ವರದಿ: ಮಂಜು ಕೋಟೆ
ಎಚ್.ಡಿ.ಕೋಟೆ: ಪೈಪೋಟಿ, ಗೊಂದಲಗಳ ನಡುವೆ ೫ ಕೋಟಿ ರೂ. ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣಗೊಂಡಿರುವ ಕನಕ ಭವನವನ್ನು ಕನಕ ಜಯಂತಿಯಂದು ಸಾರ್ವಜನಿಕರ ಸೇವೆಗೆ ಸಿದ್ಧವಾಗಿದೆ.
ಪಟ್ಟಣದ ಹೃದಯ ಭಾಗದಲ್ಲಿರುವ ಗದ್ದಿಗೆ ಸರ್ಕಲ್ ಬಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರದೊಂದಿಗೆ ಜಿಲ್ಲೆಯಲ್ಲೇ ಕೋಟ್ಯಂತರ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕನಕ ಭವನ ಕೊನೆಗೂ ಸಾರ್ವಜನಿಕರ ಸೇವೆಗೆ ಸಿದ್ಧಗೊಳಿಸುವಲ್ಲಿ ತಾಲ್ಲೂಕು ಕುರುಬರ ಸಮಾಜದ ಅಧ್ಯಕ್ಷ ಮೊಳೆಐೂರು ಆನಂದ್ ಮತ್ತು ಆಡಳಿತ ಮಂಡಳಿಯವರು ಮುಂದಾಗಿದ್ದಾರೆ.
೧೯೯೪ರಲ್ಲಿ ಸವಾಜದ ಅಧ್ಯಕ್ಷರಾಗಿದ್ದ ವಡ್ಡರಗುಡಿ ರಾಮಸ್ವಾಮಿಯವರು ಒಂದೂವರೆ ಎಕರೆ ಜಾಗವನ್ನು ಸಂಘದಿಂದ ಖರೀದಿಸಿದ್ದರು. ತದನಂತರ ೨೦೧೩ರಲ್ಲಿ ಅಧ್ಯಕ್ಷರಾಗಿದ್ದ ಶಿವಪ್ಪ ಕೋಟೆ, ಕಾರ್ಯದರ್ಶಿ ಕೊಡಸೀಗೆ ರಾಜೇಗೌಡರ ಆಡಳಿತ ಮಂಡಳಿಯ ಪರಿಶ್ರಮದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಅವಧಿಯಲ್ಲಿ ಅತಿ ಹೆಚ್ಚು ಅನುದಾನ ಪಡೆದು ೫ ಕೋಟಿ ರೂ. ವೆಚ್ಚದ ಹೈಟೆಕ್ ಸಮುದಾಯ ಭವನ ನಿರ್ಮಾ ಣವಾಗಿದೆ.
ಭವನ ಮತ್ತು ಅಧ್ಯಕ್ಷರ ವಿಚಾರಗಳಿಗೆ ಸಂಬಂಧಿಸಿದಂತೆ ಶಿವಪ್ಪ ಕೋಟೆ ಬಣ ಮತ್ತು ಮೊಳೆಯೂರು ಆನಂದ್ ಬಣಗಳ ನಡುವೆ ಮುಸುಕಿನ ಗುದ್ದಾಟ ಮತ್ತು ಪೈಪೋಟಿ ಏರ್ಪಟ್ಟಿದ್ದವು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಕುರುಬರ ಸಮಾಜದ ಅಧ್ಯಕ್ಷ ಸುಬ್ರಹ್ಮಣ್ಯ, ಮರಿಗೌಡ, ಮಾಜಿ ಶಾಸಕ ಸೋಮಶೇಖರ್ ಸೇರಿದಂತೆ ಅನೇಕ ಮುಖಂಡರ ಸಮ್ಮುಖದಲ್ಲಿ ಅನೇಕ ಬಾರಿ ನಡೆದ ಸಭೆಯಲ್ಲಿ ಗೊಂದಲಗಳನ್ನೆಲ್ಲ ಬಗೆಹರಿಸಿ, ಎಲ್ಲರನ್ನೂ ಒಗ್ಗೂಡಿಸಿ ತಾಲ್ಲೂಕು ಅಧ್ಯಕ್ಷರನ್ನಾಗಿ ಆನಂದ್, ಜಿಲ್ಲಾ ಅಧ್ಯಕ್ಷರನ್ನಾಗಿ ಶಿವಪ್ಪ ಕೋಟೆ ಅವರನ್ನು ಆಯ್ಕೆ ಮಾಡಲಾಯಿತು.
ಭವನ ಉದ್ಘಾಟನೆಗೊಂಡಿದ್ದರೂ ಪೂರ್ಣ ಪ್ರಮಾಣದ ಸೌಲಭ್ಯಗಳಿಲ್ಲದ ಕಾರಣ ಸಮಾಜದ ಅಧ್ಯಕ್ಷ ಮೊಳೆಯೂರು ಆನಂದ್, ಚೆನ್ನೇಗೌಡ, ಶಿವಮಲ್ಲು , ಕುಮಾರೇಗೌಡ, ಪ್ರಕಾಶ್, ಕುವಾರ್, ಯತೀಶ್ ಕುಮಾರ್, ಗಿರೀಶ್, ಹಿರೇಗೌಡ , ಮರಳು ಬೀರೇಗೌಡ, ರಮೇಶ ಸೇರಿದಂತೆ ಆಡಳಿತ ಮಂಡಳಿ ಮತ್ತು ಮುಖಂಡರು ಒಗ್ಗೂಡಿ ಸುಮಾರು ೫೦ ಲಕ್ಷ ರೂ.ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿದ ಹಿನ್ನೆಲೆಯಲ್ಲಿ ಕನಕ ಜಯಂತಿಯಂದು ಸಾರ್ವಜನಿಕರ ಸೇವೆಗೆ ಕನಕಭವನ ಸಿದ್ಧಗೊಂಡಿದೆ. ಅತ್ಯುತ್ತಮ ಭವನ ನಿರ್ಮಾಣಗೊಂಡಿರುವುದರಿಂದ ಕ್ಷೇತ್ರದ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಘದವರು ಉತ್ತಮ ಕೆಲಸ ನಿರ್ವಹಿಸಿದಾಗ ಮಾತ್ರ ಕನಕ ಭವನಕ್ಕೆ ಮತ್ತು ಸಮಾಜಕ್ಕೆ ಗೌರವ ಸಿಕ್ಕಿದಂತಾಗಲಿದೆ.
ಕಳೆದೆರಡು ವರ್ಷಗಳಿಂದ ಕನಕ ಭವನದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಸಾರ್ವಜನಿಕರ ಸೇವೆಗೆ ಅನಾನುಕೂಲವಾಗಿತ್ತು. ನಾನು ಅಧ್ಯಕ್ಷನಾದ ಮೇಲೆ ಎಲ್ಲರ ಸಹಕಾರ ಪಡೆದುಕೊಂಡು ಸುಮಾರು ೩೫ ಲಕ್ಷ ರೂ. ವೆಚ್ಚದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. -ಮೊಳೆಯೂರು ಆನಂದ್, ಅಧ್ಯಕ್ಷರು, ತಾಲ್ಲೂಕು ಕುರುಬ ಸವಾಜ
ಟೆಹ್ರಾನ್ : ಇರಾನಿನ ಬಂದರುಗಳು ಸಾಗುವ ಸಮುದ್ರ ಸಂಚಾರದ ಮೇಲೆ ಅಮೆರಿಕ ಮಿಲಿಟರಿ ದಿಗ್ಬಂಧನವನ್ನು ನಿಗದಿತ ಗಡುವಿನಂತೆ ಆರಂಭಿಸಿದೆ. ಈ…
ನವದೆಹಲಿ : ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಆರೋಪ ಸಂಬಂಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಮಧ್ಯಂತರ…
ಬೆಂಗಳೂರು : ಪಕ್ಷದ ಶಾಸಕರು ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ಅನವಶ್ಯಕವಾಗಿ ಏನೇನೋ ಹೇಳಿಕೆ ನೀಡಿದರೆ ಶಿಸ್ತು ಕ್ರಮ…
ಚಾಮರಾಜನಗರ : ವಯನಾಡು ಸಂಸದೆ ಪ್ರಿಯಾಂಕ ವಾದ್ರಾ ಅವರು ಬಂಡೀಪುರ ರಾತ್ರಿ ಸಂಚಾರ ನಿಷೇಧ ಮುಕ್ತ ಮಾಡುವುದಾಗಿ ಹೇಳಿರುವುದು ಮತ್ತು…
ಮಡಿಕೇರಿ : ಕಾಡಾನೆ ಮರಿಯೊಂದು ಬಾವಿಗೆ ಬಿದ್ದು ನರಳಾಡಿದ ಘಟನೆ ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಪೆರಾಜೆ ಸಮೀಪದ ಕಲ್ಚೆರ್ಪೆಯಲ್ಲಿ…
ಟೆಹ್ರಾನ್ : ಕದನ ವಿರಾಮ ಒಪ್ಪಂದಕ್ಕೆ ಬರಲು ವಿಫಲವಾದ ನಂತರ, ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳಿಗೆ ದಿಗ್ಬಂಧನ ವಿಧಿಸುವುದಾಗಿ…