ಹನೂರು : ಪ್ರತಿಯೊಬ್ಬರಿಗೂ ಸದೃಢ ದೇಹ ಸದೃಢ ಮನಸು ಇರಬೇಕಾದರೆ ಪೌಷ್ಟಿಕ ಆಹಾರ ಬಹಳ ಮುಖ್ಯ ಈ ವಿಚಾರದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಹೋಲಿಕ್ರಾಸ್ ಸಂಸ್ಥೆಯ ಸಂಯೋಜಕ ಬಸವರಾಜು ತಿಳಿಸಿದರು.
ತಾಲೂಕಿನ ಕೂಡಲೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹೋಲಿಕ್ರಾಸ್ ಸಂಸ್ಥೆ, ಅಂಗನವಾಡಿ ಸಹಕಾರದೊಂದಿಗೆ ಹಮ್ಮಿಕೊoಡಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಈ ಕಾರ್ಯಕ್ರಮದ ಉದ್ದೇಶ ಪೌಷ್ಟಿಕ ಆಹಾರದ ಬಗ್ಗೆ ಜನರಿಗೆ ಅರಿವು ಮೂಡಿಸುವುದಾಗಿದೆ. ಪೌಷ್ಟಿಕ ಆಹಾರ ನಮ್ಮ ದೈನಂದಿನ ಜೀವನದಲ್ಲಿ ತುಂಬಾ ಮುಖ್ಯವಾಗಿದೆ.ಆರೋಗ್ಯಕರ ಜೀವನ ನಡೆಸಲು ಇಂತಹ ಆಹಾರ ತುಂಬಾ ಅವಶ್ಯಕವಾಗಿದೆ.ಇಂತಹ ಆರೋಗ್ಯಕರ ಜೀವನ ನಡೆಸಲು ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದಲೇ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಇಲ್ಲಿ ಪಡೆದ ಮಾಹಿತಿ ತಿಳಿದುಕೊಂಡು ತಮ್ಮ ಜೀವನಕ್ಕೆ ಬೇಕಾದ ಆಹಾರ ಪದ್ಧತಿಯನ್ನು ಬದಲಾವಣೆ ಮಾಡಿಕೊಂಡು ಪೌಷ್ಟಿಕ ಆಹಾರ ಸೇವನೆ ಮಾಡಿ ಎಂದರು.
ಶಿಕ್ಷಕಿ ಗಾಯತ್ರಿ ಮಾತನಾಡಿ ಆರೋಗ್ಯವೇ ಭಾಗ್ಯ ಎಂಬಂತೆ ಮನುಷ್ಯ ಆರೋಗ್ಯಯುತವಾಗಿರಬೇಕಾದರೆ ಒಳ್ಳೆಯ ಪೌಷ್ಟಿಕ ಆಹಾರ ಸೇವನೆ ತುಂಬಾ ಮುಖ್ಯ ಆ ನಿಟ್ಟಿನಲ್ಲಿ ತಾವೆಲ್ಲರೂ ಸಹ ತರಕಾರಿ, ಹಣ್ಣು ಹಂಪಲು, ಹಾಲು ಈಗೆ ಪ್ರೊಟೀನ್ ಯುತ ಆಹಾರ ಪದಾರ್ಥ ಒಟ್ಟಾರೆ ಪೌಷ್ಟಿಕ ಆಹಾರ ಸೇವಿಸಲೇ ಬೇಕು ಎಂದರು.
ಇದೆ ಸಂದರ್ಭದಲ್ಲಿ ಪೌಷ್ಟಿಕ ಆಹಾರ ಸೇವನೆ ಕುರಿತು ಹೋಲಿಕ್ರಾಸ್ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಶಾಲಾ ಶಿಕ್ಷಕರು ಮಕ್ಕಳಿಗೆ, ನೆರೆದಿದ್ದ ಪೋಷಕರಿಗೆ ಅರಿವು ಮೂಡಿಸಿದರು.
ಇದೆ ಸಂದರ್ಭದಲ್ಲಿ , ಸಹ ಶಿಕ್ಷಕರಾದ ರಾಜಮ್ಮ,, ಮರಿಯಮ್ಮ, ನಿರ್ಮಲ ಮೇರಿ, ಅಂಗನವಾಡಿ ಶಿಕ್ಷಕಿಯಾದ ಉಮಾ ದೇವಿ, ಗ್ಲೋರಿಯ, ಈಶ್ವರಿ ಹೋಲಿಕ್ರಾಸ್ ಸಂಸ್ಥೆಯ ಸಂಯೋಜಕ ಸುರೇಶ್, ದಾನಪ್ಪ, ಮುತ್ತು, ಕಾಂತರಾಜು, ಮಧು, ಹಾಗೂ ಗರ್ಭಿಣಿ ಬಾಣoತಿಯರು, ಮಕ್ಕಳು ಇದ್ದರು..
೨೦೨೫ನೇ ವರ್ಷಕ್ಕೆ ವಿದಾಯ ಹೇಳಿ ೨೦೨೬ರ ಹೊಸ ವರ್ಷವನ್ನು ಸ್ವಾಗತಿಸುವ ದಿನ ಸನ್ನಿಹಿತವಾಗಿದೆ. ಪ್ರತಿ ಸಲ ಹೊಸ ವರ್ಷವನ್ನು ಹರ್ಷದಿಂದ…
ಟಾಂಗಾ ಸವಾರಿ ವಲಯ ನಿರ್ಮಾಣಕ್ಕೆ ೨.೭೧ ಕೋಟಿ ರೂ. ಮಂಜೂರು ಕೇಂದ್ರದ ಸ್ವದೇಶ ದರ್ಶನ ಯೋಜನೆಯಡಿ ಗ್ರೀನ್ ಟೂರ್‌ಗೆ ಆದ್ಯತೆ …
ಹಾಸನ ಜಿಲ್ಲೆ ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಆಯೋಜನೆ: ಡಾ.ಅನಂತರಾವ್ ಮಂಡ್ಯ: ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ…
ಕೋಟಿಗಾನಹಳ್ಳಿ ರಾಮಯ್ಯ ಇದು ಕದಡಿದ ನೀರಿನಂತಹ ಕಾಲ. ಈ ಮಬ್ಬಿನ ವಾತಾವರಣದಲ್ಲಿ ಬಹುರೂಪಿ ರಂಗಾಯಣದಲ್ಲಿ ‘ಬಹುರೂಪಿ ಅಂಬೇಡ್ಕರ್’ ಎಂಬ ಆಶಯ…
ಸ್ಟ್ಯಾನ್ಲಿ ‘ನನ್ನಮ್ಮ ರೋಸ್ಮಂಡ್ ವಾನಿಂಗನ್ ಆಂಗ್ಲ ಮಹಿಳೆಯಾಗಿದ್ದರೂ, ಅವಳು ನಂಜನಗೂಡಿನ ನಂಜಿಯಾಗಿದ್ದಳು. ಬಿಸಿಲ್ ಮಂಟಿ ಗ್ರಾಮಸ್ಥರು ಆಕೆಗೆ ಇಟ್ಟಿದ್ದ ಹೆಸರಾಗಿತ್ತದು.…