ವರದಿ: ಮಹಾದೇಶ್ ಎಂ ಗೌಡ
ಹನೂರು: ತಾಲ್ಲೂಕಿನ ವಿಷಜಂತು ನಿವಾರಕನಿಗೆ ಬೇಕಿದೆ ಅಗತ್ಯ ನೆರವು.
ಹಾವು, ಚೇಳು, ನಾಯಿ, ಇಲಿ, ಪೈಲ್ಸ್, ಕಾಮಾಲೆ ಯಾವುದೇ ರೋಗ ಬಂದರೂ ಉಚಿತ ಔಷಧಿ ಕೊಡುವ ನಾಟಿ ವೈದ್ಯನಿಗೆ ಬೇಕಿದೆ ನೆರವು. ಅದೂ, ಸ್ವಂತಕಲ್ಲ- ಸಮಾಜಸೇವೆಗೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿನ ಸಾಲೂರು ಮಠದ ಸಮೀಪವಿರುವ ಕಾಡು ಹೊಲ ಗ್ರಾಮದ ನಿವಾಸಿ 40 ವರ್ಷಗಳಿಂದ ವಿಷಜಂತುಗಳ ಕಡಿತಕ್ಕೆ ಉಚಿತ ಔಷಧ- ರೋಗಿಗಳಿಗೆ ಹೊಟ್ಟೆತುಂಬಾ ಊಟ ಹಾಕಿ ಕಳುಹಿಸುತ್ತಿರುವ ಪುಟ್ಟತಮ್ಮಡಿ ಅವರು ಅಗತ್ಯ ನೆರವಿಗೆ ದಾನಿಗಳ ಮೊರೆ ಇಟ್ಟಿದ್ದಾರೆ.
ರೋಗಿಗಳು ಬಂದ ವೇಳೆ ಮಲಗಿಸಿ ಚಿಕಿತ್ಸೆ ಕೊಡಲು ಎರಡು ಕಬ್ಬಿಣದ ಮಂಚ, ದಿಂಬುಗಳನ್ನು ಕೊಟ್ಟರೇ ತನಗೆ ಎಷ್ಟೋ ಸಹಾಯಕವಾಗಲಿದೆ. ಬಂದವರಿಗೆ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ಕೊಡಲು ಕೆಲವೊಮ್ಮೆ ದುಸ್ತರ ಆಗಲಿದ್ದು ಆಸಕ್ತರು ತನಗೆ ಚಿಕ್ಕ ಕೊಡುಗೆಯನ್ನು ಕೊಟ್ಟರೇ ಮಲೆ ಮಹದೇಶ್ವರನ ಒಳಿತು ಮಾಡುತ್ತಾನೆ ಎಂದು ನಿಷ್ಕಲ್ಮಶ ಬೇಡಿಕೆಯನ್ನು “ಆಂದೋಲನ”ದೊಟ್ಟಿಗೆ ಹಂಚಿಕೊಂಡಿದ್ದಾರೆ.
260 ಮಂದಿಗೆ ಚಿಕಿತ್ಸೆ: ಪುಟ್ಟ ತಮ್ಮಡಿ ಅವರು ಇಲ್ಲಿಯವರೆಗೆ 260 ಮಂದಿಗೆ ಹಾವು, ಚೇಳಿನ ಕಡಿತಕ್ಕೆ ಉಚಿತ ಚಿಕಿತ್ಸೆ ಕೊಟ್ಟಿದ್ದು ಎಲ್ಲರೂ ಗುಣಮುಖರಾಗಿ ತೆರಳಿದ್ದಾರೆ. ತಮ್ಮ ಬಳಿ ಚಿಕಿತ್ಸೆ ಪಡೆದ ದಿನಾಂಕ, ವಿವರವನ್ನು ಬರೆದಿಟ್ಟುಕೊಂಡು ಕಾಪಿಟ್ಟಿರುವ ಈ ನಾಟಿ ವೈದ್ಯನಿಗೆ ಆಸಕ್ತರು ನೆರವು ನೀಡಬಹುದಾಗಿದೆ. ಅಂದಹಾಗೆ, ಇವರ ತಂದೆ ಜುಟ್ಟುಮಲ್ಲಪ್ಪ ಕೂಡ ನಾಟಿ ವೈದ್ಯರಾಗಿದ್ದು ತಂದೆಯಿಂದ ಕಲಿತ ಪಾರಂಪರಿಕ ಜ್ಞಾನವನ್ನು ಮುಂದುವರೆಸಿಕೊಂಡು ಇವರು ಹೋಗುತ್ತಿದ್ದಾರೆ.
ಮಲೆಮಹದೇಶ್ವರ ಬೆಟ್ಟ ಹಾಗೂ ಸುತ್ತಮುತ್ತಲಿನ ಹತ್ತಾರು ಊರುಗಳ ಜನರು ಈಗಲೂ ಪುಟ್ಟತಮ್ಮಡಿ ಅವರ ಬಳಿ ಬರಲಿದ್ದಾರೆ.
ಮಲೆ ಮಹಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡು ಹೊಲ ಗ್ರಾಮದ ಪುಟ್ಟ ತಮ್ಮಡಿ ರವರ ಸೇವೆಯನ್ನು ಗುರುತಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚಾಮರಾಜನಗರ ಇವರೂ ಸಹ 2019ರಲ್ಲಿ ಸನ್ಮಾನ ಪತ್ರ ವಿತರಿಸಿದ್ದಾರೆ.
ಕೆ.ಬಿ.ರಮೇಶನಾಯಕ ಮೈದಾನ ಸಂರಕ್ಷಿಸಿಕೊಳ್ಳದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ; ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲ್ಚೆಂಡು ಮೈದಾನ ಈಗ ಬಿಡಾಡಿ ದನಗಳ,…
ಚಿತ್ರದುರ್ಗ : ದಶಕಗಳಿಂದ ಬರಗಾಲದ ಬೇಗೆಯಲ್ಲಿ ಬೆಂದ ಬಯಲುಸೀಮೆಗೆ ಭದ್ರಾ ಮೇಲ್ದಂಡೆ ಯೋಜನೆ ಹೊಸ ಭರವಸೆ ಮೂಡಿಸಿದೆ. ಅರಣ್ಯ ಇಲಾಖೆ…
ಭಾರತೀಯ ಚಿತ್ರರಂಗದ ಹಲವಾರು ಭಾಷೆಗಳಲ್ಲಿ ಸಹಜ ನಟನೆಯ ಪ್ರಸದ್ಧಿ ಪಡೆದು... ಮೇರುನಟರಾಗಿ ಕಲಾಸೇವೆಗಾಗಿ ತಮನ್ನು ತಾವು ಮುಡಿಪಿಟ್ಟು ಭಾರತೀಯ ಚಿತ್ರರಂಗದ…
ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ಜನರು ಮೈಸೂರು ಮಹಾ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಪದೇ ಪದೇ…
ದೇಶದಾದ್ಯಂತ ಸಣ್ಣ ಪುಟ್ಟ ವ್ಯಾಪಾರಗಳಿಂದ ಹಿಡಿದು ದೇಶದ ಬಹುದೊಡ್ಡ ವ್ಯಾಪಾರ ವಹಿವಾಟಿನವರೆಗೆ ಯುಪಿಐ ಮೂಲಕವೇ ಹಣ ಪಾವತಿಸಲು ಕೇಂದ್ರ ಸರ್ಕಾರ…