ಜಿಲ್ಲೆಗಳು

ಹೇಮಾವತಿ ನದಿ ದ್ವೀಪದಲ್ಲಿ ಸಿಕ್ಕಿಬಿದ್ದ ಕುರಿಗಾಹಿಗಳು

ಉಕ್ಕಿ ಹರಿಯುವ ನೀರಿನ ಮಧ್ಯೆ 900 ಕುರಿಗಳೊಂದಿಗೆ 10 ಕುರಿಗಾಹಿಗಳು ಬಂಧಿ

 ಕೆ.ಆರ್.ಪೇಟೆ: ಹೇಮಾವತಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಬಳಿಯ ದ್ವೀಪದಲ್ಲಿ 900 ಕುರಿಗಳೊಂದಿಗೆ  10ಮಂದಿ ಕುರಿಗಾಹಿಗಳು ಅಪಾಯದಲ್ಲಿ ಸಿಲುಕಿದ್ದಾರೆ.

ಎರಡು ದಿನಗಳಿಂದ ಆಹಾರವಿಲ್ಲದೆ ಬಳಲುತ್ತಿರುವ 10ಮಂದಿ ಕುರಿಗಾಹಿಗಳ ತಂಡ. ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿ ದಸೂಡಿ ಪಕ್ಕ ಕರೆಬಲಾಯ್ಯನಹಟ್ಟಿ ನಿವಾಸಿ, ತಿಮ್ಮಯ್ಯ, ಮತ್ತು ಚಿತ್ರದೇವರಹಟ್ಟಿ, ಗಂಗಣ್ಣ ಈ 2, ಕುಟುಂಬದ 900 ಕುರಿಗಳು ವಲಸೆ ಹೋಗಿದ್ದು ಮಂಡ್ಯ ಜಿಲ್ಲೆ, KR ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳದ ಪಕ್ಕ 1ಕಿಲೋ ಮೀಟರ್ ದೂರದಲ್ಲೀರುವ 2 ಹೊಳೆಗಳ ಮಧ್ಯೆ 300 ಎಕ್ಕರೆ ಖಾಲಿ ಜಾಗವಿರುತ್ತದೆ. ಕುರಿಗಳಿಗೆ ಮೇವು ಜಾಸ್ತಿ ಇದ್ದಿದ್ದರಿಂದ ಪ್ರತಿ ವರ್ಷ ಅಲ್ಲಿಗೆ ಹೋಗಿ 8 ರಿಂದ 10 ದಿವಸ ಕುರಿಗಳನ್ನು ಮೇಯಿಸಿಕೊಂಡು ವಾಪಸ್ಸು ದ್ವೀಪದಿಂದ ಹೊರಗಡೆ ಬರುತ್ತಿದ್ದರು. ಆದರೆ ಈಗ 15, ದಿನದ ಹಿಂದೆ ಪ್ರತಿ ವರ್ಷದಂತೆ ಅದೇ ದ್ವೀಪ ಜಾಗಕ್ಕೆ ಕುರಿಗಳನ್ನು ಮೇಯಿಸಲು ಹೋಗಿರುತ್ತಾರೆ, ಹೋಗಿದ್ದ ರಾತ್ರಿವೇಳೆಯಲ್ಲಿ ಸುತ್ತಲೂ ಹರಿಯುವ ಹೇಮಾವತಿ ನದಿಯಲ್ಲಿ ನೀರು ಜಾಸ್ತಿಯಾಗಿದ್ದು, ಆ ಎರಡು ಕುಟುಂಬದ 10 ಮಂದಿ ಕುರಿಗಾಹಿಗಳು ಹಾಗೂ ಸುಮಾರು 900 ಕುರಿಗಳು ದ್ವೀಪದ ಮದ್ಯದಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ, ನದಿಯ ನೀರು ಜಾಸ್ತಿಯಾಗಿದೆ, ಅಲ್ಲಿನ ನೀರಿನ ಹರಿಯುವ ಪ್ರಮಾಣ ತುಂಬಾ ಜಾಸ್ತಿಯಾಗಿದ್ದು ಅಪಾಯ ದಲ್ಲಿ ಸಿಲುಕಿದ್ದಾರೆ.

ವಿಷಯ ತಿಳಿದ ಕೂಡಲೇ ತಹಸೀಲ್ದಾರ್ ಎಂ.ವಿ.ರೂಪಾ ಅವರು ಅಗ್ನಿಶಾಮಕ ಹಾಗೂ ಪೋಲೀಸ್ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಬೇಟಿ ನೀಡಿ ಕುರಿಗಾಯಿಗಳಿಗೆ ಊಟೋಪಚಾರ ನೀಡಿ, ಸುರಕ್ಷಿತವಾಗಿ ಹೊರಗೆ ಕರೆತರಲು ಅವಿರತ ಪ್ರಯತ್ನ ಮಾಡುತ್ತಿದ್ದಾರೆ

andolana

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

11 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

15 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

15 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

15 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

15 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

16 hours ago