ಜಿಲ್ಲೆಗಳು

ಪರೀಕ್ಷಾ ಅವಧಿಯನ್ನು 2 ಅಥವಾ 2.30 ಗಂಟೆ ನಿಗದಿ ಕುರಿತು ಶೀಘ್ರ ನಿರ್ಧಾರ

ಪರೀಕ್ಷಾ ಸಮಯ ಕುರಿತಂತೆ ಪ್ರಾಂಶುಪಾಲರ ಕಾರ್ಯಗಾರದಲ್ಲಿ ವಿಭಿನ್ನ ಅಭಿಪ್ರಾಯಗಳ ಮಂಡನೆ

ಮೈಸೂರು: ಎನ್‌ಇಪಿ ಅನುಷ್ಠಾನಗೊಳಿಸಿರುವ ೬೦:೪೦ಅಂಕಗಳ ಅನುಪಾತದಲ್ಲಿ ಪದವಿ ಪರೀಕ್ಷೆಯನ್ನು ನಡೆಸುವಾಗ ೨ ಗಂಟೆ ಅಥವಾ ೨.೩೦ ಗಂಟೆಗೆ ನಿಗದಿಪಡಿಸುವ ಕುರಿತು ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದರಿಂದ ಮುಂದಿನ ಸಿಂಡಿಕೇಟ್,ಶಿಕ್ಷಣ ಮಂಡಳಿ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು.

ಮಾನಸಗಂಗೋತ್ರಿ ವಿಜ್ಞಾನಭವನದ ಸಭಾಂಗಣದಲ್ಲಿ ಸೋಮವಾರ ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜು ಶಿಕ್ಷಣ ಮಂಡಳಿ ವತಿಯಿಂದ ಆಯೋಜಿಸಿದ್ದ ಒಂದು ದಿನದ ಪದವಿ ಕಾಲೇಜುಗಳ ಪ್ರಾಂಶುಪಾಲರ ಕಾರ್ಯಗಾರದಲ್ಲಿ ಮೂರನೇ ಸೆಮಿಸ್ಟರ್ ಪರೀಕ್ಷೆಯನ್ನು ಎಷ್ಟು ಅವಧಿಗೆ ಮೀಸಲಿಡಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಾಂಶುಪಾಲರುಗಳು ತಂತಮ್ಮ ಸಲಹೆ ನೀಡಿದ್ದರಿಂದ ಮತ್ತೊಂದು ಸುತ್ತಿನ ಚರ್ಚೆ ನಡೆಸಿದ ಮೇಲೆ ಸಮಯವನ್ನು ನಿಗದಿಪಡಿಸುವ ಮಾತನ್ನು ಪರೀಕ್ಷಾಂಗ ಕುಲಸಚಿವ ಪ್ರೊ.ಜ್ಞಾನಪ್ರಕಾಶ್ ಹೇಳಿದರು.

ಮೊದಲನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು,ಎರಡನೇ ಸೆಮಿಸ್ಟರ್ ಫಲಿತಾಂಶವನ್ನು ವಾರದೊಳಗೆ ಪ್ರಕಟಿಸಲಾಗುವುದು. ಎನ್‌ಇಪಿ ಪ್ರಕಾರ ಎರಡುಗಂಟೆಗಳ ಕಾಲ ಪರೀಕ್ಷೆ ನಡೆಸಬೇಕು. ಆದರೆ, ಶಿಕ್ಷಣ ಮಂಡಳಿ ಸಭೆಯಲ್ಲಿ ೨ಗಂಟೆ ಸಾಕಾಗದ ಕಾರಣ ಎರಡೂವರೆ ಸಮಯ ಕೊಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಇದಲ್ಲದೆ, ವಿದ್ಯಾರ್ಥಿಗಳು ನೇರವಾಗಿ ಭೇಟಿ ಮಾಡಿ ಸಮಯ ಹೆಚ್ಚಿಸುವಂತೆ ಕೋರಿದ್ದಾರೆ.

ಬೇರೆ ಬೇರೆ ವಿವಿಗಳಲ್ಲಿ ಎರಡೂವರೆ ಗಂಟೆ ಸಮಯ ಕೊಟ್ಟಿರುವಾಗ ಮೈಸೂರು ವಿವಿಯಲ್ಲಿ ೨ ಗಂಟೆಗೆ ಸೀಮಿತಗೊಳಿಸಿರುವುದನ್ನು ಪ್ರಸ್ತಾಪಿಸಿರುವ ಕಾರಣ ಈ ಬಗ್ಗೆ ಪ್ರಾಂಶುಪಾಲರ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ನುಡಿದರು. ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ರೀತಿುಂಂತೆ ಒಂದು ಸೆಮಿಸ್ಟರ್ ಮುಗಿದಿದೆ. ಎರಡನೇ ಸೆಮಿಸ್ಟರ್ ಮೌಲ್ಯವಾಪನ ಮುಗಿದು ಡಿಕೋಡಿಂಗ್ ಆಗಿದೆ. ವಾರದೊಳಗೆ ಪ್ರಕಟ ಮಾಡುತ್ತೇವೆ. ಕೋರ್ಸ್ ನೋಂದಣಿ ವಾಡಿಕೊಳ್ಳುವಾಗ ಮೂರನೇ ಸೆಮಿಸ್ಟರ್ ಬಂದಾಗ ಶೇ.೭೫ ರಷ್ಟು ಹಾಜರಾತಿ ನಮೂದನೆ ಮಾಡಬೇಕು. ಎಸ್‌ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ವಿನಾಯಿತಿ ಇರುವುದರಿಂದ ಸರಿಯಾಗಿ ನಮೂದಿಸಬೇಕು. ಪರೀಕ್ಷಾ ಶುಲ್ಕ ಪಾವತಿಸದಿದ್ದರೂ ಹಾಜರಾತಿ ಆಗಿರುವುದು ಕಂಡುಬಂದಿದೆ. ಒಂದು ವೇಳೆ ಹಾಜರಾದರೂ ನೋಂದಣಿ ಆಗುವುದಿಲ್ಲ. ನಮ್ಮಲ್ಲಿರುವ ಹಾಜರಾತಿ ಮತ್ತು ಪರೀಕ್ಷೆ ನೋಂದಣಿ ಕಾರ್ಯವನ್ನು ಯುಎಸ್‌ಎಂಸಿ ಮತ್ತು ಎನ್‌ಇಪಿಯನ್ನು ಬೇರೆ ಬೇರೆ ಏಜೆನ್ಸಿ ನೋಡಿಕೊಳ್ಳುತ್ತದೆ. ಒಂದು ಕಾಲೇಜು ಕಳುಹಿಸದಿದ್ದರೆ ಫಲಿತಾಂಶ ಪ್ರಕಟಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಮಾನಸಗಂಗೋತ್ರಿ ವಿಜ್ಞಾನಭವನದ ಸಭಾಂಗಣದಲ್ಲಿ ಸೋಮವಾರ ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜು ಶಿಕ್ಷಣ ಮಂಡಳಿ ವತಿಯಿಂದ ಆಯೋಜಿಸಿದ್ದ ಒಂದು ದಿನದ ಪದವಿ ಕಾಲೇಜುಗಳ ಪ್ರಾಂಶುಪಾಲರ ಕಾರ್ಯಗಾರವನ್ನು ಹಂಗಾಮಿ ಕುಲಪತಿ ಪ್ರೊ.ಎಚ್.ರಾಜಶೇಖರ್ ಉದ್ಘಾಟಿಸಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಜ್ಞಾನಪ್ರಕಾಶ್, ಕಾಲೇಜು ಶಿಕ್ಷಣ ಮಂಡಳಿ ನಿರ್ದೇಶಕ ಪ್ರೊ.ಬಿ.ಶ್ರೀಕಂಠಸ್ವಾಮಿ ಹಾಜರಿದ್ದರು

ವಾಣಿಜ್ಯಶಾಸ್ತ್ರ ಅಕೌಂಟೆಂಟ್ ಬರೆಯುವ ಮಕ್ಕಳಿಗೆ ೨ಗಂಟೆ ಸಾಕಾಗದ ಕಾರಣ ೨.೩೦ ಗಂಟೆಗೆ ಅವಕಾಶ ಮಾಡಿಕೊಡಬೇಕು. ಸಮಯ ಮುಗಿಯುತ್ತೆಂದು ಉತ್ತರಪತ್ರಿಕೆಯನ್ನು ಪಡೆದುಕೊಳ್ಳುವುದರಿಂದ ಉತ್ತಮವಾಗಿ ಬರೆಯುವವರಿಗೆ ತೊಂದರೆಯಾಗಲಿದೆ. ಬಿಕಾಂ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಲಿದೆ. -ದೇವರಾಜ್,ಪ್ರಾಂಶುಪಾಲರು. ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು.

 ಪರೀಕ್ಷೆಗೆ ನೀಡಿರುವ ಸಮಯ ಎರಡು ಗಂಟೆಗಳು ಸಾಕು. ಪ್ರಾಕ್ಟಿಕಲ್ ೪೦ ಅಂಕಗಳಿಗೆ,ಥಿಯರಿ ೬೦ ಅಂಕಗಳಿಗೆ ಇರುವ ಕಾರಣ ೨.೩೦ ಗಂಟೆಗಳ ಸಮಯದ ಅವಶ್ಯಕತೆ ಇಲ್ಲ.ವಿದ್ಯಾರ್ಥಿಗಳುಸಮಯ ನಿಗದಿಪಡಿಸುವಂತೆ ಈ ರೀತಿ ಇಡುವ ಬೇಡಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗದು. ಎನ್‌ಇಪಿಯಲ್ಲಿ ಎರಡು ಗಂಟೆಗೆಸೀಮಿತಗೊಳಿಸಿರುವುದನ್ನು ಮುಂದುವರಿಸಬೇಕು. -ಜಯಕುಮಾರಿ, ಮಹಾಜನ ಕಾಲೇಜು ಪ್ರಾಂಶುಪಾಲರು.

 

 

 

 

 

 

andolana

Recent Posts

ಅಧಿವೇಶನವನ್ನು ಒಂದು ವಾರ ವಿಸ್ತರಿಸಲು ಮನವಿ : ಸ್ಪೀಕರ್‌ಗೆ ಪತ್ರ ಬರೆದ ಪ್ರತಿಪಕ್ಷ ನಾಯಕ ಆರ್‌.ಅಶೋಕ

ಬೆಳಗಾವಿ : ಉತ್ತರ ಕರ್ನಾಟಕದ ಸಮಸ್ಯೆ, ಕಾನೂನು ಸುವ್ಯವಸ್ಥೆಯಲ್ಲಿ ಲೋಪ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇನ್ನೂ ದೀರ್ಘ ಚರ್ಚೆ…

10 hours ago

ಮೊಟ್ಟೆಯಲ್ಲಿ ಕ್ಯಾನ್ಸರ್‌ ಅಂಶ : ವರದಿ ನೀಡಲು ಸೂಚಿಸಿದ ಆರೋಗ್ಯ ಇಲಾಖೆ

ಬೆಳಗಾವಿ : ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬ ವಿಚಾರದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿ ವರದಿ ನೀಡಲು ಇಲಾಖೆಗೆ ಸೂಚಿಸಲಾಗಿದೆ ಎಂದು…

11 hours ago

ಹವಾಮಾನ ವೈಪರೀತ್ಯ : ವಿಮಾನದಲ್ಲೇ ಸಿಲುಕಿದ್ದ ಕರ್ನಾಟಕದ 21 ಶಾಸಕರು ಮತ್ತು 7 ಸಚಿವರು

ಹೊಸದಿಲ್ಲಿ : ದಿಲ್ಲಿಯಲ್ಲಿ ಉಂಟಾದ ದಟ್ಟವಾದ ಹೊಗೆ ಹಾಗೂ ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ 21 ಶಾಸಕರು ಮತ್ತು 7…

11 hours ago

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ : ದಿಲ್ಲಿ ಪೊಲೀಸರ ನೋಟಿಸ್‌ಗೆ ಕಾಲಾವಕಾಶ ಕೋರುವೆ ಎಂದ ಡಿಕೆಶಿ

ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೋಟೀಸ್ʼಗೆ ಉತ್ತರ ನೀಡಲು ಕಾಲಾವಕಾಶ ಕೋರುವೆ ಎಂದು ಡಿಸಿಎಂ…

12 hours ago

ಆಕಸ್ಮಿಕ ಬೆಂಕಿ : ಯಮಹಾ ಬೈಕ್‌ ಸಾಗಿಸುತ್ತಿದ್ದ ಲಾರಿ ಭಸ್ಮ : ಸುಟ್ಟು ಕರಕಲಾದ 40ಬೈಕ್‌ಗಳು

ಬಳ್ಳಾರಿ : ನಗರದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಲಾರಿಯಲ್ಲಿ ಸಾಗಿಸುತ್ತಿದ್ದ ಯಮಹಾ ಕಂಪನಿಯ 40 ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು…

12 hours ago

ಆಸ್ಟ್ರೇಲಿಯಾದಲ್ಲಿ ಉಗ್ರರ ದಾಳಿ : ದಿಲ್ಲಿ, ಬೆಂಗಳೂರಿನಲ್ಲಿ ಹೈ ಅಲರ್ಟ್‌

ಬೆಂಗಳೂರು : ಆಸ್ಪ್ರೇಲಿಯಾದ ಬೀಚ್‌ನಲ್ಲಿ ಭಾನುವಾರ ಮಧ್ಯಾಹ್ನ ಭೀಕರ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಪೊಲೀಸರು ಸೇರಿದಂತೆ 12 ಮಂದಿ…

14 hours ago