ಮೈಸೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡವರಿಗೆ ಸರ್ಕಾರ ಶೇ.50 ರಿಯಾಯಿತಿ ಘೋಷಿಸಿದ ಬೆನ್ನಲ್ಲೇ ದಂಡ ಸಂಗ್ರಹಕ್ಕೆ ಮುಂದಾಗಿರುವ ನಗರ ಪೊಲೀಸರು ಮೂರು ದಿನಗಳಲ್ಲಿ (ಭಾನುವಾರ ಸಂಜೆವರೆಗೆ) 20,00,000 ರೂ. ದಂಡದ ಮೊತ್ತ ಸಂಗ್ರಹಿಸಿದ್ದಾರೆ.
ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಫೆ.11ರ ಒಳಗಾಗಿ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ದಂಡದ ಮೊತ್ತದಲ್ಲಿ ಶೇ.50 ರಿಯಾಯಿತಿ ನೀಡುವ ಮೂಲಕ ಮೈಸೂರು ನಗರ ಸಂಚಾರ ಪೊಲೀಸರಿಂದ ಸಂಚಾರ ಇ-ಚಲನ್ ಪಡೆದು ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರು ಈ ಸದಾವಕಾಶವನ್ನು ಬಳಸಿಕೊಂಡು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ನಗರ ಪೊಲೀಸರು ತಿಳಿಸಿದ ಬೆನ್ನಲ್ಲೇ ಪ್ರಕರಣ ಬಾಕಿ ಇರುವ ಪ್ರಕರಣಗಳ ದಂಡ ಶುಲ್ಕವನ್ನು ಪಾವತಿಸಲು ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ 1734 ಪ್ರಕರಣಗಳಿಗೆ ಸಂಬಂಧಪಟ್ಟಂತೆ 3,67,150 ರೂ. ದಂಡ ಸಂಗ್ರಹವಾದರೆ ಶನಿವಾರ 6652 ಪ್ರಕರಣಗಳಿಗೆ ಸಂಬಂಧಪಟ್ಟಂತೆ 13,50,550 ರೂ.ಸಂಗ್ರಹವಾಗಿದೆ.
ಈ ಹಿನ್ನೆಲೆಯಲ್ಲಿ ವಾಹನ ಸವಾರರು ನಗರದ ಸಂಚಾರ ಠಾಣೆಗಳಲ್ಲಿ, ಪೊಲೀಸ್ ಆಯುಕ್ತರ ಕಚೇರಿಯ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ನಲ್ಲಿ ವಾಹನ ಪರಿಶೀಲನೆ ಮಾಡುವ ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಬಳಿ, ಕರ್ನಾಟಕ ಒನ್ ಮೊಬೈಲ್ ಅಪ್ಲಿಕೇಷನ್ ಮೂಲಕ ದಂಡದ ಹಣವನ್ನು ಪಾವತಿ ಮಾಡುತ್ತಿದ್ದಾರೆ. ದಂಡ ಪಾವತಿಸಲು ಕರ್ನಾಟಕ ಒನ್ ಮೊಬೈಲ್ ಅಪ್ಲಿಕೇಷನ್ ಹೆಚ್ಚು ಬಳಸುತ್ತಿರುವ ಹಿನ್ನೆಲೆಯಲ್ಲಿ ಆಗಾಗ ಇದರ ಕಾರ್ಯನಿರ್ವಹಣೆ ತಡವಾಗುತ್ತಿದೆ ಎಂಬ ಅಭಿಪ್ರಾಯಗಳು ದಂಡ ಪಾವತಿಸುವವರಿಂದ ಕೇಳಿ ಬಂದಿದೆ.
ಬಹುತೇಕರು ತಮ್ಮ ಹತ್ತಿರದ ಸಂಚಾರ ಠಾಣೆಗಳಿಗೆ ತೆರಳಿ ದಂಡ ಪಾವತಿಸುತ್ತಿದ್ದಾರೆ. ಉತ್ತಮ ಸ್ಪಂದನೆ ಬರುತ್ತಿದೆ. ಇಂದು ತಮಿಳುನಾಡಿನ ರಾಜ್ಯಪಾಲರು ಬಂದ ಹಿನ್ನೆಲೆಯಲ್ಲಿ ಎಲ್ಲ ಸಿಬ್ಬಂದಿ ಆ ಕರ್ತವ್ಯದಲ್ಲಿ ಇದ್ದರು. ಭಾನುವಾರದಿಂದ ಇನ್ನೂ ಹೆಚ್ಚಿನ ಸವಾರರು ದಂಡ ಪಾವತಿಸುವ ನಿರೀಕ್ಷೆ ಇದೆ. ಬೆಳಿಗ್ಗೆ 8 ರಿಂದ ರಾತ್ರಿ 11 ಗಂಟೆಯವರೆಗೂ ದಂಡ ಪಾವತಿ ಮಾಡಲು ಅವಕಾಶವಿದೆ.
– ಪರುಶುರಾಮಪ್ಪ, ಎಸಿಪಿ, ಸಂಚಾರ ಉಪವಿಭಾಗ
ಫೆ. 03 1,734 3,67,150 ರೂ
ಫೆ. 04 21,842 46,56,800 ರೂ
ಫೆ. 05 14,933 30,58,950 ರೂ ( ರಾತ್ರಿ.10ರವರೆಗೆ)
ಚಿರಂಜೀವಿ ಸಿ.ಹುಲ್ಲಹಳ್ಳಿ ಸತತ ಆರು ಬಾರಿ ಅಂಬಾರಿ ಹೊತ್ತಿದ್ದ ಆನೆ; ಈ ಬಾರಿ ನಿಶಾನೆ ಆನೆಯಾಗಿ ಭಾಗಿಯಾಗುವ ಸಾಧ್ಯತೆ ಮೈಸೂರು:…
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…
ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…
ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…