ಕುಶಾಲನಗರ : ಅಪರಿಚಿತ ವ್ಯಕ್ತಿಯೋರ್ವ ವೃದ್ಧೆಯನ್ನು ವಶೀಕರಣ ಮಾಡಿ ವೃದ್ಧೆಯ ಚಿನ್ನಾಭರಣ ಅಪಹರಿಸಿದ ಘಟನೆ ಕುಶಾಲನಗರದ ಜನತಾ ಕಾಲನಿಯಲ್ಲಿ ನಡೆದಿದೆ. ಜನತಾ ಕಾಲನಿ 1ನೇ ಕ್ರಾಸ್ ನಿವಾಸಿಯಾದ ಅಬಕಾರಿ
ಇಲಾಖೆಯ ನಿವೃತ್ತ ನೌಕರ ಐತಪ್ಪನವರವ ಪತ್ನಿ ದೇವಮ್ಮನವರ ಚಿನ್ನಾಭರಣ ಕಳವು ಮಾಡಲಾಗಿದೆ. ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿ, ದೇವಮ್ಮನವರನ್ನು ವಶೀಕರಿಸಿ ಚಿನ್ನಾಭರಣ ಕಳವು ಮಾಡಲಾಗಿದೆ. ಮನೆ ಸಮೀಪದ ಗೌರಿ ಗಣೇಶ
ದೇವಾಲಯಕ್ಕೆ ಕಾಣಿಕೆ ನೀಡುವ ನೆಪದಲ್ಲಿ ಮನೆಯಂಗಳಕ್ಕೆ ಬಂದ ಅಪರಿಚಿತ ವ್ಯಕ್ತಿ, ಗಂಧದ ಕಡ್ಡಿ, ಬಿಸ್ಕತ್ ಪ್ಯಾಕ್, ಫೈವ್ ಸ್ಟಾರ್ ತುಂಬಿದ್ದ ಪ್ಲಾಸ್ಟಿಕ್ ಕವ ರ್ ಅನ್ನು ವೃದ್ಧೆಗೆ ನೀಡಿದ್ದಾನೆ. 100 ರೂಗಳ ಐದು ನೋಟು ಕೈಗೆ ನೀಡಿ ದೇವಾಲಯಕ್ಕೆ ಕಾಣಿಕೆ ಅರ್ಪಿಸಿ ಎಂದ ಬಳಿಕ, 100 ರೂ ನ ಒಂದು ನೋಟನ್ನು ಮಹಿಳೆಯ ಕೈಗೆ ಸುತ್ತುತ್ತಿದ್ದಂತೆ ಮಹಿಳೆ ಬಳೆ ಬಿಚ್ಚಿ ಕೊಟ್ಟಿದ್ದಾರೆ.
ಇವರ ಜೊತೆಯಲ್ಲಿ ಪತಿ ಐತಪ್ಪ ಕೂಡ ಇದ್ದರು ಒಂದು ಹಂತದಲ್ಲಿ ಬಳೆ ಬಿಚ್ಚಿಕೊಟ್ಟ ಬಳಿಕ ಕುತ್ತಿಗೆಗೆ ಕೈ ಹಾಕುತ್ತಿದ್ದಂತೆ ಪತಿ ಐತಪ್ಪ ಅವರಿಗೆ ಮೋಸದ ವಾಸನೆ ಬಂದಿದೆ. ನಂತರ ಸರವನ್ನು ಕೊಡಬೇಡ ಎನ್ನುತ್ತಿದ್ದಂತೆ ಅಪರಿಚಿತ ಸ್ಥಳದಿಂದ
ಕಾಲ್ಕಿತ್ತಿದ್ದು, ಸುಧಾರಿಸಿಕೊಂಡು ನೋಡುವಷ್ಟರಲ್ಲಿ ಬಳೆಯೊಂದಿಗೆ ಅಪರಿಚಿತ ಮಾಯವಾಗಿದ್ದಾನೆ. ಬೈಕ್ಅನ್ನು ಮುಖ್ಯ ರಸ್ತೆಯಲ್ಲಿ ನಿಲ್ಲಿಸಿ ಬಂದಿದ್ದ ಅಪರಿಚಿತನೊಂದಿಗೆ ಮತ್ತೊಬ್ಬ ಇದ್ದ ಎನ್ನಲಾಗಿದ್ದು,
ಸ್ಥಳಕ್ಕೆ ಭೇಟಿ ನೀಡಿದ ಕುಶಾಲನಗರ ಪಟ್ಟಣ ಪೊಲೀಸರು ಪರಿಶೀಲನೆ ನಡೆಸಿ, ಖದೀಮರ ಬೆನ್ನಟ್ಟಿದ್ದಾರೆ.
ಪಟ್ಟಣದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಲಿದ್ದು, ಪೊಲೀಸರು ಇದರ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹೊಸದಿಲ್ಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಹತ್ವದ ಸುದ್ದಿಯೊಂದನ್ನು ನೀಡಿದೆ.…
ಹೊಸದಿಲ್ಲಿ : ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಸಂಪುಟ ಸಚಿವಾಲಯಗಳನ್ನು ಒಳಗೊಂಡಿರುವ ‘ಸೇವಾ…
ಹೊಸದಿಲ್ಲಿ : ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ‘ಡಿ’ಗುಂಪಿನ ಪಂದ್ಯದಲ್ಲಿ ಯುಎಇ ಕ್ರಿಕೆಟ್ ತಂಡವು ಕೆನಡಾ ತಂಡವನ್ನು ಐದು…
ಸೇಲಂ : ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ರ‍್ಯಾಲಿ ವೇಳೆ ಕುಸಿದು ಬಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ…
ಬೆಂಗಳೂರು : ಭಾರತೀಯ ರೈಲ್ವೆಯು ತನ್ನ ಅಧಿಕೃತ ಆಪ್ ‘ರೈಲ್‌ಒನ್’ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ರೈಲ್ವೆ ಸೇವೆಗಳೆಲ್ಲವೂ…