ಜಿಲ್ಲೆಗಳು

‘ಮತದಾರರ ಪಟ್ಟಿ ಪರಿಷ್ಕರಣೆಗೆ ವಿಶೇಷ ಆಂದೋಲನ’

 

ನ.12, 20 ಹಾಗೂ ಡಿ.3, 4 ರಂದು ಅವಕಾಶ; ಸುದ್ದಿಗೋಷ್ಠಿಯಲ್ಲಿ ಡಿಸಿ ರಮೇಶ್ ಮಾಹಿತಿ

ಚಾಮರಾಜನಗರ: ಜಿಲ್ಲೆಯ ೪ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ನ.೯ ರಂದು ಪ್ರಚಾರ ಮಾಡಲಾಗಿದ್ದು, ಪಟ್ಟಿ ಪರಿಷ್ಕರಣೆಗೆ ವಿಶೇಷ ಆಂದೋಲನವನ್ನು ನ.೧೨ ಮತ್ತು ೨೦ ಮತ್ತು ಡಿ.೩ ಹಾಗೂ ೪ ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ತಿಳಿಸಿದರು.

ಈ ದಿನಾಂಕಗಳಂದು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಬೆಳಿಗ್ಗೆ ೯ ರಿಂದ ಸಂಜೆ ೫ ಗಂಟೆುಂವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಜರಿರುತ್ತಾರೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಕೈಬಿಡುವುದು, ತಿದ್ದುಪಡಿ ಮತ್ತು ಸ್ಥಳಾಂತರ ಸಂಬಂಧ ಅರ್ಜಿ ಸಲ್ಲಿಸಬಹುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಸಿದ್ಧತೆ ಕಾರ್ಯವನ್ನು ಮಹತ್ವದ್ದೆಂದು ಪರಿಗಣಿಸಲಾಗಿದೆ. ಅರ್ಹ ಮತದಾರರು ಮತದಾನದಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಿ, ಶೇ.೧೦೦ ರಷ್ಟು ದೋಷರಹಿತ ಮತದಾರರ ಪಟ್ಟಿ ತಯಾರಿಕೆಗೆ ಪೂರ್ವಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದರು.

ಪಟ್ಟಿ ಪರಿಷ್ಕರಣೆ ಸಂಬಂಧ ನ.೯ ರಿಂದ ಡಿ.೮ ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಡಿ.೨೬ ರಂದು ಇವುಗಳನ್ನು ಇತ್ಯರ್ಥ ಮಾಡಲಾಗುವುದು. ಅಂತಿಮ ಮತದಾರರ ಪಟ್ಟಿಯನ್ನು ಜ.೫ ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ತ್ರೈಮಾಸಿಕವಾಗಿ ವರ್ಷಕ್ಕೆ ೪ ಅವಕಾಶಗಳನ್ನು ನೀಡಿ, ಜ.೧, ಏ.೧, ಜು.೧, ಅ.೧ ಅನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಲಾಗಿದೆ. ಈ ದಿನಾಂಕಗಳಂದು ಅಥವಾ ಅದಕ್ಕೂ ಮೊದಲು ೧೮ ವರ್ಷ ಪೂರೈಸಿದ್ದರೆ ಹಾಗೂ ೧೭ ವರ್ಷ ತುಂಬಿರುವ ಯುವ ಮತದಾರರನ್ನು ಪಟ್ಟಿಗೆ ಸೇರಿಸಲು ಅರ್ಜಿ ಆಹ್ವಾನಿಸಲಾಗಿದೆ. ಸಂಬಂಧಪಟ್ಟ ಬಿ.ಎಲ್.ಒಗಳ ಮೂಲಕ ಅರ್ಜಿ ಅಥವಾ (ವಿಎಚ್‌ಎ) ಆ್ಯಪ್ ಮೂಲಕ ನೋಂದಾಯಿಸಬಹುದು ಎಂದು ತಿಳಿಸಿದರು.

ನ.೯ ರಿಂದ ಡಿ.೮ ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಮನೆ ಸಮೀಕ್ಷೆ ಕಾರ್ಯ ನಡೆಸಲಿದ್ದಾರೆ. ಅವರು ಮನೆ ಮನೆ ಭೇಟಿ ನೀಡಿದಾಗ ಕರಡು ಮತದಾರರ ಪಟ್ಟಿಯಲ್ಲಿರುವ ಮತದಾರರ ಹೆಸರುಗಳನ್ನು ಓದಿ ಸಂಬಂಧಿಸಿದ ಮತದಾರರಿಗೆ ತಿಳಿಸುವರು. ಏನಾದರೂ ಲೋಪಗಳು ಕಂಡುಬಂದಲ್ಲಿ ಅವುಗಳನ್ನು ಸರಿಪಡಿಸಲಾಗುತ್ತದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಆಧಾರ್ ಜೋಡಣೆಯಲ್ಲಿ ಶೇ.೭೬.೩೬ ಪ್ರಗತಿ
ಮತದಾರರ ಪಟ್ಟಿಗೆ ಆಧಾರ ಸಂಖ್ಯೆ ಜೋಡಿಸುವ ಕಾರ್ಯ ಆ.೧ ರಿಂದ ಚಾಲನೆಯಲ್ಲಿದೆ. ಜಿಲ್ಲೆಯ ೮,೩೫,೮೫೪ ಮತದಾರರ ಪೈಕಿ ೬,೩೮,೨೮೨ ಮತದಾರರ ಆಧಾರ ಸಂಖ್ಯೆಯನ್ನು ಪಟ್ಟಿಗೆ ಸೇರಿಸಲಾಗಿದ್ದು, ಶೇ.೭೬.೩೬ ರಷ್ಟು ಪ್ರಗತಿಯಾಗಿದೆ. ಉಳಿದ ೧೯೭೫೭೨ ಮತದಾರರ ಗುರುತಿಗೆ ಆಧಾರ ಸಂಖ್ಯೆ ಜೋಡಣೆಗೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು ೮,೩೫,೮೫೪ ಮತದಾರರು
ಹೊಸದಾಗಿ ಪ್ರಕಟಿಸಲಾದ ಪಟ್ಟಿ ಪ್ರಕಾರ ಜಿಲ್ಲೆಯ ೪ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ೮೩೫೮೫೪ ಮತದಾರರಿದ್ದಾರೆ. ಇವರಲ್ಲಿ ೪೧೪೪೮೧ ಪುರುಷ, ೪೨೦೩೨೬ ಮಹಿಳಾ, ೬೫ ಇತರೆ ಮತದಾರರಿದ್ದಾರೆ. ಹನೂರು ಕ್ಷೇತ್ರದಲ್ಲಿ ಒಟ್ಟು ೨೧೨೩೪೪ ಮತದಾರರಿದ್ದು, ಇವರಲ್ಲಿ ೧೦೭೬೦೮ ಪುರುಷ, ೧೦೪೪೬೮ ಮಹಿಳಾ, ಇತರೆ ೧೫ ಮತದಾರರಿದ್ದಾರೆ. ಕೊಳ್ಳೇಗಾಲ ಕ್ಷೇತ್ರದಲ್ಲಿ ಒಟ್ಟು ೨೧೧೩೭೫ ಮತದಾರರಿದ್ದು, ಇವರಲ್ಲಿ ೧೦೪೪೪೬ ಪುರುಷ, ೧೦೬೬೭೦ ಮಹಿಳಾ, ಇತರೆ ೧೮ ಮತದಾರರು ಇದ್ದಾರೆ. ಚಾ.ನಗರ ಕ್ಷೇತ್ರದಲ್ಲಿ ಒಟ್ಟು ೨೦೩೭೪೬ ಮತದಾರರರಿದ್ದು, ಇವರಲ್ಲಿ ೯೯೮೪೯ ಪುರುಷ, ೧೦೩೬೪೨ ಮಹಿಳಾ, ಇತರೆ ೧೬ ಮತದಾರರಿದ್ದಾರೆ. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಒಟ್ಟು ೨೦೮೩೮೯ ಮತದಾರರಿದ್ದು, ೧೦೨೫೭೮ ಪುರುಷ, ೧೦೫೫೪೬ ಮಹಿಳಾ, ಇತರೆ ೧೬ ಮತದಾರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ೯೮೨ ಮತಗಟ್ಟೆಗಳಿದ್ದು, ಹನೂರು ಕ್ಷೇತ್ರದಲ್ಲಿ ೨೫೩, ಕೊಳ್ಳೇಗಾಲ ಕ್ಷೇತ್ರದಲ್ಲಿ ೨೪೧, ಚಾ.ನಗರ ಕ್ಷೇತ್ರದಲ್ಲಿ ೨೩೯, ಗುಂಡ್ಲುಪೇಟೆ ಕ್ಷೇತ್ರದಲ್ಲಿ ೨೪೯ ಇವೆ. -ಡಿ.ಎಸ್.ರಮೇಶ್, ಜಿಲ್ಲಾಧಿಕಾರಿ

 

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago