ವರದಿ: ಮಹಾ ದೇಶ್ ಎಂ ಗೌಡ ಹನೂರು
ಹನೂರು : ಕಳೆದ ಆರು ತಿಂಗಳಿನಿಂದ ಹದಗೆಟ್ಟಿದ್ದ ರಸ್ತೆಗಳಿಗೆ ಮುಖ್ಯಮಂತ್ರಿ ಆಗಮನದ ಹಿನ್ನೆಲೆ ತೇಪೆ ಹಾಗೂ ಡಾಂಬರು ಕಾಮಗಾರಿ ಭರದಿಂದ ಸಾಗಿದೆ.
ಮಲೆ ಮಾದೇಶ್ವರ ಬೆಟ್ಟ ಮುಖ್ಯ ರಸ್ತೆ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ ಪಡಿಸುವಂತೆ ಭಕ್ತರು ಹಾಗೂ ಸಾರ್ವಜನಿಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ ಆದರೆ ಮುಖ್ಯಮಂತ್ರಿಗಳು ಬರುತ್ತಿರುವ ಹಿನ್ನೆಲೆ ಗುಂಡಿ ಬಿದ್ದ ರಸ್ತೆಗಳಿಗೆ ತೆಪೆ ಹಾಕುತ್ತಿದ್ದಾರೆ.
ಶಾಸಕರ ಮನವಿಗೂ ಸ್ಪಂದಿಸದಿದ್ದ ಅಧಿಕಾರಿಗಳು: ಕಳೆದ ಅಕ್ಟೋಬರ್ ತಿಂಗಳಿನಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಹನೂರು ಪಟ್ಟಣದಿಂದ ಮಲೆ ಮಾದೇಶ್ವರ ಬೆಟ್ಟದವರೆಗೆ ಗುಂಡಿ ಮುಚ್ಚಿಸುವಂತೆ ಶಾಸಕ ಆರ್ ನರೇಂದ್ರ ಮನವಿ ಸಲ್ಲಿಸಿದ್ದರು. ಅನುದಾನದ ನೆಪವೊಡ್ಡಿ ರಸ್ತೆ ದುರಸ್ತಿ ಪಡಿಸಲಿಲ್ಲ ಇದೀಗ ಡಿಸೆಂಬರ್ 12ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರು ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿರುವ ಹಿನ್ನೆಲೆ ತೇಪೆ ಕಾರ್ಯ ಹಾಗೂ ಡಾಂಬರು ರಸ್ತೆ ಕಾಮಗಾರಿ ತೀವ್ರ ಗತಿಯಲ್ಲಿ ಜರುಗಿದೆ.
ನಿಟ್ಟುಸಿರು ಬಿಟ್ಟ ಭಕ್ತರು : ಅಧಿಕ ಬಾರದ ವಾಹನಗಳನ್ನು ನಿಷೇಧಿಸಿದ ನಂತರ ಎಲ್ಲಾ ವಾಹನಗಳು ಮಲೆ ಮಹದೇಶ್ವರ ಬೆಟ್ಟ ಸಂಚರಿಸುತ್ತಿದ್ದವು. ರಸ್ತೆ ಗುಂಡಿ ಬಿದ್ದು ಹಲವಾರು ಅಪಘಾತ ಪ್ರಕರಣಗಳು ಜರುಗಿದ ನಂತರ ಜಿಲ್ಲಾಧಿಕಾರಿಗಳು ಅಧಿಕ ಭಾರದ ವಾಹನಗಳನ್ನು ನಿಷೇಧಿಸಿದ್ದರು. ಸುಮಾರು ಆರು ತಿಂಗಳ ಕಾಲ ವಾಹನ ಸಂಚರಿಸಿದ್ದರಿಂದ ಸೈಕ್ಲೋನ್ ಮಳೆಗೆ ತೀವ್ರ ಗುಂಡಿ ಬಿದ್ದಿತ್ತು. ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದನ್ನು ಸ್ಮರಿಸಬಹುದು.
ಬಂಡಳ್ಳಿ ರಸ್ತೆ ದುರಸ್ತಿ ಪಡಿಸಿ : ಹನೂರು ಪಟ್ಟಣದಿಂದ ಚೆಂಗವಾಡಿ, ಮಣಗಳ್ಳಿ,ಬಂಡಳ್ಳಿ ಅಲಗಾಪುರ ಶಾಗ್ಯ್, ಬಂಡಳ್ಳಿ ಗ್ರಾಮದಿಂದ ತೆಳ್ಳನೂರು ಕೊತ್ತನೂರು ಚಿಕ್ಕಲೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ನಾಗನಾಥ ಬೈರನತ್ತ ತೋಮಿಯರ್ ಪಾಳ್ಯ ಪುಷ್ಪಾಪುರ, ಮರಿಯಮಂಗಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ದುರಸ್ತಿ ಪಡಿಸುವಂತೆ ಲೋಕೋಪಯೋಗಿ ಅಧಿಕಾರಿಗಳಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವಾಹನ ಸವಾರರಿಗೆ ದೂಳಿನ ಅಭಿಷೇಕ : ಕೊಳ್ಳೇಗಾಲ ಪಟ್ಟಣದಿಂದ ಹನೂರು ಪಟ್ಟಣದವರೆಗೆ 108 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಕೇಶಿಫ್ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ, ವಾಹನಗಳು ಸಂಚರಿಸುವಾಗ ಅತಿಯಾದ ದೂಳು ಬರುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಸಂಚರಿಸಲು ತೀವ್ರ ತೊಂದರೆಯಾಗಿದೆ. ಸಂಬಂಧಪಟ್ಟ ಕೆ ಶಿಪ್ ಅಧಿಕಾರಿಗಳು ಪ್ರತಿದಿನ ರಸ್ತೆಗೆ ನೀರು ಹಾಕಿಸುವಂತೆ ವಾಹನ ಸವಾರರು ಒತ್ತಾಯಿಸಿದ್ದಾರೆ.
ಹನೂರು ಪಟ್ಟಣದಿಂದ ಬಂಡಳ್ಳಿ ಗ್ರಾಮಕ್ಕೆ ತೆರಳಲು ಸುಮಾರು ಒಂದು ಗಂಟೆ ಸಮಯ ಬೇಕಿದೆ. ಸಂಬಂಧಪಟ್ಟ ಶಾಸಕರಿಗೆ ಹಲವಾರು ಬಾರಿ ಮನವಿ ಮಾಡಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೇ ಹಲವರು ಅಪಘಾತಗಳು ಸಂಭವಿಸಿ ಜೀವವನ್ನೇ ಕಳೆದುಕೊಂಡಿದ್ದಾರೆ ಇನ್ನಾದರೂ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. -ಭರತ್ ಕುಮಾರ್ ಬಂಡಳ್ಳಿ ನಿವಾಸಿ
ಹನೂರು ಪಟ್ಟಣದಿಂದ ಬಂಡಳ್ಳಿ ಗ್ರಾಮದವರೆಗೆ ಪ್ಯಾಚ್ ಕಾಮಗಾರಿಗೆ ಕ್ರಿಯಾಯೋಜನೆ ತಯಾರಾಗಿದ್ದು ಟೆಂಡರ್ ಕರೆಯಬೇಕಿದೆ . ಬಂಡಳ್ಳಿ ಗ್ರಾಮದಿಂದ ತೆಳ್ಳನೂರು ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ, ರಾಮಪುರದಿಂದ ನಾಲ್ ರೋಡ್ ಗ್ರಾಮದವರೆಗೆ ಟೆಂಡರ್ ಕರೆಯಲಾಗಿದೆ. -ಆರ್ ನರೇಂದ್ರ ಶಾಸಕರು ಹನೂರು ವಿಧಾನಸಭಾ ಕ್ಷೇತ್ರ
ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ ಹನೂರು: ಅಂತರ ರಾಜ್ಯ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜ ಎಂಟ್ರಿ…
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹೆಣ ಬಿದ್ದಿದೆ ಎಂದು ಹೇಳಿಕೆ…
ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಜನವರಿ.16ಕ್ಕೆ ಸಿಹಿಸುದ್ದಿ ಬರಲಿದೆ…
ಹಾಸನ: ಪತಿ ಎರಡನೇ ಮದುವೆಯಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮೊದಲ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಲೂರು ತಾಲ್ಲೂಕಿನ ಯಡೂರು ಗ್ರಾಮದಲ್ಲಿ…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ…