ಜಿಲ್ಲೆಗಳು

ಬೊಮ್ಮಲಾಪುರದಲ್ಲಿ ಅದ್ಧೂರಿ ವಾಲ್ಮೀಕಿ ಜಯಂತಿ; ಗಮನ ಸೆಳೆದ ರಾಮಾಯಣ ವೇಷಧಾರಿಗಳು

ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ವಾಲ್ಮೀಕಿ ಜಯಂತಿಯನ್ನು ನಾಯಕ ಸಮುದಾಯದ ವತಿಯಿಂದ ಭಾನುವಾರ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ವಾಲ್ಮೀಕಿ ಮಹರ್ಷಿ ಭಾವಚಿತ್ರ, ವಾಲ್ಮೀಕಿ ಸಮುದಾಯದ ಶ್ರೀಗಳ ಭಾವಚಿತ್ರವನ್ನು ಹೂಗಳಿಂದ ಅಲಂಕರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಜೊತೆಗೆ, ಯುವಕರುಗಳು ರಾಮಾಯಣದ ಪಾತ್ರಧಾರಿಗಳಾಗಿ, ವೀರ ಮದಕರಿ ನಾಯಕ, ಒನಕೆ ಒಬವ್ವ, ಏಕಲವ್ಯನ‌ ವೇಷದಲ್ಲಿ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.
ಪ್ರತಿವರ್ಷವೂ ಬೊಮ್ಮಲಾಪುರ ಗ್ರಾಮದಲ್ಲಿ ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಿದ್ದು ಸಂಬಂಧಿಕರನ್ನು ಕರೆದು ಸಿಹಿ ಊಟ ಹಾಕಿಸಿ ಭಕ್ತಿ-ಶ್ರದ್ಧೆಗಳಿಂದ ಮಹರ್ಷಿ ವಾಲ್ಮೀಕಿ ಅವರನ್ನು ಪೂಜಿಸಲಿದ್ದಾರೆ.‌ ಗ್ರಾಮದ ಯಜಮಾನರುಗಳು, ಯುವ ಮುಖಂಡರುಗಳು ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದರು.

andolanait

Recent Posts

10 ವರ್ಷದ ಪ್ರೀತಿಗೆ ಮೋಸ,ಹಣವೂ ದೋಖಾ : ಬೇರೆ ಮದುವೆಗೆ ಮುಂದಾದ ಯುವಕನ ಮನೆಮುಂದೆ ಪ್ರಿಯತಮೆ ಗಲಾಟೆ

ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…

2 hours ago

ವರ್ಷಾಂತ್ಯಕ್ಕೂ ಸಫಾರಿ ಪುನಾರಂಭ ಸಾಧ್ಯತೆ ಕ್ಷೀಣ

ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ? ಮೈಸೂರು :…

2 hours ago

ಪ್ರತಿಭಟನೆ ಮಾಹಿತಿ ತಿಳಿದು ಕೆರೆಗೆ ನೀರು ತುಂಬಿಸಿದ ಅಧಿಕಾರಿಗಳು!

ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…

5 hours ago

ಓದುಗರ ಪತ್ರ | ರಸ್ತೆ ದುರಸ್ತಿ ಮಾಡಿ

ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…

5 hours ago

ಓದುಗರ ಪತ್ರ | ತಂಬಾಕುಯುಕ್ತ ದಂತ ಉತ್ಪನ್ನಗಳನ್ನು ನಿಷೇಧಿಸಿ

ಇತ್ತೀಚಿನ ದಿನಗಳಲ್ಲಿ, ಟೂತ್ ಪೇಸ್ಟ್‌ಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಅಂಶ ಪತ್ತೆಯಾಗಿದ್ದು, ಇದರ ಸೇವನೆಯಿಂದ ಹಲವು ಮಕ್ಕಳು ತೊಂದರೆಗೊಳಗಾಗಿರುವ ಘಟನೆಗಳು…

5 hours ago

ಓದುಗರ ಪತ್ರ | ರಸ್ತೆಯಲ್ಲಿ ವಾಯುವಿಹಾರ ಅಪಾಯಕಾರಿ

ಮೈಸೂರಿನ ಕುವೆಂಪುನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ರಸ್ತೆ, ಗದ್ದಿಗೆ ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ವಿದ್ಯಾರಣ್ಯಪುರಂ -…

5 hours ago