ಜಿಲ್ಲೆಗಳು

ತಂಬಾಕು ಹುಡಿಗೂ ಹೆಚ್ಚಿದ ಬೇಡಿಕೆ; ರೈತರಲ್ಲಿ ಸಂತಸ

ತಂಬಾಕು ಮಾರುಕಟ್ಟೆಯಲ್ಲೇ ಮಾರಾಟ ಮಾಡಲು ರೈತರಿಗೆ ಅಧಿಕಾರಿಗಳ ಸಲಹೆ

ಎಂ.ಯೋಗಾನಂದ
ಹುಣಸೂರು: ಈ ವರ್ಷ ತಂಬಾಕು ಬೆಳೆದ ರೈತನಿಗೆ ಸಮಾಧಾನ ತಂದಿದ್ದು, ಬೆಳೆದ ತಂಬಾಕಿಗೆ ಹಾಗೂ ತಂಬಾಕು ಹದಗೊಳಿಸುವಾಗ ಉದುರುವ ಹುಡಿಗೂ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗಿದ್ದು, ತಂಬಾಕು ಇರುವ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಈಚಿನ ವರ್ಷಗಳಲ್ಲಿ ತಂಬಾಕಿಗೆ ಉತ್ತಮ ಬೆಲೆ ದೊರೆಯದೆ ರೈತರು ಸಂಕಷ್ಟಕ್ಕೀಡಾಗಿದ್ದರು. ಈ ವರ್ಷ ನಿರೀಕ್ಷೆಗಿಂತ ಹೆಚ್ಚಾಗಿ ಮಾರಾಟವಾಗುತ್ತಿರುವ ತಂಬಾಕಿನ ಬೆಲೆ ಒಂದೆಡೆಯಾದರೆ ತಂಬಾಕು ಹುಡಿಗೂ ಬೇಡಿಕೆ ಹೆಚ್ಚಾಗಿದೆ.
ಕೆಲವು ವರ್ಷಗಳಿಂದ ಹುಡಿಗೆ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ ನೀಡದೆ ರೈತರು ಮನೆಯ ಹತ್ತಿರ ಸಣ್ಣ ವ್ಯಾಪಾರಿಗಳಿಗೆ ಮಾರಾಟ ಮಾಡಿ ಕೈ ತೊಳೆದುಕೊಳ್ಳುತ್ತಿದ್ದರು. ಆದರೆ ಕೆಲವು ವರ್ಷಗಳಿಂದ ಹುಡಿಯನ್ನು ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡಲು ಅವಕಾಶ ಕೊಡಿ ಎಂಬ ರೈತರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಅದಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ.

ಈಗ ಉತ್ತಮ ದರ್ಜೆಯ ತಂಬಾಕಿಗೆ ಸರಾಸರಿ ೨೫೦ ರೂ.ತನಕವೂ ದೊರೆಯುತ್ತಿದೆ. ರೈತರು ನೀರು ಹಾಕದೆ ಹಾಗೂ ಅನ್ಯ ಪದಾರ್ಥಗಳನ್ನು ಸೇರಿಸದೆ ಚೆನ್ನಾಗಿ ಬೇಲ್ ಮಾಡಿಕೊಂಡು ಬಂದರೆ ಇದೇ ಬೆಲೆ ಕೊಡಿಸಲು ಸಹಕಾರಿಯಾಗುತ್ತದೆ ಎಂದು ತಂಬಾಕು ಮಂಡಳಿಯ  ಪ್ಲಾಟ್ ಫಾರಂ ನಂ. ೨ರ ಹರಾಜು ಅಧೀಕ್ಷಕ ಧನ್‌ರಾಜ್ ತಿಳಿಸಿದರು.

ತಂಬಾಕು ಹುಡಿಗೆ ಉತ್ತಮ ಬೇಡಿಕೆ ಇರುವುದರಿಂದ ಒಳ್ಳೆಯ ಬೆಲೆಗೆ ಮಾರಾಟವಾಗಿದೆ. ರೈತರು ಮುಂದಿನ ದಿನಗಳಲ್ಲಿ ಅನ್ಯ ಪದಾರ್ಥಗಳನ್ನು ಸೇರಿಸದೆ ಚೆನ್ನಾಗಿ ಬೇಲ್ ಮಾಡಿಕೊಂಡು ಬರಬೇಕು. ರೈತರು ಹೊರಗಡೆ ಹುಡಿಯನ್ನು ಮಾರಾಟ ಮಾಡಬಾರದು ಎಂದು ಆದಿನಾರಾಯಣ ಎಂಟರ್‌ಪ್ರೈಸಸ್ ಕಂಪೆನಿ ಅಧಿಕಾರಿ ಕೂಸಪ್ಪ ಸಲಹೆ ನೀಡಿದರು.

ಹಿಂದೆ ಹುಡಿಯನ್ನು ಕೆ.ಜಿ.ಗೆ ೧೫-೨೦ ರೂ. ಗಳಿಗೆ ಮನೆಯ ಹತ್ತಿರ ಮಾರಾಟ ಮಾಡಿಕೊಳ್ಳುತ್ತಿದ್ದೆವು. ಆದರೆ ಈ ವರ್ಷ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿರುವುದರಿಂದ ಉತ್ತಮ ಬೆಲೆ ಸಿಕ್ಕಿದೆ. ೧೩೦-೧೪೦ ರೂ.ತನಕ ದೊರೆಯುತ್ತಿದೆ. ಇದರಿಂದ ಖುಷಿಯಾಗುತ್ತಿದೆ. ಇದೇ ಬೆಲೆಯನ್ನು ಮುಂದೆುಯೂ ಕೊಟ್ಟರೆ ರೈತರಿಗೆ ಅನುಕೂಲವಾಗುತ್ತದೆ.

-ತಾಜು, ತಂಬಾಕು ಬೆಳೆಗಾರ

andolanait

Recent Posts

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

45 mins ago

ಓದುಗರ ಪತ್ರ: ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಿಯಂತ್ರಿಸಿ

ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…

47 mins ago

ಓದುಗರ ಪತ್ರ: ಸರ್ಕಾರಿ ಕಚೇರಿಗಳ ಅನಗತ್ಯ ಬಾಡಿಗೆ ವೆಚ್ಚಗಳನ್ನು ತಪ್ಪಿಸಿ

ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…

49 mins ago

ರಂಗದ ಮೇಲೆ ಜಿನುಗಿದ ಜೀವಸೆಲೆ

ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…

52 mins ago

ಸಮವಸ್ತ್ರದ ಆತ್ಮಸಾಕ್ಷಿ ಮತ್ತು ಮೂರು ಪ್ರಜ್ಞೆಗಳು

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು  ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…

57 mins ago

ದಸರಾ ಕಾರ್ಯಕ್ರಮಕ್ಕೆ ಸವಾಲಾದ ಬಸ್ ಸೇವೆ

ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…

1 hour ago