ಜಿಲ್ಲೆಗಳು

ನಿರ್ವಹಣೆ ಕಾಣದೆ ಸೊರಗಿದೆ ತಾತಯ್ಯ ಉದ್ಯಾನ

ನಿರ್ವಹಣೆಯಿಲ್ಲದೆ ವಾಕಿಂಗ್ ಪಾಥ್‌ನಲ್ಲಿ ಬೆಳೆದಿರುವ ಗರಿಕೆ; ಉದ್ಯಾನದ ಒಳಗೆ ಎಲ್ಲೆಂದರಲ್ಲಿ ಬಿದ್ದಿದೆ ಕಸದ ರಾಶಿ

ವರದಿ: ಗಿರೀಶ್ ಹುಣಸೂರು

ಮೈಸೂರು: ನಗರದ ಸ್ವಚ್ಛತೆಯ ಹೊಣೆ ಹೊತ್ತ ಮೈಸೂರು ಮಹಾನಗರಪಾಲಿಕೆಯ ಕೂಗಳತೆ ದೂರದಲ್ಲಿರುವ ತಾತಯ್ಯ ಉದ್ಯಾನವನ ಸೂಕ್ತ ನಿರ್ವಹಣೆ ಕಾಣದೆ ಸೊರಗಿದೆ. ನಗರದ ಹೃದಯ ಭಾಗದಲ್ಲಿರುವ ಈ ಉದ್ಯಾನವನದ ಅವ್ಯವಸ್ಥೆಯನ್ನು ಕಂಡು ಪ್ರವಾಸಿಗರು ಮೂಗು ಮುರಿಯುವಂತಾಗಿದೆ.

ಮೈಸೂರು ಅರಸರ ಆಳ್ವಿಕೆಯ ಕಾಲದಲ್ಲಿ ಮೈಸೂರು ನಗರವನ್ನು ವ್ಯವಸ್ಥಿತವಾಗಿ ಕಟ್ಟಿ ಬೆಳೆಸಲು ದುಡಿದ ಹಲವು ಮಹನೀಯರಲ್ಲಿ ದಯಾಸಾಗರ ಎಂ.ವೆಂಕಟ ಕೃಷ್ಣಯ್ಯ ಪ್ರಮುಖರು. ಸ್ವಾತಂತ್ರ್ಯಪೂರ್ವದಲ್ಲೇ ಶಿಕ್ಷಣದ ಮಹತ್ವವನ್ನು ಸಾರುವ ಮೂಲಕ ಸ್ವತಃ ಅಧ್ಯಾಪಕರಾಗಿ ಹಲವು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮೈಸೂರು ನಗರದಲ್ಲಿ ಜನ ಜಾಗೃತಿ ಉಂಟು ಮಾಡುವ ಸಲುವಾಗಿ ಹತ್ತಾರು ಪತ್ರಿಕೆಗಳನ್ನು ಆರಂಭಿಸಿದ್ದಲ್ಲದೆ, ಪ್ರಜಾ ಪ್ರತಿನಿಧಿ ಸಭಾ, ನ್ಯಾಯ ವಿದಾಯಕ ಸಭೆ, ಪೌರಸಭೆಗಳಲ್ಲಿ ಪ್ರತಿನಿಧಿಯಾಗಿ ಜನಪರವಾಗಿ ದುಡಿದ ಅವರ ಬಹುಮುಖ ಸೇವೆಯಿಂದಾಗಿ ವೆಂಕಟಕೃಷ್ಣಯ್ಯ ಅವರನ್ನು ಜನಸಾಮಾನ್ಯರು ದಯಾ ಸಾಗರ, ವೃದ್ಧ ಪಿತಾಮಹಾ, ತಾತಯ್ಯ ಎಂದು ಕರೆದಿದ್ದಾರೆ.

೧೯೩೩ರಲ್ಲಿ ನಿಧನರಾದ ತಾತಯ್ಯನವರ ಸ್ಮರಣಾರ್ಥ ನಗರದ ಹೃದಯ ಭಾಗವಾದ ಕೆ.ಆರ್.ವೃತ್ತದ ಬಳಿ ಸಯ್ಯಾಜಿರಾವ್ ರಸ್ತೆ ಬದಿಯಲ್ಲಿ ಉದ್ಯಾನ ನಿರ್ಮಿಸಿ, ಅದರಲ್ಲಿ ಅಮೃತ ಶಿಲೆಯಿಂದ ಕೆತ್ತಲ್ಪಟ್ಟ ಆಳೆತ್ತರದ ತಾತಯ್ಯನವರ ಪ್ರತಿಮೆ ನೋಡುಗರನ್ನು ಸೆಳೆಯುತ್ತೆಯಾದರೂ ಅಲ್ಲಿ ತಾತಯ್ಯನವರಿಗೆ ಸಂಬಂಧಿಸಿದ ಯಾವುದೇ ವಿವರಗಳಿಲ್ಲ. ಜೊತೆಗೆ ನಿರ್ವಹಣೆ ಇಲ್ಲದ ಕಾರಣಕ್ಕೆ ಅಮೃತಶಿಲೆಯ ಪ್ರತಿಮೆ ದೂಳು ಹಿಡಿದು ಕಪ್ಪುಶಿಲೆಯ ಪ್ರತಿಮೆಯಾಗುವತ್ತ ಸಾಗಿದೆ. ಪ್ರತಿಮೆಯ ರಕ್ಷಣೆಗಾಗಿ ನಿರ್ಮಿಸಲಾಗಿರುವ ಕಲ್ಲಿನ ಮಂಟಪದ ಮೇಲ್ಭಾಗದಲ್ಲಿರುವ ಗೋಪುರದಲ್ಲಿ ಗಿಡ-ಗಂಟಿಗಳು ಬೆಳೆದು ಶಿಥಿಲಾವಸ್ಥೆ ತಲುಪಿದ್ದು, ಇತ್ತೀಚಿಗೆ ಸುರಿದ ಭಾರೀ ಮಳೆ ಸಂದರ್ಭದಲ್ಲಿ ಪ್ರತಿಮೆಯ ಒಳಭಾಗಕ್ಕೆ ನೀರು ಸೋರುತ್ತಿದೆ.

ಗರಿಕೆ ಬೆಳೆದಿದೆ: ಜನ ತಿರುಗಾಡುವ ದಾರಿಯಲ್ಲಿ ಗರಿಕೆಯೂ ಬೆಳೆಯಲ್ಲ ಎಂಬ ಮಾತಿಗೆ ತಕ್ಕಂತೆ ೨೦೦೦ರಲ್ಲಿ ತಾತಯ್ಯ ಉದ್ಯಾನವನದ ಅಭಿವೃದ್ಧಿ ಮಾಡಿರುವ ಸಂದರ್ಭದಲ್ಲಿ ನಿರ್ಮಿಸಿರುವ ವಾಕಿಂಗ್ ಪಾಥ್‌ನಲ್ಲಿ ಜನರ ತಿರುಗಾಟವಿಲ್ಲದ ಕಾರಣಕ್ಕೆ ಗರಿಕೆ, ಸಣ್ಣಪುಟ್ಟ ಗಿಡಗಳು ಬೆಳೆದಿವೆ. ಉದ್ಯಾನದ ಉದ್ಘಾಟನಾ ಸಮಾರಂಭದಲ್ಲಿನ ಶಿಲಾಫಲಕವೂ ಮುರಿದು ಬೀಳುತ್ತಿದೆ. ಅದರ ಬದಿಯಲ್ಲೇ ಇರುವ ದೇವಿಯ ವಿಗ್ರಹದ ರಕ್ಷಣಾ ಗೋಡೆ ಜೀರ್ಣಾವಸ್ಥೆ ತಲುಪಿದೆ. ಶಿಲಾ ಬಾಲಿಕೆಯ ಕೊಡದಿಂದ ಒಂದು ಹನಿ ನೀರೂ ತೊಟ್ಟಿಕ್ಕುತ್ತಿಲ್ಲ! ಉದ್ಯಾನದ ರಕ್ಷಣಾ ಗೋಡೆಗೆ ಕಟ್ಟಲಾಗಿರುವ ಕಲ್ಲುಗಳೂ ಕಿತ್ತು ಬರುವ ಸ್ಥಿತಿಯಲ್ಲಿವೆ.

ಕಸದ ತೊಟ್ಟಿ: ನಗರಪಾಲಿಕೆಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ತಾತಯ್ಯ ಉದ್ಯಾನವನ ಕಸದ ತೊಟ್ಟಿಯಾಗಿ ಪರಿವರ್ತನೆಯಾಗುತ್ತಿದೆ. ತಾತಯ್ಯ ಉದ್ಯಾನಕ್ಕೆ ಹೊಂದಿಕೊಂಡಂತೆ ಸಯ್ಯಾಜಿರಾವ್ ರಸ್ತೆ ಬದಿಯ ವ್ಯಾಪಾರಿಗಳು, ಪಾನಿಪೂರಿ ವ್ಯಾಪಾರಿಗಳು ಅಳಿದುಳಿದ ಕಸ-ಕಡ್ಡಿಗಳನ್ನು ಉದ್ಯಾನವನದ ಒಳಗೆ ಎಸೆಯುತ್ತಿರುವುದರಿಂದ ಅಲ್ಲಲ್ಲಿ ಕಸದ ರಾಶಿ ಬಿದ್ದಿದೆ. ಉದ್ಯಾನವನದ ಹಿಂಭಾಗಕ್ಕೆ ಲ್ಯಾನ್ಸ್‌ಡೌನ್ ಕಟ್ಟಡ ಕುಸಿದು ಬಿದ್ದ ಬಳಿಕ ಅಲ್ಲಿನ ವರ್ತಕರ ಎದುರಿಗೆ ತಾತ್ಕಾಲಿಕವಾಗಿ ಅಂಗಡಿ ಮಳಿಗೆಗಳನ್ನು ತೆರೆದಿರುವುದರಿಂದ ಆ ಭಾಗದಿಂದ ಉದ್ಯಾನವನಕ್ಕೆ ಕಸ ಬಂದು ಬೀಳುವುದು ತಪ್ಪಿದೆ. ಆದರೆ, ಸಯ್ಯಾಜಿರಾವ್ ರಸ್ತೆ ಕಡೆಯಿಂದ ಬಂದು ಬೀಳುತ್ತಿರುವ ಕಸದಿಂದ ಅಲ್ಲಲ್ಲಿ ಕಸದ ರಾಶಿ ಹರಡಿಕೊಂಡಿದೆ.

  • ವಾಕಿಂಗ್ ಪಾಥ್‌ನಲ್ಲಿ ಜನರ ತಿರುಗಾಟವಿಲ್ಲದೆ ಬೆಳಿದಿವೆ ಗರಿಕೆ, ಸಣ್ಣಪುಟ್ಟ ಗಿಡಗಳು
  • ಉದ್ಯಾನವನ ಕಸದ ತೊಟ್ಟಿಯಾಗಿ ಪರಿವರ್ತನೆಯಾಗುತ್ತಿದೆ
  • ಕಲ್ಲಿನ ಮಂಟಪದ ಮೇಲ್ಭಾಗದ ಗೋಪುರದಲ್ಲಿ ಗಿಡ-ಗಂಟಿಗಳು ಬೆಳೆದು ಶಿಥಿಲಾವಸ್ಥೆ ತಲುಪಿದೆ
  • ಉದ್ಯಾನದ ರಕ್ಷಣಾ ಗೋಡೆಗೆ ಕಟ್ಟಲಾಗಿರುವ ಕಲ್ಲುಗಳೂ ಕಿತ್ತು ಬರುವ ಸ್ಥಿತಿಯಲ್ಲಿವೆ
andolana

Recent Posts

ಉಪಟಳ ನೀಡುತ್ತಿದ್ದ ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಜನತೆ

ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…

1 hour ago

ಮೃಗಾಲಯದ ಬೇಟೆ ಚೀತಾ ‘ಬ್ರೂಕ್’ ಇನ್ನಿಲ್ಲ

ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…

2 hours ago

ಸಿಲಿಂಡರ್‌ ಸ್ಫೋಟ ಪ್ರಕರಣ : ತನಿಖೆ ತೀವ್ರ ; ಮೈಸೂರಲ್ಲಿ ಖಾಕಿ ಕಟ್ಟೆಚ್ಚರ

ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…

2 hours ago

ಎಚ್.ಡಿ.ಕೋಟೆ | ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ಮಾದರಿ ಕಾರ್ಯಕ್ರಮ

ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…

2 hours ago

ಹೊಗೇನಕಲ್‌ ಜಲಪಾತಕ್ಕೆ ಪ್ರವಾಸಿಗರ ದಂಡು

ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…

3 hours ago

ಪುಷ್ಪ-2 ಕಾಲ್ತುಳಿತ ಪ್ರಕರಣ ; ವರ್ಷದ ಬಳಿಕ ಚಾರ್ಜ್‌ಶೀಟ್‌ ಸಲ್ಲಿಕೆ

ಹೈದರಾಬಾದ್‌ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…

3 hours ago