ಒಂದು ಬೆಳೆ-ಒಂದು ಉತ್ಪನ್ನದಡಿ ಅರಿಶಿನ ಬೆಳೆ ಆಯ್ಕೆ
ರಾಜೇಶ್ ಬೆಂಡರವಾಡಿ
ಚಾಮರಾಜನಗರ: ಒಂದು ಜಿಲ್ಲೆ-ಒಂದು ಉತ್ಪನ್ನದಡಿ(ಒಡಿಒಪಿ) ಜಿಲ್ಲೆಯಲ್ಲಿ ಅರಿಶಿನ ಬೆಳೆ ಆಯ್ಕೆಯಾಗಿದ್ದು ಇದರ ಸಂಸ್ಕರಣಾ ಘಟಕ ನಗರ ಹೊರವಲುಂದ ಕೆವಿಕೆಯಲ್ಲಿ ಮುಂದಿನ ತಿಂಗಳು ಆರಂಭ ಆಗಲಿದೆ.
ಅರಿಶಿನ ಕೊಯ್ಲು ಮಾಡಿ ಈ ಘಟಕಕ್ಕೆ ತಂದುಹಾಕಿದರೆ ಅದು ಕ್ಲೀನ್, ಪಾಲಿಷ್ ಹಾಗೂ ತುಂಡುವಾಡಿ ಒಣಗಿಸುತ್ತದೆ. ಪೌಡರ್ ಸಹ ಮಾಡುತ್ತದೆ.
ರೈತರು ಅರಿಶಿನವನ್ನು ೧೦ರಿಂದ ೧೨ತಿಂಗಳು ಕಷ್ಟಪಟ್ಟು ಬೆಳೆಯುವುದಕ್ಕಿಂತ ಅದನ್ನು ಕ್ಲೀನ್ ಮಾಡಿ ಬೇಯಿಸಿ- ಒಣಗಿಸಿ ಮಾರಾಟ ಮಾಡುವುದು ದೊಡ್ಡ ತಾಪತ್ರಯವಾಗಿತ್ತು. ಇದಕ್ಕೆ ಸಾಕಷ್ಟು ಶ್ರಮ, ಸಮಯ ಹಿಡಿಯುತ್ತಿತ್ತು. ಹೀಗಾಗಿ ನೂತನ ಈ ಘಟಕ ಪ್ರಾರಂಭದಿಂದ ಅರಿಶಿನ ಬೆಳೆಗಾರರಿಗೆ ಅತ್ಯಂತ ಅನುಕೂಲವಾಗಲಿದೆ.
ಅರಿಶಿನ ಈ ಭಾಗದ ಮುಖ್ಯ ಬೆಳೆಗಳಲ್ಲಿ ಒಂದಾಗಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆತ್ಮನಿರ್ಭರ ಯೋಜನೆಗೆ ಬಲ ತುಂಬಲು ಒಂದುಬೆಳೆ-ಒಂದು ಉತ್ಪನ್ನದಡಿ ಜಿಲ್ಲೆಯಿಂದ ಅರಿಶಿನ ಬೆಳೆುಂನ್ನು ಆಯ್ಕೆ ಮಾಡಿ ಸುಮಾರು ೭೫ಲಕ್ಷ ರೂ. ವೆಚ್ಚದಲ್ಲಿ ಸಂಸ್ಕರಣ ಘಟಕ ಆರಂಭಿಸಲಾಗುತ್ತಿದೆ.
ಘಟಕದ ನಿರ್ವಹಣೆಯನ್ನು ನಿಯಮಾನುಸಾರ ಕಂಪನಿಯೊಂದಕ್ಕೆ ಟೆಂಡರ್ ನೀಡಲಾಗಿದ್ದು ಅವರು ಡಿಸೆಂಬರ್‌ನಲ್ಲಿ ಚಾಲನೆ ಕೊಡಲಿದ್ದಾರೆ. ಸಂಸ್ಕರಣೆಗೆ ಸಂಬಂಧಿಸಿದ ಯಂತ್ರಗಳನ್ನು ತಂದಿರಿಸಲಾಗಿದ್ದು ಜೋಡಣೆ ಮತ್ತು ವಿದ್ಯುತ್ ಸಂಪರ್ಕ ನೀಡುವುದು ಬಾಕಿ ಇದೆ. ಬೆಂಗಳೂರು ಕೃಷಿವಿಶ್ವವಿದ್ಯಾಲಯ ಇದರ ಜವಾಬ್ದಾರಿ ಹೊತ್ತಿದೆ.
ಅರಿಶಿನ ಸಂಸ್ಕರಣೆಯ ನಿಗಧಿತ ವೆಚ್ಚ ಪಾವತಿಸಿ ರೈತರು ಅಲ್ಲಿಯೇ ವ್ಯಾಪಾರಿಗಳಿಗೆ ಮಾರಾಟ ಮಾಡಲೂಬಹುದು. ಅಥವಾ ಬೇಕಾದಕಡೆ ತೆಗೆದುಕೊಂಡು ಹೋಗಬಹುದಾಗಿದೆ. ಪ್ರತಿ ಜಿಲ್ಲೆಯಿಂದ ಒಂದು ಉತ್ಪನ್ನ ಆಯ್ಕೆ ಮಾಡುವುದು, ಬ್ಯ್ರಾಂಡ್ ಮಾಡುವುದು ಮತ್ತು ಪ್ರಚಾರ ಮಾಡುವುದು ಆತ್ಮನಿರ್ಭರ ಯೋಜನೆಯ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಅರಿಶಿನವನ್ನು ಕೊಂಡೊಯ್ಯಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸಾಮಾನ್ಯವಾಗಿ ಅರಿಶಿನ ಕೊಯ್ಲು ಆರಂಭವಾಗುವುದು ಡಿಸೆಂಬರ್‌ನಲ್ಲಿ. ಈ ಸಮಯಕ್ಕೆ ಸರಿಯಾಗಿ ಸಂಸ್ಕರಣ ಘಟಕ ಪ್ರಾರಂಭಿಸಲಾಗುತ್ತಿದೆ. ಮೈಸೂರು, ಬಾಗಲಕೋಟೆ, ಬೀದರ್ ಇನ್ನಿತರ ಕಡೆಯೂ ಅರಿಶಿನ ಬೆಳೆಯಲಾಗುತ್ತದೆ. ಚಾ.ನಗರ ಅರಿಶಿನದಲ್ಲಿ ಹೆಚ್ಚಿನ ಕರಿಕ್ಯುಲಮ್ ಅಂಶ ಇರುವುದರಿಂದ ಮೊದಲಿಂದಲೂ ಇಲ್ಲಿಯು ಅರಿಶಿನಕ್ಕೆ ತುಂಬಾ ಬೇಡಿಕೆ. ಇಲ್ಲಿ ಬೆಳೆದ ಬಹುಪಾಲು ಅರಿಶಿನ ತಮಿಳುನಾಡು ಇನ್ನಿತರ ಕಡೆಗೆ ಮಾರಾಟವಾಗುತ್ತದೆ.
ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಕೆವಿಕೆ) ಅರಿಶಿನ ಸಂಸ್ಕರಣೆ ಘಟಕ ಡಿಸೆಂಬರ್‌ನಲ್ಲಿ ಕಾರ್ಯಾರಂಭ ಆಗಲಿದ್ದು ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಸಾಗಿವೆ.
-ಮೋಹನ್‌ಕುಮಾರ್ ಎ.ಬಿ.
ತೋಟಗಾರಿಕಾ ತಜ್ಞ, ಕೆವಿಕೆ.
ಸಂಸ್ಕರಣೆ ಘಟಕದಲ್ಲಿ ದಿನವೊಂದಕ್ಕೆ ಕನಿಷ್ಠ ೮ರಿಂದ ೧೦ಟನ್ ಅರಿಶಿನ ಸಂಸ್ಕರಣೆ ಮಾಡಬಹುದು. ೨೪ಗಂಟೆಯೂ ಯಂತ್ರ ಮುನ್ನಡೆಸಿದರೆ ೨೫ಟನ್ ಸಂಸ್ಕರಣೆ ಮಾಡಬಹುದು ಎಂದು ತಜ್ಞರೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದರು.
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಈ…
ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್ ಎಕ್ಸ್…
ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…
ಯಳಂದೂರು: ಚಿರತೆ ಸೆರೆಗಾಗಿ ಇಟ್ಟಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ 4 ತಾಸು ಒದ್ದಾಟ ನಡೆಸಿದ ಘಟನೆ ಯಳಂದೂರು ತಾಲ್ಲೂಕಿನ ಗಂಗವಾಡಿಯಲ್ಲಿ…
ಮೈಸೂರು: ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕಾದಾಟ ತೀವ್ರಗೊಳ್ಳುತ್ತಿದ್ದಂತೆ, ಅಹಿಂದ ಸಮಾವೇಶದ ಹೆಸರಿನಲ್ಲಿ ಭಾರೀ ರಾಜಕೀಯ ಚಟುವಟಿಕೆಗಳಿಗೆ ವೇಗ ಸಿಕ್ಕಿದೆ. ಮುಖ್ಯಮಂತ್ರಿ…
ಮೈಸೂರು: ಚಿರತೆಯೊಂದು ರಾತ್ರೋರಾತ್ರಿ ಬೀದಿ ನಾಯಿಯನ್ನು ಹೊತ್ತೊಯ್ದಿರುವ ಘಟನೆ ಮೈಸೂರಿನ ಹೊರವಲಯದ ಬೆಳಗಾವಿ ಗ್ರಾಮದಲ್ಲಿ ನಡೆದಿದೆ. ಮೈಸೂರು ಜಿಲ್ಲೆಯಲ್ಲಿ ಕಾಡು…