ಜಿಲ್ಲೆಗಳು

ರಾಹುಲ್​ ಗಾಂಧಿ ಪತ್ರದ ಬಳಿಕ ಆನೆಗೆ ಚಿಕಿತ್ಸೆ: ಕಾಡಿಗೆ ಬಿಟ್ಟ ಮರಿ ತಾಯಿ ಜೊತೆ ನಾಪತ್ತೆ

ಮೈಸೂರು :ನಾಗರಹೊಳೆ ಅರಣ್ಯದಲ್ಲಿ ಆನೆ ಮತ್ತು ಅದರ ಮರಿಗೆ ಬಾಲ ಮತ್ತು ಸೊಂಡಿಲಲ್ಲಿ ಗಾಯವಾಗಿರುವ ಕುರಿತು ರಾಹುಲ್ ಗಾಂಧಿ ಅವರು ಪತ್ರ ಬರೆದಿದ್ದು, ಈ ಬಗ್ಗೆ ಸ್ಪಂದಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು ಅದರಂತೆ ಈಗ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಾಯಗೊಂಡಿದ್ದ ಆನೆ ಮರಿಗೆ ಚಿಕಿತ್ಸೆ ನೀಡಿ ತಾಯಿ ಜೊತೆ ಕಾಡಿಗೆ ಬಿಡಲಾಗಿತ್ತು.ಆರೋಗ್ಯ ಸುಧಾರಣೆ ಕಂಡ ನಂತರ ಆನೆ ಮರಿ ಬಹಳ ಚಟುವಟಿಕೆಯಿಂದ ಇತ್ತು. ಆನೆ ಮತ್ತು ಅದರ ಮರಿಗೆ ಚಿಕಿತ್ಸೆ ನೀಡಿದ ನಂತರ ಅರಣ್ಯಕ್ಕೆ ಬಿಡಲಾಗಿತ್ತು. ಆದರೆ ಈಗ ಮೂರು ದಿನಗಳಿಂದ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ತಾಯಿ ಮತ್ತು ಜೊತೆಗಿದ್ದ ಆನೆ ಮರಿ ಈಗ ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಕಾಣಿಸುತ್ತಿಲ್ಲ. ಅದನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯ ನಿರತರಾಗಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಐಸಿಸಿ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ವೇಳೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದರು. ಈ ವೇಳೆ ಗಾಯಗೊಂಡಿದ್ದ ಆನೆ ಮರಿಯೊಂದು ಅವರ ಕಣ್ಣಿಗೆ ಬಿದ್ದಿತ್ತು. ಬಳಿಕ ಅವರು ತಾಯಿ ಆನೆ ಮತ್ತು ಅದರ ಗಾಯಗೊಂಡ ಮರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು.ಆನೆ ಮರಿಗೆ ಚಿಕಿತ್ಸೆ ನೀಡುತ್ತಿರುವುದುಈ ಸಂಬಂಧ ರಾಹುಲ್ ಮನವಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ ಆನೆ ಮತ್ತು ಅದರ ಮರಿಗೆ ಸಂಪೂರ್ಣ ಕಾಳಜಿ ಮತ್ತು ಚಿಕಿತ್ಸೆ ನೀಡಲಾಗುವುದು ಎಂದಿದ್ದರು. ಅಲ್ಲದೆ, ನಾಗರಹೊಳೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಈ ಮೇರೆಗೆ ಆನೆ ಹಾಗೂ ಮರಿಯನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿದ್ದು, ಆರೋಗ್ಯದಲ್ಲಿ ಸ್ವಲ್ಪಮಟ್ಟಿಗಿನ ಸುಧಾರಣೆ ಕಂಡುಬಂದಿದೆ. ಚಿಕಿತ್ಸೆ ಬಳಿಕ ತಾಯಿ ಮತ್ತು ಮರಿ ಆನೆಯ ಮೇಲೆ ನಿಗಾ ವಹಿಸಲಾಗಿತ್ತು. ಆರೋಗ್ಯ ಸ್ಥಿತಿಯ ಬಗ್ಗೆ ಚಿಕಿತ್ಸೆ ಉಸ್ತುವಾರಿಯನ್ನು ಆರ್​​ಎಫ್​ಒ ಮತ್ತು ಪಶು ವೈದ್ಯರ ತಂಡಕ್ಕೆ ನೀಡಲಾಗಿತ್ತು. ಆದರೀಗ ಕಾಡಿಗೆ ಬಿಟ್ಟ ಮರಿ ತಾಯಿ ಜೊತೆ ನಾಪತ್ತೆಯಾಗಿದೆ.

 

andolanait

Recent Posts

ದೇಶದಲ್ಲಿ ಜಿಲ್ಲೆಗಳ ಸಂಖ್ಯೆ ಹೆಚ್ಚಾಗಿದೆಯೇ?

ಪ್ರೊ.ಆರ್.ಎಂ.ಚಿಂತಾಮಣಿ ಇಂದು ನಮ್ಮಲ್ಲಿ ಲಢಾಕ್ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಕಟಣೆಯಾಗಿ ಇನ್ನೂ ಜಾರಿಯಾಗದೇ ಇರುವ ಐದು ಹೊಸ ಜಿಲ್ಲೆಗಳೂ ಸೇರಿ ಒಟ್ಟು…

16 mins ago

ʼಅಪಶಕುನದ ಮಾತೇ ದಿಟ್ಟ ಬದುಕಿಗೆ ಮೆಟ್ಟಿಲಾಯಿತು’

ನಿರೂಪಣೆ: ರಶ್ಮಿ ಕೋಟಿ ಇದು ಸಮಾಜವಾದಿ ನಾಯಕ ದಿವಂಗತ ಕಿಶನ್ ಪಟ್ನಾಯಕ್ ಅವರ ಪತಿ ವಾಣಿ ದಾಸ್ ಅವರ ಬದುಕಿನ…

35 mins ago

ಓದುಗರ ಪತ್ರ: ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದವರಿಗೆ ಧನ್ಯವಾದಗಳು

ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿದ್ದು, ಅಂದಾಜಿನ ಪ್ರಕಾರ ೬ ಲಕ್ಷ…

55 mins ago

ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ವಿರೋಧ

ನವೀನ್ ಡಿಸೋಜ ಕೆಲವೇ ದಿನಗಳಲ್ಲಿ ರಸ್ತೆಗಳು ಮತ್ತೆ ಹದಗೆಡುವ ಹಿನ್ನೆಲೆ : ಸಂಪೂರ್ಣ ರಸ್ತೆ ಡಾಂಬರೀಕರಣಕ್ಕೆ ಒತ್ತಾಯ ಮಡಿಕೇರಿ: ರಸ್ತೆ…

1 hour ago

ಪಶು ವೈದ್ಯರೇ ಇಲ್ಲದೆ ಪರಿತಪಿಸುತ್ತಿರುವ ಇಂಡುವಾಳು ರೈತರು

ಖಾಯಂ ಪಶು ವೈದ್ಯರ ನೇಮಕ ಮಾಡಲು ಅನ್ನದಾತರ ಒತ್ತಾಯ ಮೋಹನ್‌ ಕುಮಾರ್‌  ಮಂಡ್ಯ: ರೈತರು ಕೃಷಿ ಚಟುವಟಿಕೆ ನಡೆಸಲು ಜಾನುವಾರುಗಳೇ…

1 hour ago

ಓದುಗರ ಪತ್ರ: ಮೈಸೂರು ಹಾಪ್‌ಕಾಮ್‌ಗಳ ಉಳಿವಿಗೆ ಕ್ರಮಕೈಗೊಳ್ಳಬೇಕು

ಮಾಧ್ಯಮವೊಂದರ ವರದಿಯ ಪ್ರಕಾರ ಆನ್‌ಲೈನ್ ಮಾರುಕಟ್ಟೆಗಳ ಭರಾಟೆಯಿಂದಾಗಿ ಸರ್ಕಾರಿ ಸ್ವಾಮ್ಯದ ಹಾಪ್‌ ಕಾಮ್ಸ್ ಮಳಿಗೆಗಳು ನಷ್ಟಕ್ಕೆ ಸಿಲುಕಿದ್ದು, ಅವು ಮುಚ್ಚುವ…

1 hour ago