ಚೆಸ್ ಆಡುತ್ತಿರುವ ಅಂಧ ಸ್ಪರ್ಧಿಗಳು.
ಮೈಸೂರು : ಕರ್ನಾಟಕ ರಾಜ್ಯ ಒಕ್ಕಲಿಗ ವಿಕಾಸ ವೇದಿಕೆ, ಚೆಸ್ ಅಸೋಸಿಯೆಷನ್ ಮತ್ತು ಕೆಎಸ್‌ಸಿಎವಿಸಿ ಸಹಯೋಗದಲ್ಲಿ ಎರಡು ದಿನಗಳ ಕಾಲ ಪಡುವಾರಹಳ್ಳಿಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಅಂಧರ ಚೆಸ್ ಚಾಂಪಿಯನ್‌ಶಿಪ್‌ಗೆ ಸೋಮವಾರ ಶಾಸಕ ಎಲ್.ನಾಗೇಂದ್ರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಎಲ್.ನಾಗೇಂದ್ರ, ಪುನೀತ್ ರಾಜ್‌ಕುಮಾರ್ ಅವರ ಪ್ರೇರಣೆಯಿಂದ ಅನೇಕರು ನೇತ್ರದಾನಕ್ಕೆ ಮುಂದಾಗುತ್ತಿದ್ದಾರೆ. ಹೃದಯವಂತಿಕೆಯಿಂದ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚಾಗಬೇಕು ಎಂದರು.
ನನಗೂ ಚದುರಂಗ ಆಟ ಹೆಚ್ಚು ಇಷ್ಟ. ನಾನೂ ಆಡುತ್ತೇನೆ. ಇದು ಶಕ್ತಿಯಿಂದ ಆಡುವ ಆಟವಲ್ಲ. ಯುಕ್ತಿಯಿಂದ ಆಡುವ ಆಟ. ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಎಲ್ಲರೂ ಉತ್ತಮವಾಗಿ ಆಟವಾಡಿ ಎಂದು ಶುಭ ಹಾರೈಸಿದರು.
ನಗರ ಪಾಲಿಕೆ ಸದಸ್ಯ ಎಸ್‌ಬಿಎಂ ಮಂಜು ಮಾತನಾಡಿ, ಇಲ್ಲಿನ ಸ್ಪರ್ಧಿಗಳಿಗೆ ಕಣ್ಣು ಕಾಣದೆ ಇರಬಹುದು. ಮುಖದಲ್ಲಿ ಯಾವಾಗಲೂ ಸಂತೋಷವಿರುತ್ತದೆ. ಆದರೆ, ಕಣ್ಣು ಕಾಣುವ ನಮ್ಮ ಮುಖಗಳಲ್ಲಿ ಆ ಸಂತೋಷ ಕಾಣುವುದಿಲ್ಲ. ಈ ಸಂತೋಷ ಯಾವಾಗಲೂ ಇರಲಿ ಎಂದು ಹಾರೈಸಿದರು.
ಇದೊಂದು ಮಾನವೀಯ ಸ್ಪರ್ಧೆಯಾಗಿದೆ. ಕಣ್ಣಿದ್ದೂ ಕುರುಡಾಗಿರುವ ಅನೇಕರು ಹೊರಗೆ ಬಂದು ಇವರನ್ನು ಪ್ರೋತ್ಸಾಹಿಸಬೇಕು. ಎಂತಹ ಸಮಸ್ಯೆ ಬಂದರೂ ಕುಗ್ಗಬಾರದು. ಸಮಾಜವನ್ನು ಎದುರಿಸಬೇಕು ಎಂದರು.
ಧಾರವಾಡದ ಮನಗುಂಡಿಯ ಗುರು ಬಸವ ಮಹಾಮನೆ ಮಠದ ಬಸವಾನಂದ ಮಹಾ ಸ್ವಾಮೀಜಿ ಆರ್ಶೀವಚನ ನೀಡಿದರು. ಒಂಟಿಕೊಪ್ಪಲು ಸರ್ಕಾರಿ ಜೂನಿಯರ್ ಕಾಲೇಜು ಪ್ರಾಂಶುಪಾಲ ಸಿ.ಚೆಲುವಯ್ಯ, ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್, ನಿರ್ದೇಶಕ ಗುರುರಾಜ್, ರಾಮು, ಕರ್ನಾಟಕ ರಾಜ್ಯ ಒಕ್ಕಲಿಗ ವಿಕಾಸ ವೇದಿಕೆ ಅಧ್ಯಕ್ಷೆ ಎಚ್.ಎಲ್.ಯಮುನಾ, ಮನು ಕೀರ್ತಿ, ಎ.ಆರ್.ರಮೇಶ್, ಶಶಿಧರ್ ಇತರರು ಇದ್ದರು. ಸುಮಾರು ೨೦೦ಕ್ಕೂ ಹೆಚ್ಚು ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಪೋಟೋ : ಕರ್ನಾಟಕ ರಾಜ್ಯ ಒಕ್ಕಲಿಗ ವಿಕಾಸ ವೇದಿಕೆ, ಚೆಸ್ ಅಸೋಸಿಯೆಷನ್ ಮತ್ತು ಕೆಎಸ್‌ಸಿಎವಿಸಿ ಸಹಯೋಗದಲ್ಲಿ ಪಡುವಾರಹಳ್ಳಿಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಅಂಧರ ಚೆಸ್ ಚಾಂಪಿಯನ್‌ಶಿಪ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ ಮಾತನಾಡಿದರು.
ಹುಣಸೂರು: ಹಾಡಿಗಳ ಅರಣ್ಯ ಹಕ್ಕು ಸಮಿತಿಗಳ ಪ್ರತಿನಿಧಿಗಳಿಂದ ಅರಣ್ಯ ಪ್ರವೇಶ ಅಭಿಯಾನ ಹುಣಸೂರು: ತಾಲ್ಲೂಕಿನ ಆದಿವಾಸಿಗಳು ೨೦೦೬ರ ಆರಣ್ಯ ಹಕ್ಕು…
ಕೆ.ಬಿ.ರಮೇಶ ನಾಯಕ ೨೦೧೩-೧೪, ೨೦೧೪-೧೫ನೇ ಸಾಲಿನಲ್ಲಿ ಪ್ರವೇಶ ಪಡೆದು ಉತ್ತೀರ್ಣರಾದವರಿಗೆ ಪದವಿ ಪ್ರಮಾಣಪತ್ರ ಮುಕ್ತ ವಿವಿಯ ಇನ್‌ಹೌಸ್‌ನಲ್ಲಿ ಪ್ರವೇಶ ಪಡೆದಿದ್ದವರಿಗೆ…
ಕಡಿಮೆ ದರದಲ್ಲಿ ಊಟ, ತಿಂಡಿ ನೀಡುತ್ತಿದ್ದ ಕ್ಯಾಂಟೀನ್ ಮುಚ್ಚಿದ್ದರಿಂದ ಕೂಲಿ ಕಾರ್ಮಿಕರಿಗೆ, ಬಡವರಿಗೆ ತೊಂದರೆ ಎಚ್.ಡಿ.ಕೋಟೆ: ಅನೇಕ ವಿದ್ಯಾರ್ಥಿಗಳಿಗೆ, ಕೂಲಿ…
ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳ ನೇತೃತ್ವದ ಕ್ಷಿಪ್ರ ಕಾರ್ಯಪಡೆ ರಚನೆಗೆ ಒಪ್ಪಿಗೆ ಮೈಸೂರು: ಶಿಕ್ಷಣ, ಸಾಮಾಜಿಕ, ಆರೋಗ್ಯ ಮತ್ತಿತರ ಸೇವಾ…
ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…