ಮೈಸೂರು : ನಮ್ಮ ಸಂಸ್ಕೃತಿ ಕಲೆ, ಸಂಪ್ರದಾಯದ, ಧಾರ್ಮಿಕತೆಯ ಬಗ್ಗೆ ಹೊರಗಿನ ಜನರಿಗೆ ತಿಳಿಸಿ ಅದು ಎಲ್ಲೆಡೆಯು ಚರ್ಚೆಯಾಗುವಂತೆ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್. ಸಿ ಮಹದೇವಪ್ಪನವರು ಹೇಳಿದರು.
ಇಂದು ಮಾನಸ ಗಂಗೋತ್ರಿಯ ಕ್ಲಾಕ್ ಟವರ್ ಬಳಿ ಆಯೋಜಿಸಿದ್ದ ಮೈಸೂರು ಫೆಸ್ಟ್ ಚಿತ್ರಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೈಸೂರಿನ ಹಬ್ಬದ ಜಾತ್ರೆಯನ್ನು ಪ್ರವಾಸೋದ್ಯಮ ಇಲಾಖೆಯವರು ಪ್ರಾರಂಭಿಸಿದ್ದಾರೆ.ನಗರ ಸಭೆ ,ಪುರಸಭೆ ,ನಗರ ಪಟ್ಟಣದಲ್ಲಿ ಸಂಚರಿಸಿ ಕಲೆ, ವಿನ್ಯಾಸ, ಚಿತ್ರಸಂತೆ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಸಬೇಕು ಎಂದರು.ಮೈಸೂರು ಫೆಸ್ಟ್ ಅನ್ನು ಬ್ರಾಂಡ್ ಮೈಸೂರು ಫೆಸ್ಟ್ ಆಗಿ ಮಾಡಬೇಕು.
ದೇಶ ಸುತ್ತಿ ಕೋಶ ಓದು ಎಂಬ ಮಾತಿನಂತೆ ಎಲ್ಲದರ ಬಗ್ಗೆಯೂ ತಿಳಿದುಕೊಳ್ಳಬೇಕು. ಈ ಹಬ್ಬ ನಿರಂತರವಾಗಿ ನಡೆಯಬೇಕು ಇದರಿಂದ ಕಲಾವಿದರಿಗೆ ಹೆಚ್ಚಿನ ಅವಕಾಶ ಸಿಗುವಂತೆ ಆಗುತ್ತದೆ ಎಂದರು.
ಇಂದು ರಾಷ್ಟ್ರಕ್ಕೆ 75 ನೇ ಗಣರಾಜ್ಯೋತ್ಸವ ಇದು ಜನರ ಉತ್ಸವ ಜನರ ಅನಿಸಿಕೆಗಳನ್ನ ಹೇಳಿಕೊಳ್ಳುವುದಕ್ಕೆ ನಮಗೆ ನಾವೇ ಸಂವಿಧಾನವನ್ನ ರಚಿಸಿಕೊಂಡ ದಿನ.
ಸಂವಿಧಾನದ ಎಲ್ಲಾ ತತ್ವಗಳು ಯಥಾವತ್ತಾಗಿ ಜಾರಿಯಾದರೆ ಜಾತ್ಯತೀತ, ಸಮಾಜವಾದಿ, ಸಾರ್ವಭೌವ, ಗಣತಂತ್ರವಾದ ಸಂವೃದ್ಧ ಭಾರತ ನಿರ್ಮಾಣವಾಗಲಿದೆ.
ಇದನ್ನು ಅಳವಡಿಸಿಕೊಂಡರೆ ಯಾವುದೇ ಬೇಧ-ಭಾವ ಇಲ್ಲದೆ ಎಲ್ಲಾ ಯುವ ಮನಸ್ಸುಗಳನ್ನು ಒಂದೆಡೆ ತರುವ ಸಂವಿಧಾನ ಜಾಗೃತಿ ಸಮಾವೇಶವನ್ನು ಮಾಡುತ್ತಿದ್ದೇವೆ.
ಇದಕ್ಕೆ ಎಲ್ಲರೂ ಸಹಕರಿಸಬೇಕು. ಭಾರತದಲ್ಲಿ ವಾಸಿಸುತ್ತಿರುವ 140 ಕೋಟಿ ಜನರು ಭಾರತೀಯರೇ ಅದನ್ನು ಒತ್ತಿ ಹೇಳುವ ಸಂವಿಧಾನವನ್ನು ಅಳವಡಿಸಿಕೊಳ್ಳಬೇಕು.
ಸಂವಿಧಾನ ಎಲ್ಲರನ್ನು ರಕ್ಷಿಸಲು ಇದೆ ಇದು ಯಾವುದೇ ಜಾತಿ, ಸಮುದಾಯದ ರಕ್ಷಣೆಗೆ ಸೀಮಿತವಾಗಿಲ್ಲ ಎಂದು ಹೇಳಿದರು.
ಜಿಲ್ಲಾಧಿಕಾರಿಗಳಾದ ಕೆ.ವಿ ರಾಜೇಂದ್ರ ಅವರೂ ಮಾತನಾಡಿ ಮೈಸೂರು ದಸರಾ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಯಬೇಕಿತ್ತು. ಕಾರಣಾಂತರಗಳಿಂದ ಮಾಡಲು ಸಾಧ್ಯವಾಗಲಿಲ್ಲ.
ಆದರೆ ಈ ಸಮಯದಲ್ಲಿ ಪ್ರವಾಸೋದ್ಯಮ ಇಲಾಖೆಯೊಂದಿಗೆ ಕೈಜೋಡಿಸಿ ಟೂರಿಸಮ್ ಕ್ಯಾಲೆಂಡರ್ ಅನ್ನು ಹೊರತರುತ್ತಿದ್ದೇವೆ. ಈ ಉತ್ಸವವು ಸ್ಥಳೀಯ ಹಾಗೂ ಅಂತರ ರಾಷ್ಟೀಯ ಕಲಾವಿದರ ಮಾರುಕಟ್ಟೆಗೆ ಅವಕಾಶ ಕಲ್ಪಿಸಿಕೊಟ್ಟಿದೆ.
ಇಂದಿನ ಯುವಜನರಿಗೆ ನಮ್ಮ ಕಲೆಯ ಹಾಗೂ ಸಂಸ್ಕೃತಿಯ ಬಗ್ಗೆ ತಿಳಿಸಿ
ಕೊಡಲು ಮೈಸೂರು ಫೆಸ್ಟ್ ಒಂದು ಬ್ರಿಡ್ಜ್ ಆಗಿದೆ.ದಸರಾ ಸಂದರ್ಭದಲ್ಲಿ ಪ್ರವಾಸಿ ಚಟುವಟಿಕೆಗಳಿಗಾಗಿ ಬಿಡುಗಡೆಯಗಿದ್ದ ಹಣವನ್ನು ಈ ಸಂದರ್ಭದಲ್ಲಿ ಬಳಸಿಕೊಂಡು ಚಿತ್ರಸಂತೆ, ಸ್ಥಳೀಯ ಕಲೆಗಳ ಪ್ರದರ್ಶನ, ಆಹಾರಮೇಳ ಹಾಗೂ ಮೂರು ದಿನಗಳು ವಿಶ್ವ ಪ್ರಸಿದ್ಧ ಅಂತರ್ರಾಷ್ಟ್ರೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮಗಳು ನಡೆಯುತ್ತಿದ್ದು ಮೈಸೂರು ದಸರಾ ಮಾರುಕಳುಹಿಸುತ್ತಿದೆ ಎಂದರೆ ತಪ್ಪಾಗಲಾರದು.
ಬಂದಿರುವಂತಹ ಪ್ರವಾಸಿಗರಿಗೆ ಮೈಸೂರಿನ ಎನ್ನಷ್ಟು ವಿಶೇಷ ವಿಷಯಗಳನ್ನು ತಿಳಿದುಕೊಳ್ಳಲು ಇದು ಸಹಕಾರಿಯಾಗಲಿದೆ. ಮೈಸೂರು ಜನತೆ ಕಾರ್ಯಕ್ರಮದಲ್ಲಿ ಭಾಗವಸಿಯುತ್ತಿರುವ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಕಲಾವಿದರ ಕಲೆಯನ್ನ ಬೆಳೆಸಿ ಪ್ರೋತ್ಸಾಹ ನೀಡಬೇಕು.
ಮಕ್ಕಳಲ್ಲಿರುವ ಕಲೆಯನ್ನ ಅನಾವರಣ ಮಾಡುವ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ ಇದ್ದಕ್ಕೆ ಎಲ್ಲರೂ ಸಹಕರಿಸಬೇಕು.
ಫೆಸ್ಟ್ ಅನ್ನು ಯಶಸ್ವಿಯಾಗಿ ಮಾಡುವುದರ ಮೂಲಕ ನಿರಂತರವಾಗಿ ನಡೆಯಲು ಪ್ರೋತ್ಸಾಹ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಸದಸ್ಯರಾದ ತನ್ವಿರ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಮರೀತೀಬ್ಬೆಗೌಡ, ಮೈಸೂರು ಜಿಲ್ಲಾಧಿಕಾರಿಗಳಾದ ಡಾ. ಕೆ. ವಿ ರಾಜೇಂದ್ರ, ಜಿಲ್ಲಾ ಪೊಲೀಸ್ ಆಯುಕ್ತರಾದ ರಮೇಶ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಾ. ಕೆ. ಎಂ ಗಾಯಿತ್ರಿ, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಕೆ ಎಂ ಸವಿತಾ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ. ಕೆ ಹರೀಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ…
ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಕಾಂಗ್ರೆಸ್…
ಮೈಸೂರು: ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡುತ್ತಿರುವವರು ಯಾರು ಅನ್ನೋದು ಗೊತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ. ಮುಡಾ ಪ್ರಕರಣಕ್ಕೆ…
ನವದೆಹಲಿ: ಸಂಸತ್ ಭವನದ ಸಂಕೀರ್ಣದಲ್ಲಿ ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ…
ಬೆಳಗಾವಿ: ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ವಿರುದ್ಧ ದೇಶಾದ್ಯಂತ ವ್ಯಾಪಕ…
ಬೆಳಗಾವಿ: ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ…