರಲ್ಲಿ ಪಾಕಿಸ್ತಾನದಿಂದ ಬೇರ್ಪಡಿಸಿ…
ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಕೆಲವು ಆಟೋ ಚಾಲಕರು…
ಏಷ್ಯಾದ ಪ್ರಪ್ರಥಮ ಎದೆಹಾಲಿನ ಬ್ಯಾಂಕನ್ನು ಆರಂಭಿಸಿದ ಕೀರ್ತಿ ಕರ್ನಾಟಕದಲ್ಲಿ ಹುಟ್ಟಿದ, ಗೋವಾ ಮೂಲದ, ಈಗ ಮುಂಬೈಯಲ್ಲಿ ತನ್ನ ಸಾಮಾಜಿಕ ಕಾರ್ಯಗಳನ್ನು…