ಕಾನೂನು ಅಭಿಪ್ರಾಯ ಪಡೆದು ವಸತಿ ಸಮುಚ್ಛಯಗಳು, ವಾಣಿಜ್ಯ ಸಂಕೀರ್ಣಗಳಿಗೆ ಖಾತೆ ಮಾಡಲು ನಿರ್ಧಾರ
ಮೈಸೂರು: ನಗರಪಾಲಿಕೆ ವ್ಯಾಪ್ತಿುಂಲ್ಲಿ ಬೇಕಾಬಿಟ್ಟಿ ಓವರ್ ಹೆಡ್ ಕೇಬಲ್ ಅಳವಡಿಸಿರುವುದನ್ನು ಒಂದು ತಿಂಗಳಿನಲ್ಲಿ ತೆರವುಗೊಳಿಸುವ ಜತೆಗೆ ಪ್ರತಿ ಕಿ.ಮೀ.ಗೆ ಸುಮಾರು 6 ಓಪನ್ ಟ್ರಂಚ್ ಬಳಸಿ ಕೇಬಲ್ ಅಳವಡಿಸಲಾಗುತ್ತಿದ್ದು, ಪ್ರತಿ ಟ್ರಂಚ್‌ಗೆ 10 ಸಾವಿರ ರೂ.ನಂತೆ 1 ಕಿ.ಮೀ.ಗೆ 60 ಸಾವಿರ ರೂ. ದರ ನಿಗದಿಪಡಿಸಲು ಗುರುವಾರ ನಡೆದ ನಗರಪಾಲಿಕೆ ಕೌನ್ಸಿಲ್ ಸಭೆ ಅನುಮೋದನೆ ನೀಡಿತು.
ಎಚ್‌ಡಿಡಿ ಮೂಲಕ ಕೇಬಲ್ ಅಳವಡಿಸಲು ನಗರಪಾಲಿಕೆಯಲ್ಲಿ ದರ ನಿಗದಿಯಾಗಿತ್ತು. ಆದರೆ, ಎಚ್‌ಡಿಡಿ ಮೂಲಕ ಯುಜಿ ಕೇಬಲ್ ಅಳವಡಿಸುವಾಗ ಪ್ರತಿ ಕಿ.ಮೀ.ಗೆ ಸುಮಾರು ೬ ಓಪನ್ ಟ್ರಂಚ್‌ಗಳನ್ನು ತೆಗೆಯಲಾಗುತ್ತಿದೆ. ಆದ್ದರಿಂದ ಪ್ರತಿ ಟ್ರಂಚ್‌ಗೆ ೧೦ ಸಾವಿರ ರೂ.ನಂತೆ ಪ್ರತಿ ಕಿ.ಮೀ.ಗೆ ೬೦ ಸಾವಿರ ರೂ. ದರ ನಿಗದಿಪಡಿಸಲು ತೀರ್ಮಾನಿಸಲಾಯಿತು.
ಕೇಬಲ್ ಅಳವಡಿಕೆ ಸಕ್ರಮಕ್ಕೆ ಜ.೧೫ರ ಗಡುವು: ನಗರದಲ್ಲಿ ಕೇಬಲ್ ಅಳವಡಿಕೆ ಸಂಬಂಧ ನಗರಪಾಲಿಕೆಯಿಂದ ಅನುಮತಿ ಪಡೆಯಲು ಜ.೧೫ರ ಗಡುವು ನೀಡಲಾಗಿದೆ. ಇಂದಿನಿಂದ ಒಂದು ತಿಂಗಳೊಳಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಮೂರು ತಿಂಗಳಲ್ಲಿ ಯು.ಜಿ.ಕೇಬಲ್ ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ಕ್ರಮ ಕೈಗೊಳ್ಳುವುದಕ್ಕೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾನೂನು ಅಭಿಪ್ರಾಯನಂತರ ಅನುಷ್ಠಾನ: ನಗರಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಛಯಗಳು, ವಾಣಿಜ್ಯ ಸಂಕೀರ್ಣಗಳಲ್ಲಿ ನಗರಪಾಲಿಕೆಯಿಂದ ಪ್ರತಿ ಫ್ಲಾಟ್‌ಗಳಿಗೆ ಉಪ ನಂಬರ್ ಪಡೆದು ಪೂರ್ಣ ಪ್ರಮಾಣದಲ್ಲಿ ತೆರಿಗೆ ಪಾವತಿಸಲು ಸಾಧ್ಯವಾಗದ ಕಾರಣ ಕಾನೂನು ಅಭಿಪ್ರಾಯಪಡೆದು ಸ್ವತ್ತುಗಳಿಗೆ ಖಾತೆ ಮಾಡಿಕೊಡಲು ನಿರ್ಧರಿಸಲಾಯಿತು. .ಸಭೆಯಲ್ಲಿ ಉಪ ಮಹಾಪೌರ ಡಾ.ಜಿ. ರೂಪಾ,ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ ಹಾಜರಿದ್ದರು.
ನೀರಿನ ಶುಲ್ಕ ಏರಿಕೆಗೆ ಸರ್ವಾನುಮತದಿಂದ ಒಪ್ಪಿಗೆ
ನಾಲ್ಕು ಯೂನಿಟ್‌ಗಳು ಇರುವಂತಹ ಬಹುಮಹಡಿ ವಸತಿ ಸಮುಚ್ಛಯ ವಾಣಿಜ್ಯ, ಕೈಗಾರಿಕೆ ಕಟ್ಟಡಗಳಿಗೆ ಕುಡಿಯುವ ನೀರು ಸರಬರಾಜು ಬೇಡಿಕೆಯನ್ನು ಪೂರೈಸಲು ಮತ್ತು ಒಳಚರಂಡಿ ಸಂಪರ್ಕ ನೀಡಲು ಆಗುತ್ತಿರುವ ಹೊರೆಯನ್ನು ಪಾಲಿಕೆ ಭರಿಸುವುದು ಕಷ್ಟಕರವಾಗಿರುವ ಕಾರಣ ಆಯಾ ಕಟ್ಟಡಗಳ ಮಾಲೀಕರಿಂದ ಪ್ರತಿ ಯೂನಿಟ್‌ಗೆ ೫ ವ್ಯಕ್ತಿಗಳಂತೆ ಲೆಕ್ಕಚಾರ ಮಾಡಿ ಪ್ರೋರೇಟಾ ವೆಚ್ಚವನ್ನು ಹೆಚ್ಚಿಸಲು ತೀರ್ಮಾನಿಸಲಾಯಿತು.
ಕ್ಷೃಮೆಯಾಚನೆ ಪ್ರಹಸನ
ಮೈಸೂರು: ಕಳೆದ ಸಭೆಯಲ್ಲಿ ಮಾಜಿ ಮಹಾಪೌರ ಉಯೂಬ್‌ಖಾನ್ ಅವರು ನಿಮಗೆ ನಾಚಿಕೆ ಆಗಬೇಕು ಎಂದು ನೀಡಿದ್ದ ಹೇಳಿಕೆಗೆ ಕ್ಷೃಮೆ ಕೋರುವಂತೆ ಆಗ್ರಹಿಸಿ ಜಾ.ದಳ ಸದಸ್ಯರು ಗುರುವಾರದ ಸಭೆಯಲ್ಲಿ ಪಟ್ಟುಹಿಡಿದರು. ಅಲ್ಲದೆ ಎಂ.ಶ್ರೀನಿವಾಸ್ ಅವರು ಜಾ.ದಳ ಸದಸ್ಯರನ್ನು ಟೀಕಿಸಿದ್ದನ್ನು ಖಂಡಿಸಿದರು. ಈ ವೇಳೆ ಗದ್ದಲ ಉಂಟಾದ್ದರಿದ ಅರ್ಧ ಗಂಟೆ ಸಭೆ ಮುಂದೂಡಲಾಯಿತು.
ಸಭೆುಂ ಬಳಿಕ ಎಂ.ಶಿವಕುಮಾರ್ ಅವರು, ನನ್ನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಬಳಸಿದ ಪದವನ್ನು ಹಿಂಪಡೆಯುವುದಾಗಿ ಹೇಳಿದರು. ಆದರೆ, ಉಯೂಬ್‌ಖಾನ್ ನಾನು ಅಸಂವಿಧಾನಿಕ ಪದ ಬಳಸಿಲ್ಲವಾದ್ದರಿಂದ ಕ್ಷಮೆ ಕೋರುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಧ್ಯಪ್ರವೇಶಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಎಸ್‌ಬಿಎಂ ಮಂಜು, ಕಾಂಗ್ರೆಸ್‌ನವರು ಬರೀ ಸುಳ್ಳು ಹೇಳುತ್ತಾರೆ ಎಂದು ಟೀಕಿಸುವ ಮೂಲಕ ಸೇಡು ತೀರಿಸಿಕೊಂಡರು. ಆಗ ಇಬ್ಬರು ಕ್ಷೃಮೆ ಕೋರದೆ ಸಭೆ ಮುಂದುವರಿಸಿದರು.
‘ಸ್ಯಾಂಡಲ್ ವುಡ್’ ಎಂದೇ ಹೆಸರಾಗಿರುವ ಕನ್ನಡ ಚಿತ್ರರಂಗ ಇಂದು ಭಾರತದ ಒಂದು ಪ್ರಮುಖ ಚಿತ್ರೋದ್ಯಮವಾಗಿ ಬೆಳೆದಿದೆ. ಈ ಮೊದಲು ಪ್ರತಿ…
ಲಕ್ಷ್ಮಿಕಾಂತ್ ಕೊಮಾರಪ್ಪ ೨೦೨೩ರ ಡಿ.೪ರಂದು ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದ ಅರ್ಜುನ; ೨ ವರ್ಷ ಕಳೆದರೂ ಅರ್ಜುನನ ಸ್ಮಾರಕ, ಪ್ರತಿಮೆಗಿಲ್ಲ…
ಮೈಸೂರು: ಸಂಭ್ರಮ, ಸಡಗರ, ವಿಶೇಷ ಪ್ರಾರ್ಥನೆಯೊಂದಿಗೆ ಕ್ರೈಸ್ತ ಧರ್ಮದ ದೈವ ಬಾಲಏಸುವಿನ ಜಯಂತಿಯ ಸ್ಮರಣೆಯು ಅದ್ಧೂರಿಯಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ…
ಪ್ರಶಾಂತ್ ಎಸ್. ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸಮಸ್ಯೆ ಕಣ್ಣಿಗೆ ದೂಳು ಬಿದ್ದರೆ ಅನಾಹುತ ಸಾಧ್ಯತೆ ವಾಹನ ಸವಾರರಿಗೆ ಸವಾಲು; ಎಚ್ಚರ…
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…