-ಶ್ರೀಧರ್ ಆರ್.ಭಟ್
ನಂಜನಗೂಡು: ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ವಂಚಕರು, ಅಮಾಯಕರನ್ನು ವಂಚಿಸುವ ವಿವಿಧ ಬಗೆಯ ಸೈಬರ್ ಅಪರಾಧ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸುತ್ತೂರು ಶ್ರೀಗಳ ಪ್ರಯತ್ನ ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಜನಾಕರ್ಷಣೆಯ ಕೇಂದ್ರವಾಗಿದೆ.
ಇಂದಿನ ಸಮಾಜದಲ್ಲಿ ಅಮಾಯಕರು ಸೈಬರ್ ತಂತ್ರಜ್ಞಾನದ ಮೋಸದ ಜಾಲಕ್ಕೆ ಸಿಲುಕಿ ಹಣ ಮಾತ್ರವಲ್ಲದೇ, ಗೌರವಕ್ಕೆ ದಕ್ಕೆ ತಂದುಕೊಳ್ಳುತ್ತಿರುವುದನ್ನು ಅರಿತ ಶ್ರೀಗಳು, ಈ ಅಪರಾಧ ಕುರಿತಂತೆ ಜನ ಜಾಗೃತಿ ಮೂಡಿಸಲು ಈ ವರ್ಷದ ಜಾತ್ರಾ ಮಹೋತ್ಸವದಲ್ಲಿ ಸೈಬರ್ ಜಾಗೃತಿ ಮಳಿಗೆ ತೆರೆಯಲು ಸೂಚಿಸಿದ ಹಿನ್ನೆಲೆಯಲ್ಲಿ ವಸ್ತು ಪ್ರದರ್ಶನದಲ್ಲಿ ಮಳಿಗೆ ತೆರೆಯಲಾಗಿದೆ.
ಜೆಎಸ್‌ಎಸ್ ವಿಜ್ಞಾನ ತಾಂತ್ರಿಕ ಕಾಲೇಜು, ಜಿಲ್ಲಾ ಸೈಬರ್ ಪೊಲೀಸ್ ಹಾಗೂ ನಂಜನಗೂಡು ಪೊಲೀಸ್ ವಿಭಾಗದ ನೇತೃತ್ವದಲ್ಲಿ ಜಾತ್ರೋತ್ಸವದ ವಸ್ತು ಪ್ರದರ್ಶನದಲ್ಲಿ ಮಳಿಗೆಯನ್ನು ತೆರೆಯಲಾಗಿದ್ದು, ಆಧುನಿಕ ತಂತ್ರಜ್ಞಾನ ಹಾಗೂ ಸಮಾಜದ ಅವಿಭಾಜ್ಯ ಅಂಗಗಳಾದ ಮೊಬೈಲ್, ಲ್ಯಾಪ್‌ಟಾಪ್, ಫೇಸ್‌ಬುಕ್, ವಾಟ್ಸ್ ಆ್ಯಪ್‌ಗಳನ್ನು ಬಳಸಿಕೊಂಡು ಡಿಜಿಟಲ್‌ನಲ್ಲಿ ಜನರನ್ನು ಹೇಗೆ ವಂಚಿಸಲಾಗುತ್ತಿದೆ ಎಂಬ ಕುರಿತು ಇಲ್ಲಿ ಪ್ರಾತ್ಯಕ್ಷಿಕೆಯನ್ನು ತೋರಿಸಿ ಸೈಬರ್ ವಂಚನೆಯಿಂದ ಜನರನ್ನು ಪಾರುಮಾಡುವಯತ್ನ ಇಲ್ಲಿ ನಡೆಯುತ್ತಿದೆ.
ವಿವಿಧ ಆ್ಯಪ್‌ಗಳನ್ನು ಬಳಸಿಕೊಂಡು ಜನತೆಯ ವೈಯೋಕ್ತಿಕ ಮಾಹಿತಿಯನ್ನು ಕದ್ದು ಅದನ್ನು ಬೇರೆಯವರಿಗೆ ಮಾರಾಟ ಮಾಡುವ ಬಗೆಯನ್ನು ಇಲ್ಲಿ ವಿವರಿಸಲಾಗುತ್ತಿದೆ
ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಪ್ರಮುಖರಾದ ಡಾ.ಅನಿಲ್‌ಕುಮಾರ್, ವಿದ್ಯಾರ್ಥಿಗಳಾದ ಕಾರ್ತಿಕ, ತಾನಿಯಾ, ಚಂದನ್ ಎಂಬುವರು ಜಾತ್ರೆಗೆ ಬರುವ ಜನತೆಗೆ ಸೈಬರ್ ಮೋಸದ ಕುರಿತು ಪ್ರಾತ್ಯಕ್ಷಿಕೆ ಸಹಿತ ವಿವರಗಳನ್ನು ನೀಡುತ್ತಿದ್ದರೆ, ಜಿಲ್ಲಾ ಸೈಬರ್ ಠಾಣಾಧಿಕಾರಿ ಶಬೀರ್ ಹುಸೇನ್, ಸಿಂಧು ಹಾಗೂ ನಂಜನಗೂಡು ಪೊಲೀಸ್ ಠಾಣೆಯ ಲೋಕೇಶ ಎಂಬವರು ಸೈಬರ್ ಅಪರಾಧಗಳು, ಶಿಕ್ಷೆ ಪ್ರಮಾಣ ಹಾಗೂ ಅದರ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜನತೆಗೆ ಅರಿವಿನ ಪಾಠ ಮಾಡುತ್ತ ಆನ್‌ಲೈನ್‌ನಲ್ಲಿ ಹಣದ ವಹಿವಾಟುದಾರರೇ ನೀವೆಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು ಎಂಬ ತಿಳಿವಳಿಕೆಯನ್ನು ಮೂಡಿಸುತ್ತಿದ್ದಾರೆ.
ಸೈಬರ್ ಕ್ರೈಂ ಜಾಲಕ್ಕೆ ಸಿಲುಕಿದವರೇ ಇಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿ ತಾವೂ ಮೋಸಕ್ಕೊಳಗಾದ ಬಗೆಯನ್ನು ವಿವರಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ. ವಿಧ ವಿಧವಾದ ಉಡುಗೊರೆಗಳ ಆಮಿಷಕ್ಕೆ ಬಲಿಯಾಗಿ ನಿಮ್ಮ ಮಾಹಿತಿಯನ್ನು ನೀಡಬೇಡಿ ಎಂಬ ಎಚ್ಚರಿಕೆಯ ಪಾಠ ಇಲ್ಲಿ ಬಂದವರಿಗೆಲ್ಲ ಹೇಳುತ್ತಿದ್ದಾರೆ.
ಇಲಾಖೆ ಒಳಗಿನವರು ಹೊರಗಿನವರ ಜೊತೆ ಕೈಜೋಡಿಸಿದರೆ ಮಾತ್ರ ಸೈಬರ್ ಅಪರಾಧ ಎಡೆ ಮಾಡಿಕೊಡಲು ಸಾಧ್ಯ
-ಡಾ ಅನಿಲ್ ಕುಮಾರ್.
ನಾನು ಯಾರಿಗೂ ಮಾಹಿತಿಯನ್ನೇ ನೀಡಿಲ್ಲ. ಆದರೂ ನನ್ನ ಖಾತೆಯಿಂದ 30 ಸಾವಿರ ರೂ. ದೋಚಲಾಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
– ನಂಜುಂಡಸ್ವಾಮಿ, ಕೊಳ್ಳೇಗಾಲ.
ಸೈಬರ್ ಠಾಣೆಯಲ್ಲಿ ಸಾವಿರಾರು ರೂ.ಗಳಿಗೆ ಮಾನ್ಯತೆೆಯೇ ಇಲ್ಲ. ಲಕ್ಷದ ಮೇಲೆ ಹಣ ಕಳೆದುಕೊಂಡರೆ ಮಾತ್ರ ದೂರು ನೀಡಿ, ಕಡಿಮೆ ಹಣದ ವಂಚನೆಗೆ ಒಳಗಾಗಿದ್ದರೆ ಹಣ ಸಿಗಲಾರದು, ಅಲೆದಾಟ ತಪ್ಪದು.
– ಗೋಪಾಲ, ಪಿರಿಯಾಪಟ್ಟಣ.
ಸಾಮಾಜಿಕ ಬಹಿಷ್ಕಾರ ಹಾಕಿದವರಿಗೆ ಜೈಲು ಶಿಕ್ಷೆ ಹಾಗೂ ಲಕ್ಷ ರೂ. ದಂಡವನ್ನು ವಿಧಿಸುವ ಮಸೂದೆಗೆ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ…
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆರ್ಥಿಕ ನಷ್ಟದಿಂದ ಹೊರಬರಲು ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಿದೆ. ಆದರೆ ಈ…
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಊಟಿ ರಸ್ತೆಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯ ಶಾಖೆಗೆ ಪ್ರತಿನಿತ್ಯ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಸ್ಪರ್ಧಾತ್ಮಕ…
ನಿಗಮಗಳಿಗೆ ಸಕಾಲಕ್ಕೆ ಹಣ ಬಿಡುಗಡೆ ಮಾಡದ ಸರ್ಕಾರ; ಏದುಸಿರು ಬಿಡುತ್ತಿರುವ ನಿಗಮಗಳು ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ…
ನವೀನ್ ಡಿಸೋಜ ೧,೯೪೬ ಲಸಿಕೆದಾರರು, ೮೫ ಮೇಲ್ವಿಚಾರಕರು ೯೭೩ ಮನೆ ಭೇಟಿ ನೀಡುವ ತಂಡ ರಚನೆ ಪ್ರವಾಸಿಗರು, ವಲಸೆ ಕಾರ್ಮಿಕರ…
ಸೂರ್ಯಪುತ್ರ ಯಾರಾದ್ರೂ ಮತ್ತೆ ಮತ್ತೆ ಸಿಗ್ತಾನೆ ಇದ್ರೆ ‘ಭೂಮಿ ದುಂಡಗಿದೆ, ಅದ್ಕೆ ಮತ್ತೆ ಮತ್ತೆ ಎದುರುಬದುರಾಗೋದು’ ಅನ್ನೋ ಮಾತು ಕೇಳಿರ್ತೇವೆ.…