ಉಕ್ಕಿ ಹರಿಯುವ ನೀರಿನ ಮಧ್ಯೆ 900 ಕುರಿಗಳೊಂದಿಗೆ 10 ಕುರಿಗಾಹಿಗಳು ಬಂಧಿ
ಕೆ.ಆರ್.ಪೇಟೆ: ಹೇಮಾವತಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಬಳಿಯ ದ್ವೀಪದಲ್ಲಿ 900 ಕುರಿಗಳೊಂದಿಗೆ 10ಮಂದಿ ಕುರಿಗಾಹಿಗಳು ಅಪಾಯದಲ್ಲಿ ಸಿಲುಕಿದ್ದಾರೆ.
ಎರಡು ದಿನಗಳಿಂದ ಆಹಾರವಿಲ್ಲದೆ ಬಳಲುತ್ತಿರುವ 10ಮಂದಿ ಕುರಿಗಾಹಿಗಳ ತಂಡ. ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿ ದಸೂಡಿ ಪಕ್ಕ ಕರೆಬಲಾಯ್ಯನಹಟ್ಟಿ ನಿವಾಸಿ, ತಿಮ್ಮಯ್ಯ, ಮತ್ತು ಚಿತ್ರದೇವರಹಟ್ಟಿ, ಗಂಗಣ್ಣ ಈ 2, ಕುಟುಂಬದ 900 ಕುರಿಗಳು ವಲಸೆ ಹೋಗಿದ್ದು ಮಂಡ್ಯ ಜಿಲ್ಲೆ, KR ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳದ ಪಕ್ಕ 1ಕಿಲೋ ಮೀಟರ್ ದೂರದಲ್ಲೀರುವ 2 ಹೊಳೆಗಳ ಮಧ್ಯೆ 300 ಎಕ್ಕರೆ ಖಾಲಿ ಜಾಗವಿರುತ್ತದೆ. ಕುರಿಗಳಿಗೆ ಮೇವು ಜಾಸ್ತಿ ಇದ್ದಿದ್ದರಿಂದ ಪ್ರತಿ ವರ್ಷ ಅಲ್ಲಿಗೆ ಹೋಗಿ 8 ರಿಂದ 10 ದಿವಸ ಕುರಿಗಳನ್ನು ಮೇಯಿಸಿಕೊಂಡು ವಾಪಸ್ಸು ದ್ವೀಪದಿಂದ ಹೊರಗಡೆ ಬರುತ್ತಿದ್ದರು. ಆದರೆ ಈಗ 15, ದಿನದ ಹಿಂದೆ ಪ್ರತಿ ವರ್ಷದಂತೆ ಅದೇ ದ್ವೀಪ ಜಾಗಕ್ಕೆ ಕುರಿಗಳನ್ನು ಮೇಯಿಸಲು ಹೋಗಿರುತ್ತಾರೆ, ಹೋಗಿದ್ದ ರಾತ್ರಿವೇಳೆಯಲ್ಲಿ ಸುತ್ತಲೂ ಹರಿಯುವ ಹೇಮಾವತಿ ನದಿಯಲ್ಲಿ ನೀರು ಜಾಸ್ತಿಯಾಗಿದ್ದು, ಆ ಎರಡು ಕುಟುಂಬದ 10 ಮಂದಿ ಕುರಿಗಾಹಿಗಳು ಹಾಗೂ ಸುಮಾರು 900 ಕುರಿಗಳು ದ್ವೀಪದ ಮದ್ಯದಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ, ನದಿಯ ನೀರು ಜಾಸ್ತಿಯಾಗಿದೆ, ಅಲ್ಲಿನ ನೀರಿನ ಹರಿಯುವ ಪ್ರಮಾಣ ತುಂಬಾ ಜಾಸ್ತಿಯಾಗಿದ್ದು ಅಪಾಯ ದಲ್ಲಿ ಸಿಲುಕಿದ್ದಾರೆ.
ವಿಷಯ ತಿಳಿದ ಕೂಡಲೇ ತಹಸೀಲ್ದಾರ್ ಎಂ.ವಿ.ರೂಪಾ ಅವರು ಅಗ್ನಿಶಾಮಕ ಹಾಗೂ ಪೋಲೀಸ್ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಬೇಟಿ ನೀಡಿ ಕುರಿಗಾಯಿಗಳಿಗೆ ಊಟೋಪಚಾರ ನೀಡಿ, ಸುರಕ್ಷಿತವಾಗಿ ಹೊರಗೆ ಕರೆತರಲು ಅವಿರತ ಪ್ರಯತ್ನ ಮಾಡುತ್ತಿದ್ದಾರೆ
ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…
ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…
ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…
ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…
ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…
ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…