ಜಿಲ್ಲೆಗಳು

ಪಬ್ಬಜ ಶಿಬಿರ ಸಮಾರೋಪ ಸಮಾರಂಭ ಉದ್ಘಾಟಿಸಿದ ಸಾಹಿತಿ ಕೆ.ಎಸ್.ಭಗವಾನ್

ಮೈಸೂರು: ಸ್ವಾಮಿ ವಿವೇಕಾನಂದರನ್ನು ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತ ಮಾಡಿದ್ದಾರೆ. ವಾಸ್ತವಾಗಿ ನೋಡಿದರೆ ವಿವೇಕಾನಂದರು ಹಿಂದೂ ಧರ್ಮವನ್ನು ಒಪ್ಪಿಕೊಂಡಿರಲಿಲ್ಲ. ಅವರ ಸಂಪುಟಗಳನ್ನು ಓದಿದಾಗ ಬುದ್ಧರನ್ನು ಅಪಾರವಾಗಿ ಇಷ್ಟಪಡುತ್ತಿದ್ದರು ಎಂದು ಸಾಹಿತಿ ಹಾಗೂ ಪ್ರಗತಿಪರ ಚಿಂತಕರಾದ ಕೆ.ಎಸ್. ಭಗವಾನ್ ಹೇಳಿದರು.

ವಿಜಯನಗರ ೧ನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಬುದ್ಧವಿಹಾರದಲ್ಲಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಮತ್ತು ಭಾರತೀಯ ಬೌದ್ಧ ಮಹಾಸಭಾದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪಬ್ಬಜ ತರಬೇತಿ ಶಿಬಿರದ ಸಮಾರೋಪ‌ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೂ ಧರ್ಮವನ್ನು ವಿವೇಕಾನಂದರಷ್ಟು ಟೀಕಿಸಿದವರು ಬೇರಾರೂ ಟೀಕಿಸಿಲ್ಲ. ದೀನದಲಿತರನ್ನು ಹಿಂಧೂಧರ್ಮವು ತುಳಿದಷ್ಟೂ ಪ್ರಪಂಚದ ಬೇರಾವ ಧರ್ಮಗಳೂ ತುಳಿಯಲಿಲ್ಲ ಎಂದರು.

ಬುದ್ಧಧಮ್ಮವು ಅನುಭವದ ಮೇಲೆ ನಿಂತಿದೆ. ಇದೊಂದು ವೈಜ್ಞಾನಿಕವಾದ ಧರ್ಮವಾಗಿದೆ. ಆದ್ದರಿಂದಲೇ ಬಾಬಾಸಾಹೇಬರು ಎಲ್ಲಾ ಧರ್ಮಗಳನ್ನು ಅಧ್ಯಯನ ಮಾಡಿ ವೈಜ್ಞಾನಿಕ ಮತ್ತು ವೈಚಾರಿಕವಾದ ಮಾನವೀಯ ಮೌಲ್ಯಗಳನ್ನು ಒಳಗೊಂಡ ಬೌದ್ಧಧರ್ಮಕ್ಕೆ ಸೇರ್ಪಡೆಗೊಂಡರು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಬುದ್ಧಧಮ್ಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಮಹಾದೇವಪ್ಪ, ಆಧ್ಯಾತ್ಮ ಅನ್ವಯಿಸುವಂತಹದ್ದು ಇದು ವಿವರಣೆಗಳಿಗೆ ಸಿಗುವುದಿಲ್ಲ. ಆಚರಿಸುವಂತಹದ್ದಲ್ಲ, ಅದು ಆನಂದವನ್ನುಂಟು ಮಾಡುತ್ತದೆ. ಆನಂದ ಹಂಚಲು ಸಿಗುವುದಿಲ್ಲ ಅನುಭವಿಸಬೇಕು. ಕರುಣೆ, ಪ್ರೀತಿ, ಮಮತೆ ಉಕ್ಕಿ ಹರಿದಾಗ ಆನಂದ ಸಿಗುತ್ತದೆ. ಅಧ್ಯಾತ್ಮ ಅಂತರಂಗದ ವಿಷಯವೇ ಹೊರತು ಬಹಿರಂಗವಲ್ಲ. ಬಹಿರಂಗದಲ್ಲಿ ನಡೆಯುವ ಘಟನೆಗಳು, ವಸ್ತುವಿಷಯಗಳು ನಮ್ಮಲ್ಲಿನ ಭಾವನೆಗಳನ್ನು ಕೆಣಕಿ ಕೆರಳಿಸುತ್ತವೆ. ಆಧ್ಯಾತ್ಮಕ್ಕಾಗಿ ಗುಡಿ- ಗೋಪುರಗಳನ್ನು ಸುತ್ತುವುದು ಮೌಢ್ಯ ವೆನಿಸುತ್ತದೆ ಎಂದು ಹೇಳಿದರು.

ಇದೇ ವೇಳೆ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಡಾ.ಕಲ್ಯಾಣ ಸಿರಿ ಭಂತೇಜಿಯವರು ಪ್ರಮಾಣಪತ್ರಗಳನ್ನು ವಿತರಿಸಿದರು.

ಭಾರತೀಯ ಬೌದ್ಧ ಮಹಾಸಭಾದ ಉಪಾಧ್ಯಕ್ಷ ಮಹೇಂದ್ರ ಮಂಕಾಳೆ ಅಧ್ಯಕ್ಷತೆ ವಹಿಸಿದ್ದರು. ಸಂಘಮಿತ್ರ ಭಂತೇಜಿ, ಸಂಘಸೇವಕ ಭಂತೇಜಿ, ಹೋರಾಟಗಾರ ಮಂಟೇಲಿಂಗಯ್ಯ, ಮನೋಹರ್ ಮೌರ್ಯ, ಬಾಬುರಾವ್ ಅಣದೊರೆ, ಮಾತನಾಡಿದರು. ಅರ್ಜುನ್ ರಾವ್ ಕೇಸರಿ, ಸಮಿತಿಯ ಸಹ ಕಾರ್ಯದರ್ಶಿ ಎಚ್.ಶಿವರಾಜು, ಆರ್.ನಟರಾಜು, ರಾಜು ಹಂಪಾಪುರ, ನಿಸರ್ಗ ಸಿದ್ದರಾಜು, ಟಿ.ಎಂ.ನಾಗರಾಜು, ಡಾ.ಜಗದೀಶ್, ಡಾ.ಜಗನ್ನಾಥ್, ಶಾಂತಿ ಮಂಜು, ಉತ್ತಂಬಳ್ಳಿ ನಾಗರಾಜು, ಮಾ.ನಾಗಯ್ಯ, ಪ್ರೊ.ಅಮೂಲ್ಯ, ಶಾಂತಿ ಮಂಜು, ಡಾ.ಮಂಜು ಸತ್ತಿಗೆಹುಂಡಿ, ನಿರಂಜನ್, ಮೂರ್ತಿ, ಲಕ್ಷ್ಮಣ್, ರೂಪೇಶ್, ಸುರೇಶ್ ಕಂದೇಗಾಲ ಇನ್ನಿತರರು ಹಾಜರಿದ್ದರು.

andolana

Recent Posts

ಉಪಟಳ ನೀಡುತ್ತಿದ್ದ ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಜನತೆ

ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…

6 hours ago

ಮೃಗಾಲಯದ ಬೇಟೆ ಚೀತಾ ‘ಬ್ರೂಕ್’ ಇನ್ನಿಲ್ಲ

ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…

7 hours ago

ಸಿಲಿಂಡರ್‌ ಸ್ಫೋಟ ಪ್ರಕರಣ : ತನಿಖೆ ತೀವ್ರ ; ಮೈಸೂರಲ್ಲಿ ಖಾಕಿ ಕಟ್ಟೆಚ್ಚರ

ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…

7 hours ago

ಎಚ್.ಡಿ.ಕೋಟೆ | ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ಮಾದರಿ ಕಾರ್ಯಕ್ರಮ

ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…

7 hours ago

ಹೊಗೇನಕಲ್‌ ಜಲಪಾತಕ್ಕೆ ಪ್ರವಾಸಿಗರ ದಂಡು

ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…

7 hours ago

ಪುಷ್ಪ-2 ಕಾಲ್ತುಳಿತ ಪ್ರಕರಣ ; ವರ್ಷದ ಬಳಿಕ ಚಾರ್ಜ್‌ಶೀಟ್‌ ಸಲ್ಲಿಕೆ

ಹೈದರಾಬಾದ್‌ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…

7 hours ago