ಜಿಲ್ಲೆಗಳು

ಸುವರ್ಣ ಸಂಭ್ರಮದಲ್ಲಿ ಶಾಂತಲಾ ಕಲಾವಿದರು ತಂಡ

ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ

ಸುದ್ದಿಗೋಷ್ಠಿಯಲ್ಲಿ ಕೆ.ವೆಂಕಟರಾಜು ಮಾಹಿತಿ

ಚಾಮರಾಜನಗರ: ಶಾಂತಲಾ ಕಲಾವಿದರು ತಂಡವು ೫೦ ವರ್ಷ ಪೂರೈಸಿ ಸುವರ್ಣ ಸಂಭ್ರಮ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಶಾಂತಲಾ ಕಲಾವಿದರು ಟ್ರಸ್ಟ್ನ ಕೆ.ವೆಂಕಟರಾಜು ತಿಳಿಸಿದರು.
೧೯೭೩ರ ಡಿಸೆಂಬರ್ ೧೦ ರಂದು ಕಲಾವಿದರು ತಂಡವು ಪ್ರಾರಂಭವಾಯಿತು. ೨೦೨೩ರ ಅಕ್ಟೋಬರ್ ೧೦ಕ್ಕೆ ತಂಡವು ೫೦ ವರ್ಷ ಪೂರೈಸಿ ಸುವರ್ಣ ಸಂಭ್ರಮದ ಹೊಸ್ತಿಲಿನಲ್ಲಿದೆ. ಇದರ ಅಂಗವಾಗಿ ನಾಟಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ.೨೦ ರಂದು ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆಯುವ ಈ ಸುವರ್ಣ ಸಂಭ್ರಮ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ರಂಗ ನಿರ್ದೇಶಕ ಪ್ರಸನ್ನ ಅವರು ಚಾಲನೆ ನೀಡುವರು ಎಂದರು.
ವಿಜ್ಞಾನ ಲೇಖಕ ಕೊಳ್ಳೇಗಾಲ ಶರ್ಮ, ರಂಗಕರ್ಮಿ ಡಾ.ಶೀಲಾಕುಮಾರಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಎ.ಡಿ.ಸಿಲ್ವ ಅಧ್ಯಕ್ಷತೆ ವಹಿಸುತ್ತಾರೆ. ತದನಂತರ ಅರಿವು ಕಲಾ ಬಳಗದ ವತಿಯಿಂದ ಕ್ಯೂಇಡಿ ಎಂಬ ನಾಟಕ ಪ್ರದರ್ಶನ ಇರಲಿದೆ. ಯತೀಶ್ ಕೊಳ್ಳೇಗಾಲ ನಿರ್ದೇಶಿಸಿ ತಾವೇ ಅಭಿನಯಿಸಿದ್ದಾರೆ ಎಂದು ತಿಳಿಸಿದರು.
ಸುವರ್ಣ ಸಂಭ್ರಮದ ಪ್ರಯುಕ್ತ ಪ್ರತಿ ತಿಂಗಳು ಒಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು. ೨೦೨೩ರ ಅಕ್ಟೋಬರ್-ನವೆಂಬರ್ ತಿಂಗಳÀಲ್ಲಿ ೨ ಅಥವಾ ೩ ದಿನಗಳ ಕಾಲ ಉತ್ಸವ ನಡೆಸಲಾಗುತ್ತದೆ ಎಂದು ತಿಳಿಸಿದರು.
ನಾವು ಶಾಲೆ, ಕಾಲೇಜು ದಿವಸಗಳಲ್ಲಿ ನಾಟಕಗಳಲ್ಲಿ ಭಾಗವಹಿಸಿ ಆಸಕ್ತಿಯನ್ನು ತಳೆದವು. ಕಾಲೇಜು ವಿದ್ಯಾಭ್ಯಾಸ ಮುಗಿಸಿದ ನಂತರ ರಂಗ ಚಟುವಟಿಕೆಗೆ ಮೀಸಲಾದ ಹವ್ಯಾಸ ತಂಡ ಕಟ್ಟಬೇಕೆಂಬ ಉತ್ಕಟವಾದ ಬಯಕೆಯಿಂದ ಶಾಂತಲಾ ಕಲಾವಿದರ ತಂಡವನ್ನು ಕಟ್ಟಲಾಯಿತು ಎಂದರು.

andolanait

Recent Posts

ಓದುಗರ ಪತ್ರ: ಮರಗಳ ಕೊಂಬೆಗಳನ್ನು ಕತ್ತರಿಸಿ

ಮೈಸೂರಿನ ಸುಭಾಷ್ ನಗರದ ೪ನೇ ಮುಖ್ಯರಸ್ತೆಯಲ್ಲಿರುವ ಮರಗಳ ಕೊಂಬೆಗಳು ವಿದ್ಯುತ್ ತಂತಿಗಳಿಗೆ ತಗುಲುತ್ತಿದ್ದು, ಗಾಳಿ ಅಥವಾ ಮಳೆಯ ಸಮಯದಲ್ಲಿ ಶಾರ್ಟ್…

22 mins ago

ಓದುಗರ ಪತ್ರ:  ಕುಸ್ತಿಪಟುಗಳಿಗೆ ತರಬೇತಿ ಸ್ವಾಗತಾರ್ಹ

ರಾಜ್ಯದಲ್ಲಿ ೩೧೫ ಕುಸ್ತಿಪಟುಗಳಿಗೆ ಉಚಿತವಾಗಿ ನುರಿತ ಕುಸ್ತಿ ತರಬೇತುದಾರರಿಂದ ವೈಜ್ಞಾನಿಕ ಕ್ರೀಡಾ ತರಬೇತಿ ನೀಡಲಾಗುತ್ತಿದೆ ಹಾಗೂ ರಾಜ್ಯದಲ್ಲಿ ಕ್ರೀಡಾ ಅಭಿವೃದ್ಧಿಗಾಗಿ…

28 mins ago

ಓದುಗರ ಪತ್ರ:  ರಾಜ್ಯ ಸರ್ಕಾರಿ ನೌಕರರಿಗೆ ವಸ್ತ್ರಸಂಹಿತೆ ಒಳ್ಳೆಯ ಬೆಳವಣಿಗೆ

ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ಬರುವಾಗ ಸಭ್ಯ ಉಡುಪುಗಳನ್ನು ಧರಿಸಿಕೊಂಡು ಬರುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿರುವುದು ಸ್ವಾಗತಾರ್ಹವಾಗಿದೆ. ಕೆಲವು…

32 mins ago

ಓದುಗರ ಪತ್ರ:  ವರುಣ ನಾಲೆಗೆ ತಡೆಗೋಡೆ ನಿರ್ಮಿಸಿ

ಮೈಸೂರಿನ ಲಲಿತಾದ್ರಿಪುರ ರಿಂಗ್ ರಸ್ತೆಯಲ್ಲಿರುವ ಮಾರ್ವೆಲ್ ಶಾಲಾ- ಕಾಲೇಜು ಮುಂಭಾಗದಿಂದ ಸ್ವಲ್ಪ ದೂರ ಸಾಗಿದರೆ ವರುಣ ನಾಲೆ ಕಾಲುವೆ ಸಿಗುತ್ತದೆ.…

34 mins ago

ಮೈಸೂರು ಮುಡಾ ಹಗರಣ: ಇಂದು ಸಿಎಂ ಸಿದ್ದರಾಮಯ್ಯ ಭವಿಷ್ಯ ನಿರ್ಧಾರ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್‌ ಕುರಿತು ಜನಪ್ರತಿನಿಧಿಗಳ ನ್ಯಾಯಾಲಯ ಇಂದು ಆದೇಶ…

36 mins ago

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್‌

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಭಾರತದಲ್ಲಿ ಹಲವಾರು ರಾಜ್ಯ, ಹಲವಾರು ಧರ್ಮ, ಹಲವಾರು ಆಹಾರ ವೈವಿಧ್ಯತೆ, ಹಲವಾರು ಭಾಷೆ, ಹಲವಾರು ಸಂಸ್ಕ ತಿಗಳು…

1 hour ago