ಜಿಲ್ಲೆಗಳು

ಪ್ರವಾಸಿಗರನ್ನು ಸೆಳೆಯುತ್ತಿರುವ ‘ರಾಜಾಸೀಟ್’

ಸ್ಥಳ ಮತ್ತಷ್ಟು ವಿಸ್ತಾರ; ಅಧಿಕೃತವಾಗಿ ಉದ್ಘಾಟನೆಗೊಳ್ಳದಿದ್ದರೂ ಪ್ರವಾಸಿಗರ ವೀಕ್ಷಣೆಗೆ ಅವಕಾಶ

ಪುನೀತ್ ಮಡಿಕೇರಿ

ಮಡಿಕೇರಿ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ರಾಜಾಸೀಟ್ ಇದೀಗ ತನ್ನ ಸೊಬಗಿನ ವ್ಯಾಪ್ತಿ ಹೆಚ್ಚಿಸಿಕೊಂಡಿದೆ. ಅಧಿಕೃತವಾಗಿ ಗ್ರೇಟರ್ ರಾಜಾಸೀಟ್ ಉದ್ಘಾಟನೆಗೊಳ್ಳದಿದ್ದರೂ ಕಳೆದ ಅಕ್ಟೋಬರ್ ತಿಂಗಳಿನಿಂದಲೇ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಸುಂದರ ತಾಣ ಪ್ರವಾಸಿಗರನ್ನು ಸೆಳೆಯುತ್ತಿದೆ.

ಪ್ರಕೃತಿ ಸೌಂದರ್ಯ ಸವಿಯಲು, ಸೂರ್ಯಾಸ್ತದ ಕ್ಷಣವನ್ನು ಕಣ್ತುಂಬಿಕೊಳ್ಳಲು, ಸಂಜೆಯಲ್ಲಿ ವಾಯುವಿಹಾರ ನಡೆಸಲು, ಬೆಳಿಗ್ಗೆ ಮಂಜಿನ ವಾತಾವರಣಕ್ಕೆ ಮೈಯೊಡ್ಡಲು ರಾಜಾಸೀಟ್ ಹೇಳಿ ವಾಡಿಸಿದ ಜಾಗ. ಕೊಡಗು ಜಿಲ್ಲೆಗೆ ಬರುವ ಪ್ರವಾಸಿಗರು ಯಾವುದನ್ನು ತಪ್ಪಿಸಿದರೂ ರಾಜಾಸೀಟ್ ನೋಡುವುದನ್ನಂತೂ ಮರೆಯುವುದಿಲ್ಲ. ಹಸಿರೂರಿಗೆ ಮಂಜಿನ ಸೀರೆ ತೊಡಿಸಿದಂತಿರುವ ಈ ಸುಂದರ ಸ್ಥಳ ಇದೀಗ ಮತ್ತಷ್ಟು ವಿಸ್ತಾರಗೊಂಡಿರುವುದು ರಾಜಾಸೀಟ್‌ನ ಕಳೆಯನ್ನು ದ್ವಿಗುಣಗೊಳಿಸಿದೆ.

ಮೊದಲು ಅರ್ಧ ಎಕರೆಯಲ್ಲಿದ್ದ ರಾಜಾಸೀಟ್ ಇದೀಗ ೪.೫೦ ಎಕರೆಗೆ ವಿಸ್ತಾರ ಪಡೆದುಕೊಂಡಿದೆ. ರಾಜಾಸೀಟ್‌ನಲ್ಲಿ ಪ್ರಸ್ತುತ ಇರುವ ವ್ಯೆ ಪಾಯಿಂಟ್ ಜೊತೆಗೆ ಮತ್ತೇ ಮೂರು ವ್ಯೆ ಪಾಯಿಂಟ್ ಅನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ. ಈ ಯೋಜನೆಯೇ ಗ್ರೇಟರ್ ರಾಜಾಸೀಟ್ ಆಗಿದೆ.

ಈ ಮೊದಲು ಕುರುಚಲು ಕಾಡುಗಳಿಂದ ಕೂಡಿದ್ದ ವಿಶಾಲ ಜಾಗವನ್ನು ಆಕರ್ಷಣೀಯವಾಗಿ ಪರಿವರ್ತಿಸಿ ಸಂಚರಿಸುವ ಜಾಗದಲ್ಲಿ ಇಂಟರ್ ಲಾಕ್, ವಿವಿಧ ತಳಿಗಳ ಕಣ್ಮನ ಸೆಳೆಯುವ ಗಿಡಗಳು, ಮೆಟ್ಟಲುಗಳು, ಅಲಂಕಾರಿಕಾ ಮಂಟಪಗಳು, ೩ ಕಿ.ಮೀ. ವಾಕಿಂಗ್ ಪಾಥ್, ನಡುನಡುವೆ ಗಾರ್ಡನ್, ಕೂರಲು ಕಲ್ಲಿನ ಕುರ್ಚಿಗಳನ್ನು ನಿರ್ಮಿಸಿ ವಿಶೇಷವಾಗಿ ಈ ಯೋಜನೆುಂನ್ನು ರೂಪಿಸಲಾಗಿದೆ. ರೂ. ೪.೫೫ ಕೋಟಿ ವೆಚ್ಚದಲ್ಲಿ ಈ ಯೋಜನೆ ಪೂರ್ಣಗೊಳಿಸಲಾಗಿದೆ.

ರಾಜಾಸೀಟ್ ವಿಸ್ತರಣೆಯ ಕುರಿತು ೨೦೦೯ರಲ್ಲಿ ಮಡಿಕೇರಿಯ ಎಂ.ಎ. ಕಮರುದ್ದೀನ್ ಎಂಬವರು ಕಂಪ್ಯೂಟರ್‌ನಲ್ಲಿ ವಿನ್ಯಾಸ ವಾಡಿ ರಾಜಕಾರಣಿ ಎಂ.ಸಿ.ನಾಣಯ್ಯ ಅವರ ಬಳಿ ಪ್ರಸ್ತಾಪ ಮಾಡಿದ್ದರು. ಅವರು ಕೂಡ ಸಕರಾತ್ಮಕವಾಗಿ ಸ್ಪಂದಿಸಿದ್ದರು. ಅಂದಿನ ನಗರಸಭಾ ಸದಸ್ಯೆ ಹಾಗೂ ರಾಜಾಸೀಟ್ ಅಭಿವೃದ್ಧಿ ಸಮಿತಿಯ ಸದಸ್ಯೆ ಆಗಿದ್ದ ಮಯೋತಿ ಗಣೇಶ್ ಅವರಿಗೆ ಈ ಬಗ್ಗೆ ಕಮರುದ್ದೀನ್ ಗಮನ ಸೆಳೆದಿದ್ದರು. ಸಂಬಂಧಪಟ್ಟ ಇಲಾಖೆಯೂ ಇದನ್ನು ಮೆಚ್ಚಿತ್ತು. ಅಂದಿನ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸಿ ಅನುದಾನ ಪಡೆದುಕೊಂಡರು.

ಆ ಬಳಿಕ ಈ ಯೋಜನೆುಂನ್ನು ಕಾರ್ಯರೂಪಕ್ಕೆ ತರಲು ಭೂವಿನ್ಯಾಸ ತಜ್ಞರ ನೆರವು ಪಡೆದು ಕೆಲವು ಬದಲಾವಣೆ ಮಾಡಿ ಯೋಜನೆಯನ್ನು ಅನುಷ್ಠಾನ ಮಾಡಲಾಯಿತು. ಕೆಲವೊಂದು ತಾಂತ್ರಿಕ ಕಾರಣ ಹಾಗೂ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ, ವಿಶ್ವವನ್ನೇ ಬಾಧಿಸಿದ ಕೊರೊನಾದಂತ ಪರಿಸ್ಥಿತಿಯಿಂದ ಈ ಯೋಜನೆ ವಿಳಂಬವಾಗ ತೊಡಗಿತು. ಇದೀಗ ಕಾಮಗಾರಿಯೂ ಬಹುತೇಕ ಪೂರ್ಣಗೊಂಡಿದೆ.

ವಿಶಾಲಗೊಂಡಿರುವ ರಾಜಾಸೀಟ್ ಹಂತಹಂತವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಹೊಸ ಬಗೆುಂ ಗಿಡಗಳನ್ನು ನೆಟ್ಟು ಅಂದಾಗಣಿಸುವ ಕೆಲಸ ನಡೆಯುತ್ತಿದೆ. ಇದರೊಂದಿಗೆ ಸಂಗೀತ ಕಾರಂಜಿಯನ್ನು ಆರಂಭಿಸಲಾಗಿದೆ. ಪ್ರಾಣಿಗಳ ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ.

ಗಿಡ ಇರುವ ಪ್ರದೇಶವನ್ನು ಯಾರು ಮುಟ್ಟದಂತೆ ಎಚ್ಚರವಹಿಸುವ ನಿಟ್ಟಿನಲ್ಲಿ ಈ ಮೊದಲು ಹಗ್ಗವನ್ನು ಬಳಸಿ ಭದ್ರಪಡಿಸಲಾಗಿತ್ತು. ಇದೀಗ ‘ಸ್ಟೀಲ್ ಗ್ರಿಲ್’ ಮಾಡಿ ಅದಕ್ಕೆ ಬಿದುರಿನ ರೀತಿಯಲ್ಲಿ ಬಣ್ಣ ಬಳೆದು ಆಕರ್ಷಕಗೊಳಿಸಲಾಗಿದೆ. ಕಾಮಗಾರಿ ಮುಕ್ತಾಯಗೊಂಡಿದ್ದು, ಅಧಿಕೃತವಾಗಿ ಕೆಲವೇ ದಿನದಲ್ಲಿಯೇ ಗ್ರೇಟರ್ ರಾಜಾಸೀಟ್ ಉದ್ಘಾಟನೆಗೊಳ್ಳಲಿದೆ.

ಸೂರ್ಯೋದಯ ವೀಕ್ಷಣೆಗೆ ಅವಕಾಶ
ಈ ಮೊದಲು ರಾಜಾಸೀಟ್‌ನ ‘ವ್ಯೆ ಪಾಯಿಂಟ್’ನಲ್ಲಿ ಸೂರ್ಯಾಸ್ತದ ದೃಶ್ಯ ವಾತ್ರ ಕಣ್ತುಂಬಿಕೊಳ್ಳಬಹುದಿತ್ತು. ಇದೀಗ ಸೂರ್ಯೋದಯವನ್ನು ವೀಕ್ಷಿಸಲು ಗ್ರೇಟರ್ ರಾಜಾಸೀಟ್‌ನಲ್ಲಿ ಅವಕಾಶ ದೊರೆಯಲಿದೆ. ಪೂರ್ವ ದಿಕ್ಕಿನಲ್ಲಿ ಎತ್ತರದಲ್ಲಿರುವ ಗೋಪುರದಿಂದ ಸೂರ್ಯೋದಯ ನೋಡಬಹುದಾಗಿದೆ.

ಇದರಿಂದ ಮುಂದೆ ಬೆಳಿಗ್ಗಿನ ಜಾವವೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಪ್ರಾಯೋಗಿಕವಾಗಿ ಪ್ರವಾಸಿಗರನ್ನು ಹೊಸ ವ್ಯೆ ಪಾಯಿಂಟ್‌ಗಳಿಗೆ ಬಿಡಲಾಗುತಿದ್ದು, ನೋಡಿದವರು ಸಂಭ್ರಮಿಸುವ ದೃಶ್ಯ ಕಂಡುಬರುತ್ತಿದೆ.

೪.೫೫ ಕೋಟಿ ರೂ. ವೆಚ್ಚದಲ್ಲಿ ಗ್ರೇಟರ್ ರಾಜಾಸೀಟ್ ಕಾಮಗಾರಿ ಪೂರ್ಣಗೊಂಡಿದ್ದು, ಈಗಾಗಲೇ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಉದ್ಘಾಟನಾ ಸವಾರಂಭಕ್ಕೆ ಪ್ರವಾಸೋದ್ಯಮ ಸಚಿವರನ್ನು ಕರೆಸಲು ಪ್ರುಂತ್ನಿಸಲಾಗುತ್ತಿದೆ. ಶೀಘ್ರದಲ್ಲೇ ಗ್ರೇಟರ್ ರಾಜಾಸೀಟ್‌ನ್ನು ಅಧಿಕೃತವಾಗಿ ಉದ್ಘಾಟಿಸಲಾಗುತ್ತದೆ. -ಡಾ.ಯತೀಶ್ ಉಳ್ಳಾಲ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ.

andolana

Recent Posts

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

10 mins ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

29 mins ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

52 mins ago

ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಹಳೆ ಪ್ರಕರಣಕ್ಕೆ ಹೊಸ ಎನ್‌ಸಿಆರ್‌

ಬೆಂಗಳೂರು: ನಟ ದರ್ಶನ್‌ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಹಳೆ…

2 hours ago

ಓದುಗರ ಪತ್ರ: ಮಹಿಳಾ ಅಧಿಕಾರಿಗಳಿಗೆ ಅಭಿನಂದನೆಗಳು

ಚಾಮರಾಜನಗರದಲ್ಲಿ ಅಕ್ಟೋಬರ್ ೭ರಿಂದ ಅ. ೯ರವರೆಗೆ ಆಯೋಜಿಸಿದ್ದ ‘ಚೆಲುವ ಚಾಮರಾಜನಗರ ದಸರಾ’ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದರಿಂದ…

3 hours ago

ಓದುಗರ ಪತ್ರ: ರತನ್‌ ಟಾಟಾರಿಗೆ ಭಾರತರತ್ನ ನೀಡಿ

ಕೆಲ ಗಣ್ಯರು ನಿಧನರಾದಾಗ ದುಃಖವಾಗುತ್ತದೆ. ಇನ್ನೂ ಕೆಲ ಗಣ್ಯರನ್ನು ಕಳೆದುಕೊಂಡಾಗ ದುಃಖದ ಕೋಡಿಯೇ ಹರಿಯುತ್ತದೆ; ದೇಶಾದ್ಯಂತ ಮೌನ ಹೆಪ್ಪುಗಟ್ಟುತ್ತದೆ. ಹೀಗೆ…

3 hours ago