ಜಿಲ್ಲೆಗಳು

ಪೊಲೀಸ್ ಠಾಣೆ ಅಂದ ಹೆಚ್ಚಿಸಿದ ಇನ್‌ಸ್ಪೆಕ್ಟರ್!

ಎಚ್.ಡಿ.ಕೋಟೆ ಠಾಣೆ ಅಭಿವೃದ್ಧಿಗೆ ನೆರವಾದ ಬಸವರಾಜು, ಸಿಬ್ಬಂದಿಗೆ ಸಾರ್ವಜನಿಕರ ಮೆಚ್ಚುಗೆ

ಮಂಜು ಕೋಟೆ
ಹೆಚ್.ಡಿ.ಕೋಟೆ: ಯಾವುದೇ ಒಬ್ಬ ಅಧಿಕಾರಿ ಇಲಾಖೆಗೆ ಮತ್ತು ತಾಲ್ಲೂಕಿಗೆ ಏನಾದರೂ ಸೇವೆ ಸಲ್ಲಿಸಬೇಕೆಂಬ ಛಲ ಇದ್ದರೆ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಡೆಯುತ್ತವೆ ಎಂಬುದಕ್ಕೆ ಪಟ್ಟಣದ ಇಲ್ಲೊಂದು ಪೊಲೀಸ್ ಠಾಣೆ ಉದಾಹರಣೆಯಾಗಿದೆ.
ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಪಟ್ಟಣದ ಪೊಲೀಸ್ ಠಾಣೆ ದುಸ್ಥಿತಿಯಿಂದ ಕೂಡಿತ್ತಲ್ಲದೆ, ಅನೇಕ ಮೂಲಭೂತ ಸೌಕರ್ಯಗಳಿಂದ  ವಂಚಿತವಾಗಿತ್ತು. ಇದನ್ನು ಮನಗಂಡ ತಾಲ್ಲೂಕಿನವರೇ ಆದ ಎಚ್.ಮಟಕೆರೆ ನಿವಾಸಿ ಬಸವರಾಜ್ ಅವರು ತಾಲ್ಲೂಕು ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ಒಂದು ವರ್ಷದ ಹಿಂದೆ ಅಧಿಕಾರ ವಹಿಸಿಕೊಂಡು, ತಮ್ಮ ವ್ಯಾಪ್ತಿಯ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ಉತ್ತಮ ಸೇವೆ ಮಾಡುವುದರ ಜೊತೆಗೆ ತಮ್ಮ ಹಣ ಮತ್ತು ಕೆಲವರ ಸಹಾಯವನ್ನು ಪಡೆದುಕೊಂಡು ಪೊಲೀಸ್ ಠಾಣೆ ಹಾಗೂ ಆವರಣವನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಮೂಲಕ ಠಾಣೆಯ ಅಂದವನ್ನು ಹೆಚ್ಚಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೂ ಪಾತ್ರರಾಗಿದ್ದಾರೆ.

ಸಾರ್ವಜನಿಕರು ದೂರುಗಳಿಗೆ ಬಂದ ಸಂದರ್ಭದಲ್ಲಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಪಾರ್ಕಿಂಗ್, ಸುಂದರವಾದ ಗಾರ್ಡನ್ ಜೊತೆಗೆ ಹಳೆಯ ಪೊಲೀಸ್ ಠಾಣೆ ಕಟ್ಟಡದ ನವೀಕರಣ, ಸುಣ್ಣಬಣ್ಣ , ಠಾಣೆ ಎದುರು ಫ್ಲಾಟ್ ಫಾರಂ ಹೀಗೆ ಹಲವಾರು ಅಬಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಸುವ್ಯವಸ್ಥಿತ ಪೊಲೀಸ್ ಠಾಣೆಯಾಗಿ ನಿರ್ಮಾಣಗೊಂಡಿದೆ.
ಪೊಲೀಸ್ ಠಾಣೆ ಎಂದರೆ ಪೊಲೀಸರು ಮತ್ತು ಸಿಬ್ಬಂದಿ ವರ್ಗದವರು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಾರೆ ಎಂಬ ಜನರ ಅಭಿಪ್ರಾಯಗಳೇ ಹೆಚ್ಚಾಗಿರುವ ಇಂತಹ ಸಂದರ್ಭದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಉತ್ತಮವಾದ ಕೆಲಸ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಪೊಲೀಸ್ ಠಾಣೆಯ ಅಭಿವೃದ್ಧಿ ಕೆಲಸಗಳಿಗೆ ಸಿಬ್ಬಂದಿ ಮತ್ತು ನೌಕರರು ಸಹ ಸಾಥ್ ನೀಡಿರುವುದರಿಂದ ಇನ್ನೂ ಹಲವಾರು ವರ್ಷಗಳ ಕಾಲ ಈ ಠಾಣೆಯ ಕಟ್ಟಡವು ಜನರಿಗೆ ಸೇವೆ ನೀಡಬಹುದಾಗಿದೆ. ಸಾರ್ವಜನಿಕರು ಮತ್ತು ನೊಂದವರು ತಮ್ಮ ಕೆಲಸ ಕಾರ್ಯಕ್ಕೆ ಬಂದವರಿಗೆ ಪೊಲೀಸ್ ಇಲಾಖೆಯವರು ಉತ್ತಮ ಸೇವೆ ನೀಡಿದರೆ ಜನಪರ ಪೊಲೀಸ್ ಠಾಣೆಯಾಗುವುದರಲ್ಲಿ ಎರಡು ಮಾತಿಲ್ಲ. ಇದು ಇತರೆ ತಾಲ್ಲೂಕು ಠಾಣೆಗಳಿಗೂ ಸ್ಫೂರ್ತಿಗಲಿದೆ.


ಪೊಲೀಸ್ ಠಾಣೆಯ ವಾತಾವರಣ ಉತ್ತಮವಾಗಿದ್ದರೆ ಸಾರ್ವಜನಿಕರ ಕೆಲಸ ಕಾರ್ಯಗಳನ್ನು  ಮಾಡಲು ಸ್ಫೂರ್ತಿ ಸಿಗಲಿದೆ. ಅದಕ್ಕಾಗಿಯೇ ಕಚೇರಿಯ ಸುತ್ತಮುತ್ತ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು. ಅದರಂತೆ ಮಾಡಿಕೊಂಡಿದ್ದಾರೆ. ಇದು ಉತ್ತಮವಾದ ಬೆಳವಣಿಗೆ.
-ಚೇತನ್, ಪೊಲೀಸ್ ವರಿಷ್ಠಾಧಿಕಾರಿ

 


ಪೊಲೀಸ್ ಠಾಣೆ ಕಟ್ಟಡ ತುಂಬಾ ಹಳೆಯದಾಗಿದ್ದರಿಂದ ಮಳೆ ಬಂದರೆ ನೀರು ಶೇಖರಣೆಯಾಗಿ ಕೆರೆಯಂತಾಗುತ್ತಿತ್ತು. ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಅನೇಕರ ಸಹಕಾರದಿಂದ ಪೊಲೀಸ್ ಠಾಣೆಯನ್ನು ನವೀಕರಿಸುವುದರ ಜೊತೆಗೆ ಹೊಸ ವಾತಾವರಣ ನಿರ್ಮಿಸಲಾಗಿದೆ.
-ಬಸವರಾಜು, ಸರ್ಕಲ್ ಇನ್‌ಸ್ಪೆಕ್ಟರ್

andolanait

Recent Posts

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

28 mins ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

34 mins ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

43 mins ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

1 hour ago

ಮುಡಾ ಮೇಲೆ ಇ.ಡಿ.ದಾಳಿ: ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ: ಡಿಸಿಎಂ ʼಡಿಕೆಶಿʼ

ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…

2 hours ago

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

2 hours ago