ಹನೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿರುವ 8 ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಕಣ್ಣೂರು ಗ್ರಾಮದ ಬಸವರಾಜಪ್ಪ, ಜಯಶೇಖರ್ , ಯೋಗೇಶ್ವರ್, ನಾಗೇಂದ್ರ, ವೃಷಭೇಂದ್ರ, ರಾಜಶೇಖರ್, ಅನಿಲ್, ಮಲ್ಲಿಕಾರ್ಜುನ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ .
ಘಟನೆ ವಿವರ : ಕಳೆದ ವರ್ಷ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ದೂರುದಾರ ವೃಷಭೇಂದ್ರ ಹಾಗೂ ಬಸವರಾಜಪ್ಪನವರ ಮಗ ಜಯಶೇಖರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಬಸವರಾಜಪ್ಪನವರ ಮಗ ಜಯಶೇಖರ್ ಪರಾಭವ ಗೊಂಡಿದ್ದರು. ಚುನಾವಣೆಯಲ್ಲಿ ಸೋತ ಹಿನ್ನೆಲೆ ಬಸವರಾಜಪ್ಪ ನನ್ನ ಮಗ ಗೆದ್ದಿದ್ದರೆ ಅಧ್ಯಕ್ಷ ಆಗುತ್ತಿದ್ದ ನಿನ್ನಿಂದಲೇ ಸೋತ ಎಂದು ನನ್ನ ಮೇಲೆ ವೈಮನಸ್ಸು ಇಟ್ಟುಕೊಂಡಿದ್ದನು. ಅ. 25 ರಂದು ನಾನು ನಮ್ಮ ಮನೆಯಲ್ಲಿದ್ದಾಗ ಗುರುಮಲ್ಲೇಶ್ವರ ಮಠದ ಬಳಿ ಬಸವರಾಜಪ್ಪ ಈತನ ಮಕ್ಕಳಾದ ಜಯಶೇಖರ್’ ಮಲ್ಲಿಕಾರ್ಜುನ್, ಈತನ ಮೊಮ್ಮಗ ಯೋಗೇಶ್ವರ್ ಆಲಿಯಾಸ್ ಚರಿತ ಮತ್ತು ಬಸವರಾಜಪ್ಪ ನ ಕಡೆಯವರಾದ ಮಹದೇವಸ್ವಾಮಿ ನಾಗೇಂದ್ರ, ವೃಷಭೇಂದ್ರಸ್ವಾಮಿ ರಾಜಶೇಖರ್ ಮೂರ್ತಿ ಅನಿಲ್ ರವರ ಗಳ ಗುಂಪು ಕಟ್ಟಿಕೊಂಡು ಬಂದು ದೊಡ್ಡ ದೊಡ್ಡ ಪಟಾಕಿಯನ್ನು ಮಠದ ಮುಂಭಾಗ ರಸ್ತೆಯಲ್ಲಿ ಹೊಡೆಯುತ್ತಿದ್ದರು. ಇದನ್ನು ಕೇಳಲು ಹೋದ ನನ್ನ ಮೇಲೆ ಬಸವರಾಜಪ್ಪ ಹಾಗೂ ಈತನ ಸಂಬಂಧಿ ಗಳು ದೊಣ್ಣೆಯಿಂದ ಹಾಗೂ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವದೆಹಲಿ: ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಪಶ್ಚಿಮ ಏಷ್ಯಾದಲ್ಲಿ ರಾಷ್ಟ್ರಗಳ ಸ್ಥಿತಿ ಚಿಂತಾಜನಕವಾಗಿದೆ. ಯುದ್ಧದಿಂದ ಭಾರತದ ಮೇಲೆ ಪರಿಣಾಮ ಬೀರಿದೆ ಎಂದು ಪ್ರಧಾನಿ…
ಟೆಹರಾನ್: ಯುದ್ಧದ ಖರ್ಚು ನಿಭಾಯಿಸಲು ಸಂಚಾರ ಮಾಡುವ ವ್ಯಾಪಾರಿ ಹಡಗುಗಳಿಗೆ ಶುಲ್ಕ ವಿಧಿಸಲು ಇರಾನ್ ನಿರ್ಧರಿಸಿದೆ. ಹಾರ್ಮುಜ್ ಜಲಸಂಧಿ ಮೂಲಕ…
ಚಾಮರಾಜನಗರ: ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿರುವ ಹಿನ್ನೆಲೆಯಲ್ಲಿ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ…
ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ವೇಳೆ ದೇಶದ ಮೇಲಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರ ಸತತ ನಿಗಾ ವಹಿಸುತ್ತಿದ್ದು,…
ಸಾಲಿಗ್ರಾಮ: ಮೈಸೂರು ಜಿಲ್ಲೆಯ ಸಾಲಿಗ್ರಾಮ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾರ್ಚ್.25ರಂದು ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ…
ಹೊಸದಿಲ್ಲಿ: ಭಾರತದ ಯೂರಿಯಾ ಘಟಕಗಳು ಅರ್ಧದಷ್ಟು ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಮೂಲಗಳು ಹೇಳಿವೆ. ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಹೊರ್ಮುಜ್…