ಹುಲಿ ಯೋಜನೆ : ಗಿರಿಜನರು, ಇತರೆ ಜನಾಂಗಗಳ ಆತಂಕ; ಕಾಡಿನ ಜೊತೆ ಸಹಬಾಳ್ವೆಗೆ ಧಕ್ಕೆ ; ಮಹದೇಶ್ವರ ಭಕ್ತರಿಗೂ ತೊಂದರೆ
ಪ್ರಸಾದ್ ಲಕ್ಕೂರು
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟ ವನ್ಯಧಾಮದೊಳಗೆ ಸೋಲಿಗರು, ಬೇಡಗಂಪಣರು, ಇತರೆ ಸಮುದಾಯಗಳು ವಾಸಿಸುವ ೧೫೦ ಸಣ್ಣ ಪುಟ್ಟ ಗ್ರ್ರಾಮಗಳಿವೆ. ಹುಲಿ ಯೋಜನೆ ಜಾರಿಯಾದರೆ ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ನಿರ್ಬಂಧ ಬೀಳಲಿದೆ. ಅಲ್ಲದೆ ನಮ್ಮನ್ನು ಒಕ್ಕಲೆಬ್ಬಿಸುವ ಸಾಧ್ಯತೆಯಿದೆ ಎಂದು ಕಳವಳಗೊಂಡಿದ್ದಾರೆ.
ಸಂಜೆ ೬ ಗಂಟೆಯಿಂದ ಬೆಳಗಿನ ೬ ಗಂಟೆ ತನಕ ವನ್ಯಧಾಮದೊಳಕ್ಕೆ ವಾಹನಗಳ ಪ್ರವೇಶ ಬಂದ್ ಆಗಲಿದೆ. ಈಗಾಗಲೇ ಬಂಡೀಪುರ ಮತ್ತು ಬಿಳಿಗಿರಿರಂಗಬೆಟ್ಟ ಹುಲಿ ಸಂರಕ್ಷಿತಾರಣ್ಯಗಳಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧವಿದೆ. ಪವಿತ್ರ ಯಾತ್ರಾಸ್ಥಳವಾದ ಮಲೆ ಮಹದೇಶ್ವರನ ಸನ್ನಿಧಾನಕ್ಕೆ ಬರುವ ಭಕ್ತರಿಗೆ ತೊಂದರೆಯಾಗಲಿದೆ. ವಾಹನಗಳ ಸಂಚಾರ ಮತ್ತು ಪಾದಾಂತ್ರೆಗೆ ಕಡಿವಾಣ ಬೀಳಲಿದೆ ಎಂಬುದು ಸೋಲಿಗರ ಆತಂಕ.
ನಮ್ಮ ಜಿಲ್ಲೆಯಲ್ಲಿರುವ ಹುಲಿ ಯೋಜನೆ ಪ್ರದೇಶಗಳಾದ ಬಂಡೀಪುರ, ಬಿಳಿಗಿರಿರಂಗಬೆಟ್ಟ ಅರಣ್ಯಗಳಲ್ಲಿರುವ ಸೋಲಿಗರ ಹಾಡಿಗಳಿಗೆ ಮೂಲ ಸೌಲಭ್ಯ ಹೊಂದುವುದಕ್ಕೆ ಅವಕಾಶ ನೀಡುತ್ತಿಲ್ಲ. ಹಾಗೆೆಯೇ ಇಲ್ಲಿಯೂ ಆಗಲಿದೆ ಎಂಬ ಭೀತಿ ಸೋಲಿಗರನ್ನು ಕಾಡುತ್ತಿದೆ.
ವನ್ಯಧಾಮದಲ್ಲಿ ಹುಲಿಗಳ ಸಂಖ್ಯೆ ಕೇವಲ ೧೩ ರಷ್ಟು ಕಡಿಮೆ ಇದ್ದರೂ ಪರಿಸರವಾದಿಗಳು ಮತ್ತು ಅರಣ್ಯಾಧಿಕಾರಿಗಳ ಒತ್ತಡಕ್ಕೆ ಮಣಿದು ಘೋಷಣೆಗೆ ಮುಂದಾಗಿದ್ದಾರೆ. ಈ ಸಂಬಂಧ ಸ್ಥಳೀಯ ಗ್ರಾಮ ಸಭೆಗಳಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯದೆ ಘೋಷಣೆಗೆ ಸಜ್ಜುಗೊಂಡಿರುವುದು ಸರಿಯಲ್ಲ ಎಂಬುದು ಸೋಲಿಗ ಮುಖಂಡರ ವಾದ.
ಹುಲಿ ಯೋಜನೆ ಜಾರಿಯಾದ ಅರಣ್ಯದಲ್ಲಿ ಜನವಸತಿ ಇರಕೂಡದು ಎಂಬುದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರಮುಖ ಉದ್ದೇಶವಾಗಿದೆ. ಗಿರಿಜನರು ಮರ, ಗಿಡ, ಪ್ರಾಣಿ, ಪಕ್ಷಿಗಳನ್ನು ಪೂಜಿಸಿಕೊಂಡು ಸಹಬಾಳ್ವೆ ನಡೆಸುತ್ತಿದ್ದೇವೆ. ಅರಣ್ಯದಲ್ಲಿ ಸಿಗುವ ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಜೀವನ ನಡೆಸುತ್ತಿದ್ದೇವೆ ಎನ್ನುತ್ತಾರೆ ಗಿರಿಜನರು.
ಹೊರ ಪ್ರಪಂಚದ ಜೊತೆ ಹೊಂದಾಣಿಕೆ ಅಸಾಧ್ಯ
ಅರಣ್ಯದಲ್ಲಿ ಬದುಕುವಾಗ ಕೊಂಡು ಕೊಳ್ಳುವ ಸಂಸ್ಕೃತಿ ಇಲ್ಲ. ಹೊರಗೆ ಹೋದರೆ ಈ ಸಂಸ್ಕೃತಿ ಪ್ರಾರಂಭವಾಗಲಿದೆ. ಹೊರಗಿನ ನಾಗರೀಕ ಪ್ರಪಂಚದ ಜೊತೆ ಹೊಂದಿಕೊಳ್ಳಲು ಸಾಧ್ಯವಾಗದು. ಗಿರಿಜನರಾದ ನಾವು ಸಣ್ಣ ಪ್ರವಾಣದಲ್ಲಿ ವ್ಯವಸಾಯ, ಕಿರು ಅರಣ್ಯ ಉತ್ಪನ್ನಗಳ ಸಂಗ್ರಹ, ಕೂಲಿ ವಾಡಿಕೊಂಡು ಇರುವುದರಲ್ಲಿ ನೆಮ್ಮದಿಾಂಗಿದ್ದೇವೆ. ಯೋಜನೆ ಜಾರಿಯಾದರೆ ಮತ್ತೆ ಅರಣ್ಯಾಧಿಕಾರಿಗಳಿಂದ ಕಿರುಕುಳ ಆರಂಭವಾಗಲಿದೆ.
ಪೋಡುಗಳಲ್ಲಿ ಮನೆ ನಿರ್ವಾಣ, ರಸ್ತೆ, ಚರಂಡಿ, ಕುಡಿಯುವ ನೀರಿನ ಬೋರ್‌ವೆಲ್ ಹಾಗೂ ಹೊಸ ಕಟ್ಟಡ ನಿರ್ವಾಣಕ್ಕೆ ತಡೆ ಬೀಳಲಿದೆ. ಕಾಡಿನೊಳಗೆ ಕಷ್ಟದ ಜೀವನ ನಡೆಸಿದರೂ ಹೊಂದಾಣಿಕೆ ವಾಡಿಕೊಂಡು ಬದುಕುತ್ತಿದ್ದೇವೆ. ಇದೆಲ್ಲಕ್ಕೂ ಹೊಡೆತ ಬೀಳಲಿದೆ.
ದೇಶದಲ್ಲಿ ೫೩ ಹುಲಿ ಯೋಜನೆ ಪ್ರದೇಶಗಳಿವೆ. ಅಲ್ಲೆಲ್ಲ ಕಾಡಿನೊಳಗಿರುವ ಜನರ ಸದಾ ತೊಂದರೆ ಅನುಭವಿಸುತ್ತಿದ್ದಾರೆ. ಬಂಡೀಪುರ ಹುಲಿ ಯೋಜನೆ ಘೋಷಣೆಾಂಗಿ ೧೬ ವರ್ಷ ಕಳೆದಿದೆ ಇನ್ನು ಸಮುದಾಯ ಅರಣ್ಯ ಹಕ್ಕು ಪತ್ರ ನೀಡಿಲ್ಲ. ಜಿಲ್ಲೆಯ ೪ ಅರಣ್ಯಗಳಲ್ಲಿರುವ ಹಲವು ಗಿರಿಜನರಿಗೆ ವೈುಯೂಕ್ತಿಕ ಅರಣ್ಯ ಸಿಕ್ಕಲ್ಲ.
– ಡಾ.ಸಿ.ವಾದೇಗೌಡ, ಕಾರ್ಯದರ್ಶಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ, ಬಿಳಿಗಿರಿರಂಗನಬೆಟ್ಟ.
ಹುಲಿ ಯೋಜನೆಯಾದರೆ ಹೆಚ್ಚು ಅನುದಾನ ಬರಲಿದ್ದು ಗಿರಿಜನರಿಗೂ ಅನುಕೂಲವಾಗಲಿದೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ. ಆದರೆ, ನಿರೀಕ್ಷಿತ ಪ್ರವಾಣದಲ್ಲಿ ಪ್ರಯೋಜನವಾಗಿಲ್ಲ. ಗಿರಿಜನ ಉಪ ಯೋಜನೆಯು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಬಿಳಿಗಿರಿರಂಗನ ಬೆಟ್ಟದಲ್ಲಿ ಔಷಧ ಸಸ್ಯಗಳನ್ನು ಸಂಗ್ರಹ ವಾಡಲು ಅವಕಾಶ ನೀಡುತ್ತಿಲ್ಲ. ಒಟ್ಟಾರೆ ಕಾಡಿನಲ್ಲಿ ವಾಸವಿರುವವರಿಗೆ ಮತ್ತಷ್ಟು ಸಮಸ್ಯೆ ಎದುರಾಗಲಿದೆ.
– ಮಾದಪ್ಪ, ಸಂಯೋಜಕರು, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ, ಹೊಸಪೋಡು.
ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮಗಳ ಒಳಗೆ ಮತ್ತು ಅಂಚಿನಲ್ಲಿರುವ ಗ್ರಾಮಗಳ ಮತ್ತು ಗಿರಿಜನರ ಪೋಡುಗಳಿಗೆ ಮೊದಲು ಮೂಲ ಸೌಕರ್ಯ ಕಲ್ಪಿಸಿ ನಂತರ ಹುಲಿ ಯೋಜನೆ ಘಫೊಷಿಸಲಿ. ಬೆಟ್ಟದ ವ್ಯಾಪ್ತಿಯಲ್ಲಿ ಗಿರಿಜನರ ಪೋಡುಗಳನ್ನು ಹೊರತುಪಡಿಸಿ 25 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬೇಡಗಂಪಣರು ಮತ್ತು ಇತರೆ ಸಮುದಾಯಗಳು ವಾಸವಿದ್ದು, ಸೂಕ್ತ ಕುಡಿಯುವ ನೀರು, ರಸ್ತೆ, ಶಾಲೆ, ಬಸ್ ವ್ಯವಸ್ಥೆಯಿಲ್ಲ. ಇದರತ್ತ ಮೊದಲು ಗಮನಹರಿಸಲಿ.
–ಕೆ.ವಿ.ಮಾದೇಶ್, ವಡಕೆಹಳ್ಳಿ
ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಕುರಿತ ಗೋಷ್ಠಿಯಲ್ಲಿ ಅಮೆರಿಕ ಕನ್ನಡ ಕೂಟ (ಅಕ್ಕ)ದ ಅಧ್ಯಕ್ಷ ಅಮರ್‌ನಾಥ್‌ಗೌಡ ಹೇಮಂತ್ ಕುಮಾರ್…
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…