ಗುಂಡ್ಲುಪೇಟೆ: ತಾಲ್ಲೂಕಿನ ಕೊಡಸೋಗೆ, ಸೋಮನಪುರ ಸಮೀಪ ಜಮೀನಿನಲ್ಲಿ ಹುಲಿ ಹಾಗೂ ಮರಿ ಬೀಡುಬಿಟ್ಟಿರುವುದನ್ನು ಕಂಡು ಆತಂಕಗೊಂಡಿರುವ ರೈತರು ಕೂಡಲೇ ಹುಲಿ ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಕೊಡಸೋಗೆ ಗ್ರಾಮದ ರವಿ ಎಂಬವರು ತಮ್ಮ ಪತ್ನಿ ಹಾಗೂ ಮಗನ ಜತೆಗೂಡಿ ತಮ್ಮ ಜಮೀನಿಗೆ ತೆರಳಿದ್ದಾಗ ಮುಸುಕಿನ ಜೋಳದ ನಡುವೆ ಕಾಡುಹಂದಿಯ ಕಳೇಬರ ಕಣ್ಣಿಗೆ ಬಿದ್ದಿದೆ. ಹತ್ತಿರ ಹೋಗಿ ಪರಿಶೀಲಿಸಿದಾಗ ಯಾವುದೋ ಪ್ರಾಣಿ ಅರ್ಧ ದೇಹ ತಿಂದಿರುವುದು ಖಚಿತವಾಗುತ್ತಿದ್ದಂತೆ ಅಲ್ಲಿಯೇ ಇದ್ದ ಹುಲಿ ಜೋರಾಗಿ ಘರ್ಜಿಸಿದೆ. ಕೂಡಲೇ ದಿಕ್ಕಾಪಾಲಾಗಿ ಓಡಿ ಗ್ರಾಮದವರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ರೈತರು ಅಕ್ಕಪಕ್ಕದ ಮರಗಳನ್ನು ಹತ್ತಿ ಜೋಳದ ಹೊಲದಲ್ಲಿ ತಾಯಿ ಹಾಗೂ ಒಂದು ಮರಿ ಹುಲಿ ಇರುವುದನ್ನು ಕಂಡು ಖಚಿತವಾದ ಕೂಡಲೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಮಧ್ಯಾಹ್ನ ಸುಮಾರು ೧ ಗಂಟೆ ವೇಳೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾದರು. ಕಳೆದ ಮೂರು ವರ್ಷಗಳಿಂದ ಹುಲಿ ಈ ಪ್ರದೇಶದಲ್ಲಿಯೇ ಸುತ್ತಾಡುತ್ತಾ ಜಾನುವಾರುಗಳನ್ನು ಕೊಲ್ಲುತ್ತಿದ್ದರೂ ಅದರ ಸೆರೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬೆಳಿಗ್ಗೆಯೇ ಮಾಹಿತಿ ನೀಡಿದರೂ ಇನ್ನೂ ಸ್ಥಳಕ್ಕೆ ಹುಲಿ ಯೋಜನೆಯ ನಿರ್ದೇಶಕರು ಆಗಮಿಸಿಲ್ಲ. ಕೂಡಲೇ ಹುಲಿ ಸೆರೆಹಿಡಿಯಲು ಕ್ರಮಕೈಗೊಳ್ಳಿ. ಇಲ್ಲದಿದ್ದರೆ ನಾವೇ ಓಡಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್‌ಸ್ಪೆಕ್ಟರ್ ಕಿರಣ್ ಕುಮಾರ್, ಎಸ್‌ಐ ಮಂಜುನಾಥ ನಾಯಕ್ ಉದ್ರಿಕ್ತ ಜನರನ್ನು ನಿಯಂತ್ರಿಸಿ ಜಮೀನಿನಿಂದ ದೂರಕ್ಕೆ ಕಳುಹಿಸಿದರು.
ಗುಂಡ್ಲುಪೇಟೆ ಬಫರ್ ವಲಯದ ಆರ್‌ಎಫ್‌ಒ ಎನ್.ಪಿ.ನವೀನ್ ಕುಮಾರ್ ಮಾತನಾಡಿ, ಈ ಹುಲಿ ಸೆರೆಹಿಡಿಯಲು ಅನುಮತಿ ಕೊಡುವಂತೆ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕರಿಗೆ ಹತ್ತು ದಿನಗಳ ಹಿಂದೆಯೇ ಪತ್ರ ಬರೆಯಲಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ಸರ್ಕಾರಗಳ ಅನುಮತಿ ದೊರೆತ ಕೂಡಲೇ ಸೆರೆ ಕಾಂರ್ಾಚರಣೆ ಕೈಗೊಳ್ಳಲಾಗುವುದು ಎಂದರು.
ಜಮೀನಿನಲ್ಲಿರುವ ಹುಲಿ ಸೆರೆ ಹಿಡಿಯಲು ಆಗಲ್ಲ ಎನ್ನುವ ಅರಣ್ಯ ಅಧಿಕಾರಿಗಳು ರೈತರ ಮೇಲೆ ದಾಳಿ ಮಾಡಿ ಕೊಂದು ಹಾಕಿದರೆ ಮತ್ತೆ ಅವರ ಪ್ರಾಣ ತಂದು ಕೊಡಲು ಸಾಧ್ಯವೇ? ಕೂಡಲೆ ಹುಲಿ ಸೆರೆ ಹಿಡಿದು ಕಾಡಿಗೆ ಬಿಡಬೇಕು. -ರಮೇಶ್ ಕೊಡಸೋಗೆ, ಯುವ ಮುಖಂಡ
ಪಟಾಕಿ ಹೊಡೆದುಕೊಂಡು ಜೀಪ್‌ಗಳ ಮುಲಕ ಸೈರನ್ ಹಾಕಿ ಕಾಡಿಗೆ ಹುಲಿಯನ್ನು ಅಟ್ಟಲಾಗಿದೆ. ಈ ಬಗ್ಗೆ ಖಚಿತತೆಗಾಗಿ ಕೂಂಬಿಂಗ್ ಮಾಡಲಾಗುತ್ತಿದೆ. ಎಲ್ಲಿಯೂ ಹುಲಿ ಕಾಣಿಸಿಕೊಂಡಿಲ್ಲ. -ನವೀನ್ ಕುಮಾರ್, ಆರ್‌ಎಫ್‌ಒ, ಬಫರ್ ಜೋನ್ ವಲಯ, ಗುಂಡ್ಲುಪೇಟೆ
ವಡೆಯನಪುರ ಸಮೀಪದ ಕೆರೆ ಒಡೆಯುವ ಆತಂಕ; ಏರಿಯನ್ನು ದುರಸ್ತಿಪಡಿಸಲು ಒತ್ತಾಯ • ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ವಡೆಯನಪುರದ ಸಮೀಪವಿರುವ…
• ರಮೇಶ್ ಪಿ.ರಂಗಸಮುದ್ರ ಪಕ್ಷಿಗಳಿಗೂ ಕೃಷಿಗೂ ಅವಿನಾಭಾವ ಸಂಬಂಧವಿದೆ. ಪಕ್ಷಿಗಳು ಮಾನವನಿಗಿಂತಲೂ ಹೆಚ್ಚಾಗಿ ಪ್ರಕೃತಿಯೊಡನೆ ಬೆರೆತಿವೆ. ಸಸ್ಯ ವೈವಿಧ್ಯತೆಯ ನಡುವೆ…
ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಗೆ 100 ರೂ. ಹಾಗೂ ಹೋಳಾದ ಕೊಬ್ಬರಿಗೆ 420 ರೂ. ದರ ಹೆಚ್ಚಿಸಲಾಗಿದೆ ಎಂದು ಕೇಂದ್ರ…
• ಜಿ.ಕೃಷ್ಣ ಪ್ರಸಾದ್ ಕಾವೇರಿ ಬಯಲಿನಲ್ಲಿ ಭತ್ತದ ಕಟಾವು ಶುರುವಾಗಿದೆ. ದೈತ್ಯ ಗಾತ್ರದ ಕಟಾವು ಯಂತ್ರಗಳು ಗದ್ದೆಗೆ ಲಗ್ಗೆ ಇಟ್ಟಿವೆ.…
ರಾಜ್ಯ ಬಿಜೆಪಿಯ ಆಂತರಿಕ ಸಂಘರ್ಷ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ಕಡೆ ಪಕ್ಷಾಧ್ಯಕ್ಷ ವಿಜಯೇಂದ್ರ ಅವರ ಬಣ ಮತ್ತೊಂದು ಕಡೆ…
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಹೆಸರಿನಲ್ಲಿ ವರ್ಷಕ್ಕೊಮ್ಮೆ ಬೆಳಗಾವಿಯಲ್ಲಿ ನಡೆಸುವ ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕದ ಹಿರಿಯರ ಮನೆ ಎಂದೇ ಕರೆಯಲಾಗುವ…