ಮೈಸೂರು: ಕೆಲಸ ಮಾಡುತ್ತಿದ್ದ ವೇಳೆ ತೀವ್ರ ಆಯಾಸಕ್ಕೆ ಒಳಗಾದ ಲೈನ್‌ಮನ್ ಒಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ನಗರದಲ್ಲಿ ನಡೆದಿದೆ. ಚಾಮುಂಡಿಪುರಂ ಶಾಖೆಯ ಸರ್ವಿಸ್ ಸ್ಟೇಷನ್ ನೌಕರ, ಕನಕಗಿರಿ ನಿವಾಸಿ ಮಹದೇವ(58) ಮೃತಪಟ್ಟವರು. ಭಾನುವಾರ ಮಧ್ಯಾಹ್ನ 1.30 ರ ಸುಮಾರಿನಲ್ಲಿ ನಗರದ ಮೈಸೂರು – ಮಾನಂದವಾಡಿ ರಸ್ತೆಯ ಸ್ಯಾಂಡಲ್ ಫ್ಯಾಕ್ಟರಿ ಬಳಿ ಇರುವ ಕೆಇಬಿಗೆ ಹೋಗುವ ರಸ್ತೆಯಲ್ಲಿ ಜಂಪ್ ರೀವರ್ಕ್ ನಡೆಯುತ್ತಿತ್ತು. ಈ ವೇಳೆ ಏಣಿಯಲ್ಲಿ ಕೆಲಸ ಮಾಡುತ್ತಿದ್ದ ಮಹದೇವು ಅವರು ತೀವ್ರ ಆಯಾಸಗೊಂಡಿದ್ದಾರೆ. ಇದನ್ನು ಗಮನಿಸಿದ ಕೆಳಗಿದ್ದ ಸಿಬ್ಬಂದಿ ಏಣಿ ಹತ್ತಿ ಅವರನ್ನು ಇಳಿಸಿಕೊಂಡು, ತಕ್ಷಣ ಜೆ.ಪಿ. ನಗರದ ಕಾಮಾಕ್ಷಿ ಆಸ್ಪತ್ರೆಗೆ ದಾಖಲಾಗಿಸಿದ್ದಾರೆ. ಅಲ್ಲಿ ವೈದ್ಯರು ತಪಾಸಣೆ ನಡೆಸಿ, ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ನಗರ ಅಶೋಕಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಫ್ಲೆಕ್ಸ್ ಹಾವಳಿ ಮಿತಿ ಮೀರಿದ್ದು, ರಸ್ತೆ ಬದಿಯಲ್ಲಿ ಹಾಕಿರುವ ಬೃಹದಾಕಾರದ ಫ್ಲೆಕ್ಸ್‌ಗಳಿಂದಾಗಿ ಪ್ರತಿನಿತ್ಯ ರಸ್ತೆಯಲ್ಲಿ ಸಂಚರಿಸುವ…
ಉತ್ತರ ಪ್ರದೇಶ ಸರ್ಕಾರವು ಆ ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ‘ಮಾನವ ಸಂಪದ್ ಪೋರ್ಟಲ್’ ಎಂಬ ಅಧಿಕೃತ…
ಹುಣಸೂರು ತಾಲ್ಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ಗ್ರಾಪಂನವರು ಸಕಾಲಕ್ಕೆ ಕಸ ವಿಲೇವಾರಿ ಮಾಡದೇ ಇರುವುದರಿಂದ ಕಸದ ರಾಶಿಯೇ ಬಿದ್ದಿದ್ದು, ಸೊಳ್ಳೆ, ನೊಣಗಳ…
ಐಪಿಎಲ್ ಆವೃತ್ತಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನು ಹೊಂದಿದೆ, ಈ ಆವೃತ್ತಿಯಲ್ಲಿ ನಾನಾ ರಾಜ್ಯಗಳ ಹೆಸರಿನಲ್ಲಿ ಹಲವು ತಂಡಗಳು ಸೆಣಸಾಡಲಿವೆ. ನಮ್ಮ…
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಂಪೆಯ ಸಾಣಾಪುರದ ಬಳಿ ೨೦೨೫ ಮಾರ್ಚಿನಲ್ಲಿ ಇಸ್ರೇಲ್ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ವಿದೇಶಿಗನ…
ಮೈಸೂರು ತಾಲ್ಲೂಕು ಜಯಪುರ ಹೋಬಳಿಯ ಧನಗಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕರ್ನಾಟಕ ಗೃಹ ಮಂಡಳಿ (ಕೆಹೆಚ್‌ಬಿ) ಬಡಾವಣೆಗೆ ಕುಡಿಯುವ ನೀರು ಸರಬರಾಜು…