ಜಿಲ್ಲೆಗಳು

ಮಗ ಶ್ರೀದತ್ತಾತ್ರೇಯನನ್ನು ತೋರದಂತೆ ಮಡಿಲಲ್ಲೇ ನಿಲ್ಲಿಸಿಕೊಂಡಿದ್ದ ಲಕ್ಷ್ಮಿ

ಮೈಸೂರು: ಮೈಸೂರು ದಸರೆಯಲ್ಲಿ ಭಾಗವಹಿಸಲು ಬಂದಿದ್ದ ಲಕ್ಷ್ಮಿ ಆನೆಯು ಗಂಡು ಮರಿಗೆ ಜನ್ಮ ನೀಡಿದ್ದು, ಇದಕ್ಕೆ ಶ್ರೀದತ್ತಾತ್ರೇಯ  ಎಂದು ಹೆಸರಿಡಲಾಗಿದೆ. ಅರಮನೆಯಲ್ಲಿ ಗಂಡು ಮಗುವಿಗೆ ಜನನ ನೀಡಿದ್ದ ತಾಯಿ ಲಕ್ಷ್ಮಿ   ,ಪುತ್ರ ಶ್ರೀದತ್ತಾತ್ರೇಯನನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವೀಕ್ಷಿಸಿ ಆರೋಗ್ಯ ವಿಚಾರಿಸಿದರು. ಅರಮನೆಯ ಆನೆ ಲಾಯದಲ್ಲಿ ಪ್ರತ್ಯೇಕವಾಗಿ ಇರಿಸಿರುವ ಲಕ್ಷ್ಮಿ,ಶ್ರೀದತ್ತಾತ್ರೇಯನನ್ನು ಕೆಲ ಹೊತ್ತು ನೋಡಿದರು.
ಬಳಿಕ ಡಿಸಿಎಫ್ ಡಾ.ವಿ.ಕರಿಕಾಳನ್ ಅವರಿಂದ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಆನೆಯ ಹತ್ತಿರಕ್ಕೆ ಹೋಗಲು ಸಾಧ್ಯವಾಗದ ಕಾರಣ ದೂರದಲ್ಲೇ ನಿಂತು ವೀಕ್ಷಿಸಿದರು. ಹತ್ತಕ್ಕೂ ಜನರು ದೂರದಲ್ಲಿ ತಮ್ಮನ್ನು ನೋಡುತ್ತಿದ್ದನ್ನು ಗಮನಿಸಿದ ಲಕ್ಷ್ಮಿ ತನ್ನ ಮಗುವನ್ನು ಮಡಿಲಲ್ಲೇ ನಿಲ್ಲಿಸಿಕೊಂಡಿತ್ತು.
ಬಳಿಕ ಮಾವುತ ತನ್ನ ಮಾತಿನಿಂದ ಮರಿಯನ್ನು ಹೊರಗೆ ಬರುವಂತೆ ಮಾಡಿ ಸಚಿವರಿಗೆ ದರ್ಶನ ಸಿಗುವಂತೆ ಮಾಡಿದರು. ಸಂಸದ ಪ್ರತಾಪ್ ಸಿಂಹ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಡಿಸಿ ಡಾ.ಬಗಾದಿಗೌತಮ್,ಎಡಿಸಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಇನ್ನಿತರರು ಹಾಜರಿದ್ದರು.

andolanait

Recent Posts

ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವು ; 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ (ಬಾಳೇಬರೆ) ಪ್ರದೇಶದಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವಾಗ ಗುಡ್ಡ…

5 mins ago

ಹೊಗೇನಕಲ್‌ : ನೀರಿನ ಸೆಳೆತಕ್ಕೆ ಸಿಲುಕಿ ಓರ್ವ ಸಾವು

ಹನೂರು : ಕೂಲಿ ಕೆಲಸಕ್ಕೆ ತೆರಳಿ ವಾಪಸ್ ಗ್ರಾಮಕ್ಕೆ ನೀರಿನಲ್ಲಿ ಈಜಿಕೊಂಡು ಬರುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ವ್ಯಕ್ತಿಯೋರ್ವ…

16 mins ago

ರಾಜ್ಯಸಭಾ ಸದಸ್ಯರಾಗಿ ನಿತೀಶ್‌ ಕುಮಾರ್‌ ಪ್ರಮಾಣ ವಚನ ಸ್ವೀಕಾರ

ನವದೆಹಲಿ : ಬಿಹಾರದ ಮುಖ್ಯಮಂತ್ರಿ, ಜೆಡಿಯು ರಾಷ್ಟ್ರೀಯ ಅಧ್ಯಕ್ಷರೂ ಆದ ನಿತೀಶ್ ಕುಮಾರ್ ಅವರು ಇಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ…

1 hour ago

ನಾಪತ್ತೆಯಾಗಿದ್ದ ಕೇರಳದ ವಿದ್ಯಾರ್ಥಿನಿ ಶವವಾಗಿ ಪತ್ತೆ

ಚಿಕ್ಕಮಗಳೂರು : ಚಂದ್ರದ್ರೋಣ ಪರ್ವತಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳದ 10ನೇ ತರಗತಿ ವಿದ್ಯಾರ್ಥಿನಿ…

1 hour ago

ಅನಾರೋಗ್ಯ ಪೀಡಿತ ಮಹಿಳೆ ಕುಟುಂಬಕ್ಕೆ ಎಚ್.ಡಿ. ಕುಮಾರಸ್ವಾಮಿ ನೆರವು

ನಂಜನಗೂಡು : ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯ ಕುಟುಂಬಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನೆರವು ನೀಡಿದ್ದಾರೆ. ನಂಜನಗೂಡು…

3 hours ago

ಹುಲಿಕಲ್ ಘಾಟ್‌ನಲ್ಲಿ ಗುಡ್ಡ ಕುಸಿತ ; ಮೂವರು ಕಾರ್ಮಿಕರು ಸಾವು.

ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಮತ್ತು ತಡೆಗೋಡೆ ದುರಸ್ತಿ ಕಾಮಗಾರಿ ನಡೆಯುತ್ತಿರುವಾಗ…

4 hours ago