ಹಳ್ಳ ಬಿದ್ದು ಸರ್ಕಸ್ ಆಗಿರುವ ಸಂಚಾರ; ತ್ವರಿತವಾಗಿ ದುರಸ್ತಿಗೆ ಆಗ್ರಹ
ಪ್ರಸಾದ್ ಲಕ್ಕೂರು
ಚಾಮರಾಜನಗರ: ಗುಂಡ್ಲುಪೇಟೆ-ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ(೮೧) ತೀವ್ರ ಹದಗೆಟ್ಟು ವಾಹನಗಳ ಸಂಚಾರವು ದುಸ್ತರವಾಗಿದ್ದು, ಸವಾರರು ಪರದಾಡುತ್ತಿದ್ದಾರೆ.
ಸುವಾರು ೩೫ ಕಿ.ಮೀ. ಅಂತರದ ಈ ರಾಜ್ಯ ಹೆದ್ದಾರಿಯ ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿವೆ. ಪರಿಣಾಮ ವಾಹನಗಳು ಎದ್ದು ಬಿದ್ದು, ಓಲಾಡಿಕೊಂಡು ಸಂಚರಿಸುವಂತಾಗಿದೆ. ಕಳೆದ ೨ ತಿಂಗಳು ಆಗಾಗ ಸುರಿದ್ದ ಧಾರಾಕಾರ ಮಳೆಯಿಂದ ಮತ್ತಷ್ಟು ಹಾಳು ಬಿದ್ದು ಸಂಚಾರ ಎಂಬುದು ದುಸ್ತರವಾಗಿದೆ.
ಚಾಮರಾಜನಗರ ತಾಲ್ಲೂಕಿನ ಮೂಡ್ಲುಪುರ ಬಳಿ ಹೆದ್ದಾರಿಯ ಮಳೆಯಾದರೆ ಜಲಾವೃತಗೊಳ್ಳುತ್ತದೆ. ಈ ಗ್ರಾಮದ ಬಸ್ ನಿಲ್ದಾಣದ ಮುಂಭಾಗ ಹೆದ್ದಾರಿಯನ್ನು ಅಗೆದು ಹಳ್ಳ ಮಾಡಿದ್ದು ಮಳೆ ನೀರು ಕೊರೆದು ಮಂಡಿಯುದ್ದ ಹಳ್ಳ ಬಿದ್ದಿದೆ. ಬೈಪಾಸ್ ರಸ್ತೆ ಬಳಿಯೂ ಡಾಂಬರ್ ಕಿತ್ತು ಹೋಗಿ ಹಳ್ಳಬಿದ್ದಿದೆ. ಪಾಂಡಪುರ ಬಸ್ ನಿಲ್ದಾಣದ ತಿರುವಿನಲ್ಲಿ ರಸ್ತೆಯ ಅರ್ಧಭಾಗ ಡಾಂಬರು ಕಿತ್ತು ಹೋಗಿದೆ. ಹಳ್ಳಗಳು ನಿರ್ಮಾಣವಾಗಿದ್ದು ಇಲ್ಲಂತೂ ವಾಹನಗಳು ಸರ್ಕಸ್ ಮಾಡುತ್ತ ಸಂಚರಿಸಬೇಕು. ರಸ್ತೆ ಅಕ್ಕ ಪಕ್ಕ ನೀರು ಕೊರೆದು ಹಳ್ಳ ನಿರ್ಮಾಣವಾಗಿದೆ. ಶಿವಪುರದ ಸರ್ಕಾರಿ ಶಾಲೆಯ ಮುಂಭಾಗ ಹೆದ್ದಾರಿಗೆ ಹಾಕಿರುವ ಡುಬ್ಬದಲ್ಲಿ ಮತ್ತು ಸೇತುವೆ ಬಳಿ ಹೊಂಡ ನಿರ್ಮಾಣವಾಗಿದೆ. ಬಸ್ ನಿಲ್ದಾಣದ ಸಮೀಪ ಹೆದ್ದಾರಿಯಲ್ಲಿ ಡಾಂಬರು ಕಿತ್ತು ಹೋಗಿ ಹರಕಲು ಬಟ್ಟೆಯಂತಿದೆ. ಹಾಗೆಯೇ ಬಡಗಲಪುರ ತಿರುವಿನಲ್ಲಿ ದೊಡ್ಡ ದೊಡ್ಡ ಹಳ್ಳವಿದ್ದು ಸವಾರರು ಎದ್ದು ಬಿದ್ದು ವಾಹನ ಚಲಾಯಿಸಬೇಕಿದೆ.
ಉಡೀಗಾಲ ಸಮೀಪವಂತೂ ಹೆದ್ದಾರಿಯ ಸ್ಥಿತಿಯನ್ನು ಹೇಳುವುದೇ ಬೇಡ. ಗ್ರಾಮದ ಬಸ್ ನಿಲ್ದಾಣದಲ್ಲಿ ಹಳ್ಳ ಬಿದ್ದು ಫಜೀತಿಯಾಗುತ್ತಿದೆ. ತೆರಕಣಾಂಬಿ ಗ್ರಾಮದ ಸಾರಿಗೆ ಬಸ್ ನಿಲ್ದಾಣ, ಶಿಂಡನಪುರ ಸಮೀಪದ ಸೇತುವೆ ಬಳಿ ಹೆದ್ದಾರಿ ಎನ್ನಲಾಗದಷ್ಟು ಮಟ್ಟಿಗೆ ಕಿತ್ತು ಹೋಗಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಈ ಹೆದ್ದಾರಿಯಲ್ಲಿ ಪ್ರತಿನಿತ್ಯ ಬಸ್, ಲಾರಿ, ಕಾರು, ಟಿಪ್ಪರ್, ಬೈಕ್‌ಗಳಂತೂ ಲೆಕ್ಕವಿಲ್ಲದಷ್ಟು ಓಡಾಡುತ್ತವೆ. ಸಚಿವರು, ಶಾಸಕರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಸವಾರರು ಸಾಗುವುದು ಸಾವಾನ್ಯವಾಗಿ ಬಿಟ್ಟಿದೆ.
ಪದೇ ಪದೆ ಕಿತ್ತು ಬರುವ ಡಾಂಬರ್
ಉಡಿಗಾಲ ಬಸ್ ನಿಲ್ದಾಣ ಮತ್ತು ಪಾಂಡಪುರ ತಿರುವಿನಲ್ಲಿ ೨-೩ ಬಾರಿ ಡಾಂಬರ್ ಹಾಕಿದ್ದರೂ ಪದೇ ಪದೆ ಕಿತ್ತು ಹೋಗುತ್ತಿದೆ. ದುರಸ್ತಿ ಮಾಡಿದ ೨ ತಿಂಗಳ ಬಳಿಕ ಡಾಂಬರ್ ಇರುವುದಿಲ್ಲ. ಕಳಪೆಯಾಗಿ ತೇಪೆ ಹಚ್ಚುವುದರಿಂದ ಹಳ್ಳ ಹಿಡಿಯುತ್ತಿದೆ.
ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳಿಗೆ ಹೆದ್ದಾರಿಯ ದುಸ್ಥಿತಿ ಗೊತ್ತಿದ್ದರೂ ಶಾಶ್ವತ ಕ್ರಮ ವಹಿಸುತ್ತಿಲ್ಲ ಎಂದು ವಾಹನ ಸವಾರರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮಳೆಯಿಂದ ಹಾನಿಯಾಗಿರುವ ಚಾ.ನಗರ-ಗುಂಡ್ಲುಪೇಟೆ ಮುಖ್ಯ ರಸ್ತೆ ಸೇರಿದಂತೆ ಚಾಮರಾಜನಗರ ವಿಭಾಗದ ಹಲವು ರಸ್ತೆಗಳ ದುರಸ್ತಿಗೆ ಅನುದಾನ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ದೊರೆತ ತಕ್ಷಣ ರಿಪೇರಿ ಕೆಲಸ ಕೈಗೆತ್ತಿಕೊಳ್ಳಲಾಗುವುದು.
– ಆರ್.ಪಿ.ಕೆಂಪರಾಜು, ಲೋಕೋಪೋಂಗಿ ಇಲಾಖೆುಂ ಚಾ.ನಗರ ವಿಭಾಗದ ಎಇಇ
ಇತ್ತೀಚೆಗೆ ಈ ರಾಜ್ಯ ಹೆದ್ದಾರಿಯಲ್ಲಿ ಬೈಕ್, ಆಟೋ, ಕಾರು, ಬಸ್‌ಗಳಲ್ಲಿ ಸಂಚರಿಸುವವರು ಎಚ್ಚರದಿಂದ ಇರಬೇಕು. ಸ್ವಲ್ಪ ಯಾಮಾರಿದರೂ ಬಿದ್ದು ಗಾಯಗೊಳ್ಳಬೇಕಾಗುತ್ತದೆ. ಸಂಬಂಧಿಸಿದವರು ಬೇಗ ದುರಸ್ತಿಗೆ ಕ್ರಮ ವಹಿಸಬೇಕು.
– ರಾಜೇಶ್, ದೊಡ್ಡತುಪ್ಪೂರು.
ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ…
ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…
ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…
ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…
ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…
ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…