ಅಡ್ಡಂಡ ಕಾರ್ಯಪ್ಪಗೆ ತುರ್ತಾಗಿ ಎಂಎಲ್‌ಸಿ ಆಗಬೇಕಿದೆ: ಅಡಗೂರು ವ್ಯಂಗ್ಯ
ಮೈಸೂರು: ರಂಗಾಯಣವನ್ನು ಒಂದು ಧರ್ಮದ ವಿರುದ್ಧ ಅಪಪ್ರಚಾರಕ್ಕೆ, ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿಚಾರಗಳನ್ನು ಪ್ರಚಾರ ಮಾಡಲು ಬಳಸುತ್ತಿರುವ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ಮೊದಲು ಕಿತ್ತೊಗೆಯಬೇಕು. ಎಂಎಲ್‌ಸಿ ಆಗುವ ಭರದಲ್ಲಿ ಅವರು ನಡೆದುಕೊಳ್ಳುತ್ತಿರುವುದನ್ನು ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ರಂಗಾಯಣ ಸಾಂಸ್ಕೃತಿಕ ಲೋಕದ ತಾಣ. ೧೯೯೩ರಲ್ಲಿ ತಾವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾಗ ಕಾನೂನು ಪ್ರಕಾರ ನೋಂದಣಿ ಮಾಡಿ, ವಾರ್ಷಿಕ ನಿರ್ವಹಣೆಗೆ ೨೫ ಲಕ್ಷ ರೂ.ಅನುದಾನ ಮೀಸಲಿಡುವಂತೆ ಮಾಡಲಾಗಿತ್ತು. ಆದರೆ, ಈಗ ರಂಗಾಯಣವನ್ನು ಧರ್ಮದ ಪ್ರಚಾರಕ್ಕೆ ಬಳಸುತ್ತಿರುವುದು ಬೇಸರದ ಸಂಗತಿ ಎಂದರು.
ಅಡ್ಡಂಡ ಹೆಸರಿಂದ ಮೊದಲು ಕಾರ್ಯಪ್ಪ ಎಂಬುದನ್ನು ತೆಗೆಯಬೇಕು. ಕಾರ್ಯಪ್ಪ ದಂಡನಾಯಕರಾಗಿದ್ದವರು. ಅವರ ಹೆಸರನ್ನಿಟ್ಟುಕೊಂಡು ಕೊಡಗಿಗೆ ಅಪಮಾನ ಮಾಡಬೇಡಿ. ಅಡ್ಡಂಡ ಅಡ್ನಾಡಿಯಾಗಿದ್ದಾರೆ. ತುರ್ತಾಗಿ ಎಂಎಲ್‌ಸಿಯಾಗಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿಚಾರಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಪರಿಷತ್ ಸದಸ್ಯರಾಗಲು ವಾಮಮಾರ್ಗ ಅನುಸರಿಸಬೇಡಿ. ಸಾಂಸ್ಕೃತಿಕ ಲೋಕದ ವಾತಾವರಣವನ್ನು ಹಾಳು ಮಾಡಬೇಡಿ ಎಂದು ಕಿಡಿಕಾರಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಿರ್ದೇಶಕರನ್ನು ಕಿತ್ತೊಗೆಯಬೇಕು. ಇಲ್ಲದಿದ್ದರೆ ರಂಗಾಯಣದ ವಾತಾವರಣ ಮತ್ತಷ್ಟು ಹದಗೆಡಲಿ ಎಂದರು.
ಸಾಹಿತ್ಯ ಕ್ಷೇತ್ರದ ದಿಗ್ಗಜ ಎನ್ನಿಸಿಕೊಂಡ ಎಸ್.ಎಲ್.ಭೈರಪ್ಪ ಅವರು ಅಡ್ಡಂಡ ಜೊತೆಗೂಡಿ ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ. ಅವರಿಗೂ ತುರ್ತಾಗಿ ಜ್ಞಾನಪೀಠ ಪ್ರಶಸ್ತಿ ಬೇಕಾಗಿದೆ. ಆದ್ದರಿಂದ ಅವರಿಗೂ ಜ್ಞಾನಪೀಠ ಪ್ರಶಸ್ತಿ ಕೊಟ್ಟುಬಿಟ್ಟರೆ ಸುಮ್ಮನಾಗುತ್ತಾರೆ ಎಂದು ಟೀಕಿಸಿದರು.
ಯಾವ್ಯಾವ ರೋಗ ಅಂಟಿಸಿಕೊಂಡಿದ್ದೀಯಾ
ನಾನು ಚೆನ್ನಾಗಿದ್ದೇನೆ. ನಿನಗೆ ಏನು ರೋಗ ಬಂದಿದೆ? ಧರ್ಮ, ಜಾತಿ ಸೇರಿದಂತೆ ಯಾವ್ಯಾವ ರೋಗ ಅಂಟಿಕೊಂಡು ಕೂತಿದೆ ಎಂದು ಎ.ಎಚ್.ವಿಶ್ವನಾಥ್, ಸಂಸದ ಪ್ರತಾಪ್ ಸಿಂಹ ವಿರುದ್ಧ ಕುಟುಕಿದರು.
ನಾನು ರಾಜಕೀಯ ಪಕ್ಷದ ತತ್ವ-ಸಿದ್ಧಾಂತದ ಬಗ್ಗೆ ಮಾತನಾಡಲ್ಲ. ಎಲ್ಲಾ ಪಕ್ಷಗಳ ಸಿದ್ಧಾಂತಗಳೂ ಸರಿಯಾಗಿದೆ. ಆದರೆ,ಅದನ್ನು ನಡೆಸುವವರ ನಡವಳಿಕೆ ಮತ್ತು ಮನಸ್ಥಿತಿ ಸರಿಯಿಲ್ಲ ಎಂದು ಹೇಳಿದರು. ತನ್ವೀರ್‌ಸೇಠ್ ಸಾಬ್ರು, ವಿಶ್ವನಾಥ್ ಏನಾಗಿದ್ದಾರೆಂದು ಪ್ರತಾಪ್ ಸಿಂಹ ಪ್ರಶ್ನಿಸಿರುವ ಮಾತಿಗೆ ತೀಕ್ಷ್ಣವಾಗಿಯೇ ತಿರುಗೇಟು ಕೊಟ್ಟ ಎ.ಎಚ್.ವಿಶ್ವನಾಥ್, ನನಗೆ ಏನು ರೋಗ ಬಂದಿದೆಯಾ, ಆರೋಗ್ಯ ಚೆನ್ನಾಗಿದೆ. ನಿಮ್ಮ ಆರೋಗ್ಯ ಸರಿ ಇಲ್ಲದಿರಬಹುದು ಎಂದು ಹೇಳಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವರುಣ ಅಥವಾ ಕೋಲಾರದಲ್ಲಿ ಸ್ಪರ್ಧೆ ಮಾಡಿದರೂ ಜಯಗಳಿಸುತ್ತಾರೆ. ಅದರಲ್ಲಿ ಏನು ವಿಶೇಷವಿಲ್ಲ. ನಮ್ಮೂರಿನವರು ಸಿಕ್ಕಿದ್ದಾಗ ಚೆನ್ನಾಗಿದ್ದೀಯಾ ಅಂತ ಕೇಳದೆ ಚೆನ್ನಾಗಿಲ್ಲ ಎನ್ನಲು ಸಾಧ್ಯವೇ? ಸಿದ್ದರಾಮಯ್ಯ ಗೆಲ್ಲುತ್ತಾರೆ ಅಂತ ಹೇಳಿದರೆ ತಪ್ಪೇನೂ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಹಿರಿಯ ನಾಯಕರು. ಅದೇ ರೀತಿ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್ ಕೂಡ ಸ್ನೇಹಿತರೇ ಆಗಿದ್ದಾರೆ. ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್ ಸೇರುತ್ತಾನೆಂದು ಹೇಳುವವರಿಗೆ ಏನಂಥ ಹೇಳಬೇಕು ಎಂದು ತಿರುಗೇಟು ನೀಡಿದರು.
ಮಹಾದೇಶ್ ಎಂ ಗೌಡ ಹನೂರು: ತನ್ನ ಜಮೀನಿನಲ್ಲಿ ಬೆಳೆಯಲಾಗಿದ್ದ ಜೋಳದ ಫಸಲು ಕಾಯುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿದ…
ಬೆಂಗಳೂರು: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನೆಲೆಸಿರುವ ಅಕ್ರಮ ವಲಸಿಗರಿಗೆ ಸರ್ಕಾರದ ವತಿಯಿಂದ ಮನೆ ನಿರ್ಮಾಣ ಮಾಡಿಕೊಡಲು ಅವಕಾಶ ಕೊಡುವುದಿಲ್ಲ. ಎಲ್ಲಾ…
ಬೆಂಗಳೂರು: ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿರುವ ನಗರದ ಕೋಗಿಲು ಲೇಔಟ್‍ನಲ್ಲಿ ವಲಸಿಗರು ಅನಧಿಕೃತವಾಗಿ ಮನೆ ನಿರ್ಮಾಣ…
ಬೆಂಗಳೂರು: ಅರಣ್ಯ ಪ್ರದೇಶದ ಹೊರಗೆ ವನ್ಯಜೀವಿಗಳು ಕಂಡ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿ ಎಂದು ರಾಜ್ಯ ಸರ್ಕಾರ ಸಾರ್ವಜನಿಕರಿಗೆ…
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 106ನೇ ವಾರ್ಷಿಕ ಘಟಿಕೋತ್ಸವವು ಕ್ರಾಪರ್ಡ್ ಹಾಲ್‌ನಲ್ಲಿ ನೆರವೇರಿತು. ಈ ಬಾರಿಯ ಘಟಿಕೋತ್ಸವದಲ್ಲಿ 30,966 ಅಭ್ಯರ್ಥಿಗಳಿಗೆ ವಿವಿಧ…
ಬೆಂಗಳೂರು: ಬಳ್ಳಾರಿ ಗಲಾಟೆ ಪ್ರಕರಣದಲ್ಲಿ ಕೊಲೆಯಾದ ಕಾಂಗ್ರೆಸ್ ಕಾರ್ಯಕರ್ತನ ಶವ ಪರೀಕ್ಷೆಯನ್ನು ಸರ್ಕಾರ ಎರಡು ಬಾರಿ ಮಾಡಿದ್ದು ಯಾಕೆ ಎಂದು…