ಮಂಡ್ಯ: ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿಯಲ್ಲಿ ನಡೆಸಿದ ರಾಜ್ಯ ಮಟ್ಟದ ಆಟೋಟ ಸ್ಪರ್ಧೆಯಲ್ಲಿ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ ಗೆದ್ದ ಮಂಡ್ಯದ ಕುವರಿ ಶಾರ್ವರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಬೆಳಗಾವಿಯಲ್ಲಿ ನ.೨೩ರಂದು ನಡೆದ ೨೦೨೨-೨೩ನೇ ಸಾಲಿನ ರಾಜ್ಯಮಟ್ಟದ ಸ್ಪೀಡ್ ಸ್ಕೇಟಿಂಗ್‌ನ ೧೧-೧೪ ವರ್ಷದೊಳಗಿನ ವಿಭಾಗದ ಸ್ಫರ್ಧೆಯಲ್ಲಿ ಮಂಡ್ಯ ನಗರದ ಸೈಂಟ್ ಥಾಮಸ್ ಇಂಗ್ಲಿಷ್ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಎಸ್.ಎಲ್. ಶಾರ್ವರಿ ೫೦೦ ಮೀ., ೧೦೦೦ ಮೀ. ಹಾಗೂ ೨೦೦೦ ಮೀ. ಮೂರೂ ಸ್ಫರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಪ್ರಥಮ ಸ್ಥಾನ ಗಳಿಸಿ ರಾಷ್ಟಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಈಕೆಗೆ ಚಿನ್ಮಯ ಶಾಲೆಯ ದೈಹಿಕ ಶಿಕ್ಷಕರಾಗಿರುವ ಜಿ.ಎಚ್.ಶ್ರೀನಿವಾಸ್ ಅವರು ಮಾರ್ಗದರ್ಶನ ಮತ್ತು ತರಬೇತಿ ನೀಡಿರುತ್ತಾರೆ. ಶಾರ್ವರಿ ತಂದೆ ಮಂಡ್ಯ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹ ಬೋಧಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ, ತಾಯಿ ಕೆ.ಬಿ. ಲತಾ ಶ್ರೀರಂಗಪಟ್ಟಣ ತಾಲ್ಲೂಕಿನ ಟಿಎಂ ಹೊಸೂರಿನ ಜ್ಞಾನವಾಹಿನಿ ಪ್ರೌಢಶಾಲೆಯಲ್ಲಿ ವಿಜ್ಞಾನ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಂಡ್ಯ: ದೇಶದ ಗ್ರಾಮೀಣ ಭಾಗದ ಜನರ ಜೀವನಾಡಿ ಮನರೇಗಾ ಯೋಜನೆಯನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಬಿ ಜೀ ರಾಮ್…
ಮಂಡ್ಯ: ಸಿರಿಧಾನ್ಯಗಳ ಕುರಿತು ಮುಂದಿನ ಪೀಳಿಗೆಗೆ ತಿಳಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ…
ಕೊಡಗು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಕೊಡಗಿನಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಇನ ಡೋರ್‌ನಲ್ಲಿ ಮಾತ್ರ ಹೆಚ್ಚಿನ ಸೌಂಡ್ ಬಳಸಲು ಅವಕಾಶವಿದೆ.…
ಬೆಂಗಳೂರು: ಅಶ್ಲೀಲ ಕಮೆಂಟ್ ಬಗ್ಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಸೀಮಂತ್…
ಬೆಂಗಳೂರು: ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿರುವ ಕೋಗಿಲು ಲೇಟ್‍ನ ಮನೆ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ…
ಬೆಂಗಳೂರು: ನನ್ನ ವಿರುದ್ಧ 17 ಕೇಸ್ ಇದೆ. ಇನ್ನೂ ಹಾಕೋಕೆ ಹೇಳಿ ಆದರೆ ದಾರಿ ತಪ್ಪಿಸಬೇಡಿ ಎಂದು ಮಾಜಿ ಸಂಸದ…