ಮೈಸೂರು : ನಂಜನಗೂಡಿನ ಪ್ರಸಿದ್ಧ ನಂಜುಂಡೇಶ್ವರ ದೇವಾಲಯಕ್ಕೆ ರಾಹುಲ್ ಗಾಂಧಿ ಅವರು ಭೇಟಿ ನೀಡಿದರು.
ರಾಹುಲ್ ಗಾಂಧಿ ಅವರಿಗೆ ಹೂವಿನ ಹಾರ ಹಾಕಿ ಮುಖ್ಯ ಅರ್ಚಕರು ಸ್ವಾಗತಿಸಿದರು. ಬಳಿಕ ದೇವಸ್ಥಾನದ ಹಾಗೂ ಟಿಪ್ಪುವಿನ ಬಗ್ಗೆ ರಾಹುಲ್ ಅವರಿಗೆ ಅರ್ಚಕರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸೇರಿದಂತೆ ಪಕ್ಷದ ಹಲವರು ಉಪಸ್ಥಿತರಿದ್ದರು.
ಐಕ್ಯತಾ ಯಾತ್ರೆಯು ಬಳಿಕ ಕಡಕೋಳ ಕೈಗಾರಿಕಾ ಪ್ರದೇಶದಿಂದ ಪಾದಯಾತ್ರೆ ಮುಂದುವರಿಸಲಿದ್ದು ಮೈಸೂರು ನಗರದ ಅರಮನೆ ಮೈದಾನದ ಎದುರಿನ ವಸ್ತು ಪ್ರದರ್ಶನ ಆವರಣದಲ್ಲಿ ತಂಗಲಿದೆ.
ಅಕ್ಟೋಬರ್ 3ರಂದು ಅಂದರೆ ನಾಲ್ಕನೇ ದಿನ ಮೈಸೂರಿನಿಂದ ಯಾತ್ರೆ ಆರಂಭಗೊಳ್ಳಲಿದೆ ಈ ದಿನಗಳಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಆರಂಭಗೊಂಡಿರುತ್ತದೆ. ಇಲ್ಲಿಂದ ಹೊರಟ ಯಾತ್ರೆಯೂ ಕೆನಲು ಗ್ರಾಮದ ವನಜ ಸುಂದರ ಸಭಾಂಗಣದಲ್ಲಿ ಉಪಹಾರ ಸೇವಿಸಿ ಟಿ ಎಸ್ ಛತ್ರ ಗ್ರಾಮವನ್ನು ಪ್ರವೇಶಿಸಲಿದೆ ರಾತ್ರಿ ಅಲ್ಲಿನ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಉಳಿದುಕೊಳ್ಳಲಿದೆ.
ಅ.4 ಮತ್ತು 5ರಂದು ಪಾದಯಾತ್ರೆಗೆ ವಿಶ್ರಾಂತಿ ಇದ್ದು, ಏಳನೆ ದಿನ ಮಂಡ್ಯದ ಶ್ರೀ ಮಹದೇಶ್ವರ ದೇವಸ್ಥಾನದಿಂದ ಪುನರಾರಂಭಗೊಳ್ಳಲಿದೆ. ನಾಗಮಂಗಲದ ಚೌಡೇನಹಳ್ಳಿ ಗೇಟ್‍ನಿಂದ ನಡೆಯುವ ಪಾದಯಾತ್ರೆ ರಾತ್ರಿ ಎಂ.ಹೊಸೂರು ಗೇಟ್‍ನ ಬರಮದೇವರಹಳ್ಳಿಯಲ್ಲಿ ತಂಗಲಿದೆ. ಎಂಟನೆ ದಿನ ವಿಸ್ಡಂ ಶಾಲೆಯಿಂದ ಆರಂಭಗೊಂಡು ನಾಗಮಂಗಲದ ಅಂಚೆಚಿಟ್ಟನ ಹಳ್ಳಿಯಿಂದ ಮುಂದುವರೆದು ಆದಿಚುಂಚನಗಿರಿ ಮಠದ ಬೇಳ್ಳುರು ಟೌನ್‍ನಲ್ಲಿ ರಾತ್ರಿ ವಿಶ್ರಾಂತಿ ಪಡೆಯಲಿದೆ.
ಶೇ.30ರಷ್ಟು ಉತ್ಪಾದನೆ ಕುಸಿತ ; ಉತ್ತರ ಕೊಡಗಿನ ಭಾಗದಲ್ಲಿ ಹೆಚ್ಚಿನ ಬೆಳೆ ನಷ್ಟ ನವೀನ್ ಡಿಸೋಜ ಮಡಿಕೇರಿ: ಈ ಬಾರಿಯ…
ಭೇರ್ಯ ಮಹೇಶ್ ಕೆ.ಆರ್.ನಗರ : ಭತ್ತದ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಇದೀಗ ಭತ್ತದ…
ದೊಡ್ಡ ಕವಲಂದೆ : ಗಬ್ಬೆದ್ದು ನಾರುತ್ತಿರುವ ಚರಂಡಿಯ ಕೊಳಚೆ ನೀರಿನಿಂದ ಗ್ರಾಮ ಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡು ತ್ತಿದ್ದು, ಗ್ರಾಮ…
ಸರಗೂರು : ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಜನ ಸಾಮಾನ್ಯರು ತತ್ತರಿಸಿ ಆತಂಕದಲ್ಲಿದ್ದರೂ ನಿಯಂ ತ್ರಣ…
ನುರಿತ ತಜ್ಞರ ತಂಡದಿಂದ ಕೆರೆ ಸ್ವಚ್ಛತೆ ಆರಂಭಿಸಲು ತಯಾರಿ ಮೈಸೂರು : ಪ್ರವಾಸಿಗರು ಹಾಗೂ ವಾಯುವಿಹಾರಿಗಳ ನೆಚ್ಚಿನ ತಾಣವಾದ ಕುಕ್ಕರಹಳ್ಳಿ…
ಮೈಸೂರು ನಗರದ ಪ್ರತಿಯೊಂದೂ ವಾರ್ಡ್‌ನ ಪ್ರತಿ ಮಾರ್ಗದಲ್ಲೂ ಮೈಸೂರು ಮಹಾ ನಗರ ಪಾಲಿಕೆಯಿಂದ ವಾರ್ಡ್ ಸಂಖ್ಯೆ, ವಾರ್ಡ್‌ನ್ನು ಪ್ರತಿನಿಧಿಸುವ ಪಾಲಿಕೆ…