ತಿ.ನರಸೀಪುರ : -ತಾಲೂಕಿನ ಮುಸುವಿನ ಕೊಪ್ಪಲು ಗ್ರಾಮದಲ್ಲಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿನಲ್ಲಿ ಫೆಬ್ರವರಿ 10ರಂದು ಜೋಡಿ ಚಿರುತೆಗಳು ಬೋನಿಗೆ ಬಿದ್ದಿದ್ದವು, ಅದೇ ಬೋನಿಗೆ ಮಂಗಳವಾರ ರಾತ್ರಿ 9:00 ಸಮಯದಲ್ಲಿ ಎಂಟು ತಿಂಗಳ ಮರಿ ಚಿರತೆ ಬೋನಿಗೆ ಬಿದ್ದಿದೆ.
ತಾಲೂಕಿನಾದ್ಯಂತ ಚಿರತೆ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಚಿರತೆ ಚಲನ ವಲನಗಳನ್ನು ಗುರುತಿಸಿ ವಿವಿಧ ಗ್ರಾಮಗಳ ಆಯ್ದ ಸ್ಥಳಗಳಲ್ಲಿ ಚಿರತೆ ಸೆರೆಗೆ ಬೋನುಗಳನ್ನು ಇರಿಸಿದ್ದರು. ತಾಯಿ ಹಾಗೂ ಮರೀಚಿರತೆ ಬೋನಿಗೆ ಬೀಳುವ ಮೂಲಕ ಮತ್ತೊಂದು ಮರಿ ಚಿರತೆ ಇದೆ ಎಂಬ ಆತಂಕ ಎಲ್ಲರಲ್ಲಿ ಮನೆ ಮೂಡಿತ್ತು, ಈಗ ಆ ಮರಿಚಿರತೆ ಇಂದು ಬೋನಿಗೆ ಬೀಳುವ ಮೂಲಕ ನಾಗರಿಕಲ್ಲಿ ಮೂಡಿರುವ ಆತಂಕ ಸ್ವಲ್ಪಮಟ್ಟಿಗೆ ವಿರಾಮ ದೊರಕಿದಂತಾಗಿದೆ,
ಇಂದು ಸಂಜೆ ಗ್ರಾಮದ ಚಂದ್ರಪ್ಪ ಎಂಬುವರ ಜಮೀನಿನಲ್ಲಿ ಇಟ್ಟಿದ್ದ ಭೂಮಿನೊಳಗೆ ಮೇಕೆ ಮರಿ ಕಟ್ಟಿ ಹಾಕಲಾಗಿತ್ತು ಅದನ್ನು ತಿನ್ನಲು ಬಂದ ಎಂಟು ತಿಂಗಳ ಮರಿ ಚಿರತೆ ಸರಿಯಾಗಿದೆ, ಸೆರೆ ಸಿಕ್ಕ ಚಿಗತೆಮರಿಯನ್ನು ರಾತ್ರಿಯೇ ಮೈಸೂರು ಅರಣ್ಯ ಭವನಕ್ಕೆ ಸಾಗಿಸಲಾಯಿತು ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ, ನಂತರ ಅರಣ್ಯ ಅಧಿಕಾರಿಗಳ ಆದೇಶದ ಮೇರೆಗೆ ಮುಂದಿನ ಕ್ರಮ ಜರಿಸಲಾಗುವುದು,
ಸ್ಥಳಕ್ಕೆ ತಿ. ನರಸೀಪುರ ವಲಯ ಅರಣಾಧಿಕಾರಿ ಸಯಿದ್ ನದೀಮ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಚಿರತೆ ಬಲೆಗೆ ಬಿದ್ದ ಸುದ್ದಿ ಹಬ್ಬುತ್ತಿದ್ದಂತೆ ಗ್ರಾಮಸ್ಥರು ರಾತ್ರಿ ವೇಳೆಯಾದರೂ ಚಿರತೆಯನ್ನು ವೀಕ್ಷಣೆ ಮಾಡಲು ಜಮಾವಣೆಗೊಂಡಿದ್ದರು.
ಓದುಗರ ಪತ್ರ: ಜಾತಿ ಅಳಿಯಲಿ ಜೀವ ಉಳಿಯಲಿ ಈ ಅಮಾನವೀಯ ಕ್ರೂರ ಕೃತ್ಯಕ್ಕೆ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುತ್ತಿದೆ…
ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದ ವಾರ್ಡ್ ೨೩ ರ ಹೊಸೂರು ಜನನಿಬಿಡ ಪ್ರದೇಶವಾಗಿದ್ದು, ಅಕ್ಕ ಪಕ್ಕದಲ್ಲಿ ಶಾಲೆ ಇದ್ದು, ಪೋಷಕರು ತಮ್ಮ…
ಮೈಸೂರಿನ ಬೋಗಾದಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದ (ಬಿಸಿಡಬ್ಲ್ಯೂಡಿ ೨೨೫೦)ಲ್ಲಿ ಶೌಚಾಲಯವು ಅಶುಚಿತ್ವದಿಂದ ಕೂಡಿದೆ. ಶೌಚಾಲಯ ಸ್ವಚ್ಛಗೊಳಿಸುವಂತೆ ವಾರ್ಡನ್…
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿನ್ನೆ(ಡಿ.25) ಸಂಜೆ ಅರಮನೆ ಮುಂಭಾಗ ಬಲೂನ್ಗೆ ಗ್ಯಾಸ್ ತುಂಬುವಾಗ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡು…
ಮೈಸೂರಿನ ಜಯನಗರದ ಇಸ್ಕಾನ್ ಕೃಷ್ಣ ದೇವಾಲಯ ರಸ್ತೆಯ ಪಕ್ಕದಲ್ಲಿ ತ್ಯಾಜ್ಯ ವಸ್ತುಗಳ ರಾಶಿ ಬಿದ್ದಿದೆ. ಕೆಲವರು ರಸ್ತೆಯಲ್ಲೇ ಮೂತ್ರ ವಿಸರ್ಜನೆ…
ವೈಡ್ ಆಂಗಲ್ ಬಾ.ನಾ.ಸುಬ್ರಹ್ಮಣ್ಯ ವರ್ಷದ ಕೊನೆಯ ವಾರ ತೆರೆಗೆ ಬಂದಿರುವ ಚಿತ್ರಗಳಲ್ಲಿ ಒಂದು ‘ಮಾರ್ಕ್’. ಚಿತ್ರದ ಮುಖ್ಯ ಪಾತ್ರ ಮಾರ್ಕಾಂಡೇಯ…