ಮೈಸೂರು: ಜಾಗೃತ ಗ್ರಾಹಕರು ಸಮಾಜದ ಪ್ರಗತಿಯ ಮಾನದಂಡ ಎಂಬುದನ್ನು ಎಲ್ಲರೂ ನೆನಪಿಡಬೇಕು ಎಂದು ಉಪ ಪೊಲೀಸ್ ಆಯುಕ್ತರಾದ ಗೀತಾ ಪ್ರಸನ್ನ ಅಭಿಪ್ರಾಯಪಟ್ಟರು.
ಬುಧವಾರ ಶೇಷಾದ್ರಿ ಅಯ್ಯರ್ ರಸ್ತೆ, ಹಳೆ ಖಒಅ ಹತ್ತಿರ ಇರುವ ವಿದ್ಯಾವರ್ಧಕ ಕಾಲೇಜು ಆವರಣದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ವತಿಯಿಂದ ಏರ್ಪಡಿಸಲಾಗಿದ್ದ ಗ್ರಾಹಕ ಜಾಗೃತಿ ಸಮಾವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾಹಕರು ಪ್ರತಿ ಖರೀದಿಯ ಮೇಲೆ ರಸೀದಿ ಪಡೆಯುವುದನ್ನು ರೂಢಿ ಮಾಡಿಕೊಳ್ಳಬೇಕು. ಈ ಹಿಂದೆ ಜನರು ಕಿರಾಣಿ ಅಂಗಡಿ, ಸೀಮೆಎಣ್ಣೆಯ ಅಳತೆ ವಿಷಯದಲ್ಲಿ ಮಾತ್ರ ಜಾಗೃತರಾಗಿದ್ದರು. ಇತ್ತೀಚೆಗೆ ಮೊದಲಿಗಿಂತಲೂ ಹೆಚ್ಚು ಜಾಗೃತರಾಗಿದ್ದಾರೆ. ಇದರಿಂದ ಸಮಾಜದ ಪ್ರಗತಿಯೂ ಸುಲಭವಾಗುತ್ತದೆ ಎಂದರು.
ಹುಟ್ಟಿನಿಂದಲೂ ಸಾಯುವ ಕೊನೆ ಕ್ಷಣದವರೆಗೆ ಪ್ರತಿ ವ್ಯಕ್ತಿಯೂ ಗ್ರಾಹಕನಾಗಿರುತ್ತಾನೆ. ಸಮಯ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಆತ ಗ್ರಾಹಕನ ಪಾತ್ರ ನಿರ್ವಹಿಸುತ್ತಿರುತ್ತಾನೆ. ಹಾಗಾಗಿ, ಹೊಣೆಗಾರಿಕೆ ಅರಿತು ಗ್ರಾಹಕರ ಕಾಯಿದೆಯ ಜಾಗೃತಿ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಕಾನೂನುಗಳು ಎಲ್ಲರಿಗೂ ಅನ್ವಯವಾಗುತ್ತವೆ. ಆದರೆ, ತೋರಿಕೆಗೆ ಒಂದು ಉಪಯೋಗಕ್ಕೆ ಒಂದು ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಮನಸ್ಥಿತಿಯಿಂದ ಹೊರಬಂದು ಎಲ್ಲರೂ ಕಾನೂನಿನ ಅಡಿಯಲ್ಲಿಯೇ ಕಾರ್ಯನಿರ್ವಹಿಸುವ ಮತ್ತು ತಮ್ಮ ಜವಾಬ್ದಾರಿ ಪ್ರದರ್ಶಿಸುವಂತಾಗಬೇಕು ಎಂದರು.
ನಂತರ ಮಾತನಾಡಿದ ಕೇಂದ್ರೀಯ ಮಹಿಳಾ ಜಾಗರಣ ಪ್ರಮುಖರಾದ ಆಶಾಸಿಂಗ್, ಸಂಘಟನಾ ದೃಷ್ಟಿಯಿಂದ ಗ್ವಾಲಿಯರ್‌ನಿಂದ ಬಂದಿದ್ದೇನೆ. ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿರುವುದು ಸಂತಸ ತಂದಿದೆ. ಗ್ರಾಹಕ ಹಕ್ಕುಗಳನ್ನು ಸಾರ್ಥಕವಾಗಿ ಉಪಯೋಗಿಸಿಕೊಳ್ಳುತ್ತಾ ತಮ್ಮ ಸಮಸ್ಯೆಗಳನ್ನು ಜನರು ಸೂಕ್ತವಾಗಿ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾವರ್ಧಕ ಕಾನೂನು ಕಾಲೇಜಿನ ಖಜಾಂಚಿ ಶ್ರೀಶೈಲ ರಾಮಣ್ಣ, ಪ್ರೊ.ಕೆ.ಬಿ.ವಾಸುದೇವ, ಪ್ರಾಂಶುಪಾಲರಾದ ದೀಪು, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ರಾಜ್ಯ ಮಹಿಳಾ ಪ್ರಮುಖ್ ಗಾಯತ್ರಿ ನಾಡಿಗ್, ಮೈಸೂರು ಘಟಕದ ಅಧ್ಯಕ್ಷ ಡಾ. ಜಿ.ವಿ.ರವಿಶಂಕರ್, ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಮೈಸೂರು ವಲಯದ ಮಹಿಳಾ ಪ್ರಮುಖ ವಾಣಿ ಭಾಸ್ಕರ್, ಕಾರ್ಯದರ್ಶಿ ರಾಘವೇಂದ್ರ, ಲತಾ, ರವಿಶಂಕರ್ ವಕೀಲರಾದ ಶಿವರಾಜ್ ಇನ್ನಿತರರು ಹಾಜರಿದ್ದರು
ಮೈಸೂರು: ನಗರದ ಮೈಸೂರು-ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜು ಬಳಿ ನಿರ್ಮಿಸಲಾಗಿರುವ ಗುಂಬಜ್ ಮಾದರಿಯ ಬಸ್ ನಿಲ್ದಾಣದ ವಿವಾದ ಮತ್ತಷ್ಟು ಕಾವೇರಿದ್ದು, ನಿಲ್ದಾಣವನ್ನು ತೆರವುಗೊಳಿಸುವಂತೆ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಅಧಿಕರಿಗಳು ನಗರಪಾಲಿಕೆಗೆ ನೋಟೀಸ್ ನಿಡಿದ್ದಾರೆ.
ಮಂಗಳವಾರ ಮೈಸೂರು ಮಹಾನಗರ ಪಾಲಿಕೆಗೆ ನೋಟೀಸ್ ನೀಡಿರುವ ಹೆದ್ದರಿ ಪ್ರಾದಿಕಾರದ ಅಧಿಕಾರಿಗಳು ಮೈಸೂರು-ನಂಜನಗೂಡು-ಊಟಿ ರಸ್ತೆಯು ನ್ಯಾಷನಲ್ ಹೈವೆಯ ೭೬೬ರ ವ್ಯಾಪ್ತಿಯಲ್ಲಿ ಬರಲಿದ್ದು, ಅಲ್ಲಿ ಅನುಮತಿ ಇಲ್ಲದೆ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಹೀಗಾಗಿ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ನೋಟೀಸ್‌ನಲ್ಲಿ ತಿಳಿಸಿದ್ದಾರೆ.
ಪೊಲೀಸ್ ಬಂದೋಬಸ್ತ್: ಇದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಬಿಜೆಪಿ ಸಂಸದರೊಬ್ಬರು ಬಸ್ ನಿಲ್ದಾಣ ಮಸೀದಿಯ ಮಾದರಿಯಲ್ಲಿದೆ. ಅದನ್ನು ತೆರವುಗೊಳಿಸದಿದ್ದಲ್ಲಿ ನಾನೇ ಜೆಸಿಬಿ ಮೂಲಕ ತೆರವುಗೊಳಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು.
ಅವರ ಈ ಹೇಳಿಕೆ ಸರ್ಕಾರ ಅಥವ ಜಿಲ್ಲಾಡಳಿತಕ್ಕೆ ಮುಜುಗರ, ಆತಂಕ ತಂದಿರಬಹುದು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರ ಬೆಳಿಗ್ಗೆಯಿಂದಲೇ ಅಲ್ಲಿಗೆ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಪಾಳಿಯಲ್ಲಿ ಪೊಲೀಸರು ಬಸ್ ನಿಲ್ದಾಣವನ್ನು ಕಾಯುತ್ತಿದ್ದಾರೆ.
ನಾವು ಕಟ್ಟಿಸಿಲ್ಲ: ಮೈಸೂರು-ಊಟಿ ರಸ್ತೆಯಲ್ಲಿ ನಿರ್ಮಿಸಿರುವ ಬಸ್ ತಂಗುದಾಣಕ್ಕೆ ನಗರಪಾಲಿಕೆಯಿಂದ ಯಾವುದೇ ಅನುದಾನ ನೀಡಿಲ್ಲ. ಜೊತೆಗೆ ಸ್ಥಳವೂ ಕೂಡ ನಮ್ಮದಲ್ಲ. ಹೀಗಾಗಿ ಕಟ್ಟಡವನ್ನು ನಾವು ಕೆಡವುವ ಪ್ರಶ್ನೆಯೇ ಇಲ್ಲ ಎಂದು ನಗರಪಾಲಿಕೆ ಇಂಜಿನಿಯರುಗಳು ಹೇಳುತ್ತಾರೆ.
ಈ ಸಂಬಂದ ಪತ್ರಿಕೆಯೊಂದಿಗೆ ಮಾತನಾಡಿದ ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೀಡಿರುವ ನೋಟೀಸ್ ನನಗೆ ತಲುಪಿಲ್ಲ. ನೋಟೀಸ್ ಪರಿಶೀಲಿಸಿದ ಬಳಿಕ ಮಾತನಾಡುತ್ತೇನೆ ಎಂದು ಹೇಳಿದರು.
ಶಾಲೆಗೆ ಬೀಗ ಹಾಕಿರುವುದನ್ನು ಫೋಟೊ ತೆಗೆದು ಸಾಬೀತುಪಡಿಸಿದ ಕರವೇ; ಶಿಕ್ಷಕರ ವಿರುದ್ಧ ಆಕ್ರೋಶ ಹನೂರು: ಹನೂರು ಶೈಕ್ಷಣಿಕ ವಲಯದ ಕೆಲವೆಡೆ…
ಚಾಮರಾಜನಗರ: ಹೊಸ ವರ್ಷ-೨೦೨೬ರ ಸ್ವಾಗತಕ್ಕೆ ಜಿಲ್ಲೆಯ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ನಾನಾ ಕಡೆಯಿಂದ ಧಾವಿಸುವ ಪ್ರವಾಸಿಗರು ಅದಾಗಲೇ ವಸತಿ…
ಚಿರಂಜೀವಿ ಸಿ.ಹುಲ್ಲಹಳ್ಳಿ ಮೈಸೂರು: ನಗರದಲ್ಲಿ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವ ಸಾರ್ವಜನಿಕರ ಸಂಖ್ಯೆ ಹೆಚ್ಚಾಗಿದೆ. ನಗರ ಸಾರಿಗೆಗೆ ಪ್ರಸಕ್ತ ವರ್ಷ ೯೬…
ಮಂಡ್ಯ : ಪೌತಿ ಖಾತಾ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಮುಂದಿನ ಆರು ತಿಂಗಳುಗಳೊಳಗೆ ಪೌತಿ ಖಾತಾ ಆಂದೋಲನದಲ್ಲಿ ಯಾವುದೇ…
ಬೆಂಗಳೂರು : ಉದ್ಯೋಗ ಖಾತರಿಯನ್ನು ಇಲ್ಲವಾಗಿಸುವ ಮತ್ತು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವ್ಯತಿರಿಕ್ತವಾಗಿರುವ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು…