ವರದಿ: ನವೀನ್ ಡಿಸೋಜ
ಮಡಿಕೇರಿ: ನಗರದ ರಸ್ತೆ ಹಾಗೂ ಚರಂಡಿ ದುರಸ್ತಿಗೆ ನಗತೋತ್ಥಾನ ೪ನೇ ಹಂತದ ೧೩.೫ ಕೋಟಿ ರೂ. ಅನುದಾನವಿದ್ದು, ಶೀಘ್ರದಲ್ಲೆ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತದೆ ಎಂದು ಪೌರಾಯುಕ್ತ ವಿಜಯ ಮಾಹಿತಿ ನೀಡಿದ್ದಾರೆ.
ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ ನಗರದ ಬಹುತೇಕ ರಸ್ತೆಗಳು ಹದಗೆಟ್ಟಿವೆ. ಆಟೋ ಚಾಲಕರ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳು ರಸ್ತೆ ದುರಸ್ತಿಗೆ ಆಗ್ರಹಿಸಿವೆ. ಈ ಬಗ್ಗೆ ‘ಆಂದೋಲನ’ ಸಂದರ್ಶನದಲ್ಲಿ ಮಡಿಕೇರಿ ನಗರದಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪೌರಾಯುಕ್ತ ವಿಜಯ ಸಮಗ್ರ ಮಾಹಿತಿ ನೀಡಿದ್ದಾರೆ.
ಪ್ರಶ್ನೆ: ಮಡಿಕೇರಿ ನಗರದ ಹದಗೆಟ್ಟ ರಸ್ತೆಗಳ ದುರಸ್ತಿ ಕಾರ್ಯ ನಡೆಸುವುದು ಯಾವಾಗ?
ನಗರೋತ್ಥಾನ ೪ನೇ ಹಂತದಲ್ಲಿ ೪೦ ಕೋಟಿ ರೂ. ಮಂಜೂರಾಗಿ ಸರ್ಕಾರದಿಂದ ಕ್ರಿಯಾಯೋಜನೆ ಅನುಮೋದನೆಗೊಂಡಿದೆ. ಅದರಲ್ಲಿ ೧೩.೫ ಕೋಟಿ ರೂ. ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗಿವೆ. ಈಗಾಗಲೇ ಟೆಂಡರ್ ಆಗಿದ್ದು, ಜಿಲ್ಲಾಧಿಕಾರಿಗಳಿಂದ ಡಿಎಂಎಗೆ ಹೋಗಿದೆ. ಅನುಮೋದನೆ ದೊರೆತ ಬಳಿಕ ಕೆಲಸಗಳಿಗೆ ಚಾಲನೆ ನೀಡುತ್ತೇವೆ. ಜೊತೆಗೆ ೧೪ನೇ ಹಣಕಾಸಿನ ೧.೧೫ ಕೋಟಿ ರೂ. ಕ್ರಿಯಾಯೋಜನೆ ಆಗಿದೆ. ಇದರಲ್ಲಿ ಶೌಚಾಲಯ, ರಸ್ತೆ, ತಡೆಗೋಡೆ, ಸ್ಮಶಾನ ಅಭಿವೃದ್ಧಿ ಸೇರಿದಂತೆ ಮತ್ತಿತರ ಕಾಮಗಾರಿಗಳಿದ್ದು, ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ.
ಪ್ರಶ್ನೆ: ಮಡಿಕೇರಿ ನಗರದ ಪಾರ್ಕ್‌ಗಳ ಅಭಿವೃದ್ಧಿ ಎಲ್ಲೆಲ್ಲಿ ಆಗಿವೆ?
ಅಮೃತ ನಿರ್ಮಲ ನಗರ ಯೋಜನೆಯಡಿ ಕನ್ನಿಕಾ ಬಡಾವಣೆ, ಕಾವೇರಿ ಬಡಾವಣೆ, ರಾಣಿಪೇಟೆಗಳಲ್ಲಿ ೨೦ ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನಗಳನ್ನು ನಿರ್ಮಿಸಲಾಗಿದೆ. ದಾಸವಾಳ ರಸ್ತೆಯಲ್ಲಿ ಉದ್ಯಾನವನ ನಿರ್ಮಾ ಣ ಕಾರ್ಯ ಪ್ರಗತಿಯಲ್ಲಿದೆ. ಫೆನ್ಸಿಂಗ್, ಜಿಲ್ ಎಕ್ಯೂಪ್‌ಮೆಂಟ್ಸ್, ಚಿಲ್ಡ್ರನ್ ಪ್ಲೇ, ವಾಕ್‌ಪಾತ್‌ಗಳನ್ನು ಒಳಗೊಂಡಿದೆ. ಇದುವರೆಗೆ ಮಡಿಕೇರಿ ನಗರದಲ್ಲಿ ಮಾಡಿರದಂತಹ ಮಾದರಿ ಉದ್ಯಾನವನ ನಿರ್ಮಿಸಲಾಗಿದೆ.
ಪ್ರಶ್ನೆ: ನಗರಸಭೆ ವತಿಯಿಂದ ಪುನರ್ವಸತಿ ಕಲ್ಪಿಸಲು ಕೈಗೊಂಡಿರುವ ಕ್ರಮಗಳೇನು?
೧೦೦ ಮನೆಗಳ ನಿರ್ಮಾಣ ಗುರಿ ಹೊಂದಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ೨೬, ಹಿಂದುಳಿದ ವರ್ಗಕ್ಕೆ ೭೪ ಮನೆಗಳ ನಿರ್ಮಾಣಕ್ಕೆ ಅರ್ಜಿ ಅಹ್ವಾನಿಸಲಾಗಿದೆ. ೧೦೦ಕ್ಕಿಂತ ಹೆಚ್ಚು ಅರ್ಜಿಗಳು ಬಂದಿದ್ದು, ಇದರಲ್ಲಿ ೩೬ ಅರ್ಜಿಗೆ ಅನುಮೋದನೆ ದೊರೆತಿದೆ. ಉಳಿದ ಅರ್ಜಿಗಳನ್ನು ಶೀಘ್ರದಲ್ಲೇ ಪರಿಶೀಲಿಸಿ ಅನುಮೋದನೆ ನೀಡಲಾಗುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ರಾಜ್ಯ ಸರ್ಕಾರದಿಂದ ೨ ಲಕ್ಷ ರೂ. ಸಹಾಯಧನ, ಕೇಂದ್ರ ಸರ್ಕಾರದಿಂದ ೧.೫೦ ಲಕ್ಷ ರೂ. ಸಹಾಯಧನ ದೊರೆಯಲಿದೆ. ಇತರರಿಗೆ ರಾಜ್ಯ ಸರ್ಕಾರದಿಂದ ೧.೮೦ ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರದಿಂದ ೧.೫೦ ಲಕ್ಷ ರೂ. ಸಹಾಯಧನ ದೊರೆಯಲಿದೆ.
ಪ್ರಶ್ನೆ: ಮಳೆ ಹಾನಿಗೆ ಸಂಬಂಧಿಸಿದಂತೆ ನಗರಸಭೆ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳೇನು?
೨೦೨೧-೨೨ನೇ ಸಾಲಿನ ಮಳೆ ಹಾನಿಗೆ ಸಂಬಂಧಿಸಿದಂತೆ ೩೫ ಲಕ್ಷ ರೂ. ವೆಚ್ಚದ ಕ್ರಿಯಾಯೋಜನೆ ಅನುಮೋದನೆಗೆ ಹೋಗಿದೆ. ಶೀಘ್ರದಲ್ಲಿ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಲಿದ್ದಾರೆ. ಜೊತೆಗೆ ಈ ವರ್ಷ ೬೫ ಲಕ್ಷದ ಎಸ್ಟಿಮೇಟ್ ವಾಡಿ ಗ್ರ್ತ್ಯಾಂಟ್ ರಿಲೀಸ್‌ಗೆ ಜಿಲ್ಲಾಧಿಕಾರಿಗೆ ನೀಡಲಾಗಿದೆ.
ಪ್ರಶ್ನೆ: ಸಿಬ್ಬಂದಿಗಳ ಕೊರತೆ ಎಷ್ಟಿದೆ?
ಮಡಿಕೇರಿ ನಗರಸಭೆಯಲ್ಲಿ ಸಿಬ್ಬಂದಿಗಳ ಕೊರತೆ ಸಾಕಷ್ಟಿದ್ದು, ಒತ್ತಡಗಳ ನಡುವೆ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ೫ ಮಂದಿ ಇಂಜಿನಿುಂರ್ ಇರಬೇಕಾದ ನಗರಸಭೆಯಲ್ಲಿ ಒಬ್ಬರೇ ಇಂಜಿನಿಯರ್ ಇದ್ದಾರೆ. ರೆವಿನ್ಯೂ ಇನ್‌ಸ್ಪೆಕ್ಟರ್ ೨ ಹುದ್ದೆ ಕೂಡ ಖಾಲಿ ಇವೆ. ಬಡತನ ನಿರ್ಮೂಲನಾ ಕೆಲಸಕ್ಕೆ ಇಬ್ಬರು ಸಿಬ್ಬಂದಿಗಳ ಕೊರತೆ ಇದೆ. ಪ್ರಮುಖವಾಗಿ ಹೆಲ್ತ್ ಇನ್‌ಸ್ಪೆಕ್ಟರ್ ಕೊರತೆ ಇದೆ. ಎಫ್‌ಡಿಸಿ ೪ರಲ್ಲಿ ೧ ಮತ್ತು ಎಸ್‌ಡಿಸಿ ೭ರಲ್ಲಿ ೩ ಮಂದಿ ವಾತ್ರ ಇದ್ದಾರೆ. ೧೦೦ ಮಂದಿ ಪೌರ ಕಾರ್ಮಿಕರು ಇರಬೇಕಾದ ನಗರಸಭೆಯಲ್ಲಿ ೧೮ ಮಂದಿ ಮಾತ್ರ ಇದ್ದಾರೆ. ಹೊರಗುತ್ತಿಗೆ ಆಧಾರದಲ್ಲಿ ೨೦ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟು ೨೩೬ರಲ್ಲಿ ೮೪ ಹುದ್ದೆಗಳು ವಾತ್ರ ಭರ್ತಿಯಾಗಿವೆ.
ಮೈಸೂರು : ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ನಲ್ಲಿ ಜಾತಿ, ಧರ್ಮ,ಲಿಂಗ ಆಧಾರಿತ ಶೋಷಣೆಯನ್ನು ತಡೆಗಟ್ಟಲು ಯುಜಿಸಿಯ ಉದ್ದೇಶಿತ ಹೊಸ ನಿಯಮಾವಳಿಗಳ ಜಾರಿಗೆ ಒತ್ತಾಯಿಸಿ…
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಬಳಕೆ ಕಡ್ಡಾಯಗೊಳಿಸಲಾಗಿದೆ. ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ…
ಹೊಸದಿಲ್ಲಿ : ಮಹತ್ವದ ಬೆಳವಣಿಗೆಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳಿಗೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ವಿಶ್ವವಿದ್ಯಾಲಯ…
ಬೆಂಗಳೂರು : ಹಬ್ಬ-ಹರಿದಿನಗಳನ್ನೂ ಲೆಕ್ಕಿಸದೆ ಜನರಿಗಾಗಿ ದುಡಿಯುವ ಪೊಲೀಸರಿಗೆ ಕರ್ನಾಟಕ ಪೊಲೀಸ್ ಇಲಾಖೆ ಸಿಹಿಸುದ್ದಿ ನೀಡಿದ್ದು, ಜನ್ಮದಿನ ಮತ್ತು ವಿವಾಹ…
ಹೊಸದಿಲ್ಲಿ : ನಿರ್ಣಾಯಕ ಅಪರೂಪದ ಖನಿಜಗಳು, ಇವಿ ಚಲನಶೀಲತೆ, ಉತ್ಪಾದನೆ ಮತ್ತು ಸುಸ್ಥಿರ ಕೈಗಾರಿಕಾ ಅಭಿವೃದ್ಧಿ ಕ್ಷೇತ್ರಗಳಲ್ಲಿನ ಸಹಕಾರವನ್ನು ಬಲಪಡಿಸಲು…
ಮೈಸೂರು : ಮುಡಾ ಹಗರಣದಲ್ಲಿ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಮತ್ತು ಇತರರ ಮೇಲೆ ಬಿ ರಿಪೋರ್ಟ್…