ಗುಂಡ್ಲುಪೇಟೆ : ಕನ್ನಡ ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಅಪಮಾನ ಮಾಡಿರುವುದನ್ನು ಖಂಡಿಸಿ ಆರೋಪಿಯನ್ನು ಕೂಡಲೇ ಗಡಿಪಾರು ಮಾಡುವಂತೆ ಒತ್ತಾಯಿಸಿ ತಾಲೂಕಿನ ಬೇಗೂರು ಗ್ರಾಮದ ಆರ್ಯ ಈಡಿಗ ಜನಾಂಗ ಹಾಗೂ ಕರ್ನಾಟಕ ರಕ್ಷಣಾ ಕನ್ನಡ ಕಹಳೆ ಸಂಘಟನೆ ಮತ್ತು ಅಪ್ಪು ಅಭಿಮಾನಿಗಳ ಬಳಗ ಬೇಗೂರು ಇವರುಗಳ ವತಿಯಿಂದ ದೂರು ಸಲ್ಲಿಸಲಾಯಿತು.
ಆರೋಪಿಯದ ಮೈಸೂರಿನ ಲಿಂಗದೇವರು ಕೊಪ್ಪಲು ಗ್ರಾಮದ ಮಲ್ಲಿಕಾರ್ಜುನ ಅಲಿಯಾಸ್ ಪುಟ್ಟು ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕುರಿತು ಅವಮಾನಕಾರಿ ಹೇಳಿಕೆ ನೀಡಿರುವುದು ಕನ್ನಡ ಕುಲಕ್ಕೆ ಅಪಮಾನ ಮಾಡಿದಂತಾಗಿದೆ, ಇದು ನಮ್ಮ ಹಾಗೂ ಅಪ್ಪು ಅಭಿಮಾನಿಗಳ ಮನಸ್ಸಿಗೆ ಬಹಳ ನೋವುಂಟು ಮಾಡಿರುವ ಹಿನ್ನೆಲೆ ಕೂಡಲೇ ಆತನನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸುವ ಮೂಲಕ ಠಾಣೆಯ ಎಎಸ್ಐ ಜಯರಾಮ್ ಅವರಿಗೆ ಲಿಖಿತ ರೂಪದಲ್ಲಿ ದೂರು ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ಕನ್ನಡ ಕಹಳೆ ಸಂಘಟನೆ ಜಿಲ್ಲಾಧ್ಯಕ್ಷ ಗೋಪಿ ಬೇಗೂರು ಹೋಬಳಿ ಆರ್ಯ ಈಡಿಗ ಸಮುದಾಯದ ಯಜಮಾನರುಗಳಾದ ಸುರೇಶ್, ಲೋಕೇಶ್,ಸೋಮಹಳ್ಳಿ ಮಂಜು, ಪರ್ಮಿ,ಸೀನ, ಮಣಿ , ಶಕೀ , ವಿಶು,ವಾಸು, ಯೋಗೇಶ್,ಆನಂದ್,ಮುಂತಾದವರು ಹಾಜರಿದ್ದರು
ವಿಶ್ವಸಂಸ್ಥೆ : ಇರಾನ್ ವೈರಿಗಳು ಹಾಗೂ ಅವರೊಂದಿಗೆ ನಂಟು ಹೊಂದಿರುವ ರಾಷ್ಟ್ರಗಳಿಗೆ ಮಾತ್ರ ಹೊರ್ಮುಜ್ ಜಲಸಂಧಿ ಮುಚ್ಚಲಾಗಿದೆ ಎಂದು ವಿಶ್ವಸಂಸ್ಥೆಯ…
ಹನೂರು : ವಿಧಾನಸಭಾ ಕ್ಷೇತ್ರದ ಪ್ರಮುಖ ಜಲಾಶಯಗಳ ಪೈಕಿ ರಾಮನ ಗುಡ್ಡ ಜಲಾಶಯಕ್ಕೆ ಕಳೆದ ಎರಡು ತಿಂಗಳ ಹಿಂದೆ ಕಾವೇರಿ…
ಕೈರೋ: ತಾಂತ್ರಿಕ ದೋಷದಿಂದಾಗಿ ಕತಾರ್ ಹೆಲಿಕಾಪ್ಟರ್ ಅಪಘಾತವಾಗಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ಹೇಳಿದೆ. ಕತಾರ್‌ನ ಪ್ರಾದೇಶಿಕ ನೀರಿನಲ್ಲಿ…
ಬೆಂಗಳೂರು: ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ತಮ್ಮ ಸರ್ಕಾರ ಕ್ರಮ ಕೈಗೊಂಡಿದ್ದು, 6ನೇ ಹಂತದ ಕಾವೇರಿ ನೀರು…
ವಾಷಿಂಗ್ಟನ್: ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಎಲ್ಲಿದ್ದಾರೆ? ಬದುಕಿದ್ದಾರಾ? ಎಂದು ಅಮೇರಿಕಾ ಪ್ರಶ್ನೆ ಮಾಡಿದೆ.…
ಬೆಂಗಳೂರು: ಡಿಜಿಪಿ ರಾಮಚಂದ್ರ ರಾವ್ ಅವರ ರಾಸಲೀಲೆಯ ವಿಡಿಯೋ ಆಧಾರದ ಮೇಲೆ ಇಲಾಖಾ ತನಿಖೆ ನಡೆಯಲಿದ್ದು, ವರದಿ ನಂತರ ಸೂಕ್ತಕ್ರಮ…