ಜಿಲ್ಲೆಗಳು

ಗ್ರಾಪಂ ಆವರಣದಲ್ಲಿ ಕಸದ ರಾಶಿ ಸುರಿದು ಪ್ರತಿಭಟನೆ

ಗುಂಡ್ಲುಪೇಟೆ : ಗ್ರಾಮಪಂಚಾಯಿತಿಯ ಅಸಮರ್ಪಕ ಕಾರ್ಯವೈಖರಿಯಿಂದ ಬೇಸತ್ತ ಗ್ರಾಮಸ್ಥರು ಹಾಗೂ ರೈತ ಮುಖಂಡರು ಗ್ರಾಮದ ಬೀದಿಗಳಲ್ಲಿದ್ದ ಕಸದ ರಾಶಿಯನ್ನು ತಾವೆ ಎತ್ತಿನ ಗಾಡಿಯಲ್ಲಿ ತುಂಬಿಕೂಂಡು ಬಂದು ಗ್ರಾಮಪಂಚಾಯಿತಿ ಆವರಣದಲ್ಲಿ ಸುರಿದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಗೂ ಗ್ರಾಪಂ ಅಧ್ಯಕ್ಷರ ವಿರುದ್ದ ಪ್ರತಿಭಟನೆ ನಡೆಸಿದ ಘಟನೆ ಕೋಟೆಕೆರೆ ಗ್ರಾಮದಲ್ಲಿ ನಡೆದಿದೆ.

ಬೇಗೂರು ಸಮೀಪದ ಕೋಟೆಕೆರೆ ಗ್ರಾಮದಲ್ಲಿ ಸುಮಾರು 3 ಸಾವಿರ ಜನಸಂಖ್ಯೆಯಿದ್ದು ಸುಮಾರು 7 ಗ್ರಾಮಗಳು ಈ ಗ್ರಾಮಪಂಚಾಯಿತಿಗೆ ಸೇರಿದ್ದು ಪ್ರತಿವರ್ಷದಂತೆ ಈ ವರ್ಷವು ಸಹ ಗ್ರಾಮಗಳಲ್ಲಿ ಗ್ರಾಮದೇವತೆ ಹಬ್ಬ ಆಚರಿಸುವ ವಾಡಿಕೆಯಿದ್ದು ತುಂಬ ಸಾಂಪ್ರದಾಯಕವಾಗಿ ಶ್ರದ್ದಾ ಭಕ್ತಿಬಾವದಿಂದ ಮನೆ ಹಾಗೂ ಮನೆಯ ಅಂಗಳವನ್ನೆಲ್ಲ ಸಿಂಗರಿಸಿ ಹಬ್ಬ ಆಚರಿಸುತ್ತಾರೆ ಅಷ್ಟೆ ಅಲ್ಲದೆ ಅಕ್ಕ ಪಕ್ಕದ ಗ್ರಾಮಗಳಿಂದಲು ಸಹ ಭಕ್ತಾಧಿಗಳು ಹಬ್ಬಕ್ಕೆ ಬಂದು ತಾಯಿಗೆ ಪೂಜೆ ಸಲ್ಲಿಸಿ ನಂತರ ನೆಂಟರ ಮನೆಗೆ ಓತಣಕೂಟ್ಟಕ್ಕೆ ಬರುವುದು ವಾಡಿಕೆ,

ಈ ಸಂಭ್ರಮದಲ್ಲಿರಬೇಕಾದ ಗ್ರಾಮಸ್ಥರು ಇಂದು ಮನೆಯ ಮುಂಭಾಗವಿರುವ ಕಸದ ರಾಶಿಯಿಂದ ಬೆಸತ್ತು ಅದರ ದುರ್ವಾಸನೆ ತಾಳಲಾರದೆ ಬಂದ ನೆಂಟರಿಷ್ಟರಿಗೂ ಗ್ರಾಮದ ಅನೈರ್ಮಲ್ಯದ ದರುಶನ ಮಾಡಿಸಿದಂತಾಗಿದ್ದು. ಈ ಹಿಂದೆಯೇ ಅನೇಕ ಬಾರಿ ಗ್ರಾಮಪಂಚಾಯಿತಿಗೆ ಈ ವಿಚಾರವಾಗಿ ಕಸತೆಗೆಸುವಂತೆ ದೂರಿದ್ದರು ಸಹ ಗ್ರಾಪಂ ಅಧ್ಯಕ್ಷ ಹಾಗೂ ಪಿ.ಡಿ.ಒ ಈ ಬಗ್ಗೆ ಯಾವುದೆ ಕ್ರಮಕೈಗೂಳ್ಳದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಎಡೆಮಾಡಿಕೂಟ್ಟಿದೆ. ಹಬ್ಬಮುಗಿಸಿದ ಗ್ರಾಮಸ್ಥರು ಕಸದ ರಾಶಿಯನ್ನು ಎತ್ತಿನ ಗಾಡಿಯಲ್ಲಿ ತುಂಬಿ ಗ್ರಾಪಂ ಆವರಣದಲ್ಲಿ ಸುರಿದು ಪ್ರತಿಭಟನೆ ನಡೆಸಿದ್ದಾರೆ.
ಅಊಓ೮ಃಉಖ೩ ಬೇಗೂರು ಸಮೀಪದ ಕೋಟೆಕೆರೆ ಗ್ರಾಪಂ ನ ಆವರಣದಲ್ಲಿ ಕಸಸುರಿದು ಪ್ರತಿಭಟನೆ ನಡೆಸಿದ ಗ್ರಾಮಸ್ಥರು
ಬೇಗೂರು ಸಮೀಪದ ಕೋಟೆಕೆರೆ ಗ್ರಾಮದಲ್ಲಿ ಸುಮಾರು ೩ ಸಾವಿರ ಜನಸಂಖ್ಯೆಯಿದ್ದು ಸುಮಾರು ೭ ಗ್ರಾಮಗಳು ಈ ಗ್ರಾಮಪಂಚಾಯಿತಿಗೆ ಸೇರಿದ್ದು ಪ್ರತಿವರ್ಷದಂತೆ ಈ ವರ್ಷವು ಸಹ ಗ್ರಾಮಗಳಲ್ಲಿ ಗ್ರಾಮದೇವತೆ ಹಬ್ಬ ಆಚರಿಸುವ ವಾಡಿಕೆಯಿದ್ದು ತುಂಬ ಸಾಂಪ್ರದಾಯಕವಾಗಿ ಶ್ರದ್ದಾ ಭಕ್ತಿಬಾವದಿಂದ ಮನೆ ಹಾಗೂ ಮನೆಯ ಅಂಗಳವನ್ನೆಲ್ಲ ಸಿಂಗರಿಸಿ ಹಬ್ಬ ಆಚರಿಸುತ್ತಾರೆ ಅಷ್ಟೆ ಅಲ್ಲದೆ ಅಕ್ಕ ಪಕ್ಕದ ಗ್ರಾಮಗಳಿಂದಲು ಸಹ ಭಕ್ತಾಧಿಗಳು ಹಬ್ಬಕ್ಕೆ ಬಂದು ತಾಯಿಗೆ ಪೂಜೆ ಸಲ್ಲಿಸಿ ನಂತರ ನೆಂಟರ ಮನೆಗೆ ಓತಣಕೂಟ್ಟಕ್ಕೆ ಬರುವುದು ವಾಡಿಕೆ

ಈ ಸಂಭ್ರಮದಲ್ಲಿರಬೇಕಾದ ಗ್ರಾಮಸ್ಥರು ಇಂದು ಮನೆಯ ಮುಂಭಾಗವಿರುವ ಕಸದ ರಾಶಿಯಿಂದ ಬೆಸತ್ತು ಅದರ ದುರ್ವಾಸನೆ ತಾಳಲಾರದೆ ಬಂದ ನೆಂಟರಿಷ್ಟರಿಗೂ ಗ್ರಾಮದ ಅನೈರ್ಮಲ್ಯದ ದರುಶನ ಮಾಡಿಸಿದಂತಾಗಿದ್ದು. ಈ ಹಿಂದೆಯೇ ಅನೇಕ ಬಾರಿ ಗ್ರಾಮಪಂಚಾಯಿತಿಗೆ ಈ ವಿಚಾರವಾಗಿ ಕಸತೆಗೆಸುವಂತೆ ದೂರಿದ್ದರು ಸಹ ಗ್ರಾಪಂ ಅಧ್ಯಕ್ಷ ಹಾಗೂ ಪಿ.ಡಿ.ಒ ಈ ಬಗ್ಗೆ ಯಾವುದೆ ಕ್ರಮಕೈಗೂಳ್ಳದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಎಡೆಮಾಡಿಕೂಟ್ಟಿದೆ. ಹಬ್ಬಮುಗಿಸಿದ ಗ್ರಾಮಸ್ಥರು ಕಸದ ರಾಶಿಯನ್ನು ಎತ್ತಿನ ಗಾಡಿಯಲ್ಲಿ ತುಂಬಿ ಗ್ರಾಪಂ ಆವರಣದಲ್ಲಿ ಸುರಿದು ಪ್ರತಿಭಟನೆ ನಡೆಸಿದ್ದಾರೆ.

andolanait

Recent Posts

ದಿಲ್ಲಿ ಗಣರಾಜ್ಯೋತ್ಸವಕ್ಕೆ ಬೆದರಿಕೆ : ಗುರುಪತ್ವಂತ್‌ ಸಿಂಗ್‌ ವಿರುದ್ಧ ಎಫ್‌ಐಆರ್‌

ಹೊಸದಿಲ್ಲಿ : ಗಣರಾಜ್ಯೋತ್ಸವಕ್ಕೂ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ ಅಶಾಂತಿ ಸೃಷ್ಟಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಸಿಖ್ ಫಾರ್ ಜಸ್ಟೀಸ್ ನಿಯೋಜಿತ ಭಯೋತ್ಪಾದಕ…

6 hours ago

ಕಾಡಾನೆಗಳ ಲಗ್ಗೆ : ಕಬ್ಬಿನ ಫಸಲು ನಾಶ, ಪರಿಹಾರಕ್ಕಾಗಿ ಒತ್ತಾಯ

ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಪಿ.ದೊಡ್ಡಿ ಗ್ರಾಮದಲ್ಲಿ 5 ಕಾಡಾನೆಗಳ ಹಿಂಡು ಬೀಡುಬಿಟ್ಟು ಕಬ್ಬಿನ ಬೆಳೆ ಫಸಲನ್ನು ನಾಶಗೊಳಿಸಿರುವ ಘಟನೆ…

7 hours ago

ಕೊಡಗಿನ ತಿತಿಮತಿಯಲ್ಲಿ ಹುಲಿ ಪ್ರತ್ಯಕ್ಷ ; ಸ್ಥಳೀಯರಲ್ಲಿ ಆತಂಕ

ಮಡಿಕೇರಿ : ಮೈಸೂರು-ಗೋಣಿಕೊಪ್ಪ ಹೆದ್ದಾರಿಯ ದಕ್ಷಿಣ ಕೊಡಗಿನ ತಿತಿಮತಿ ವ್ಯಾಪ್ತಿಯಲ್ಲಿ ಹುಲಿಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದು, ಹುಲಿ ಸೆರೆಗೆ ಶಾಸಕ…

7 hours ago

ಖಾಸಗಿ ಶಾಲೆಗಳನ್ನು ನಾಚಿಸುವ ಹೈಟೆಕ್ ಸರ್ಕಾರಿ ಶಾಲೆ : ಆದರೆ ಮಕ್ಕಳ ದಾಖಲಾತಿ ಕೇವಲ 40!

ನಂಜನಗೂಡು : ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಖಾಸಗಿ ಶಾಲೆಗಳನ್ನು ಸಹ ನಾಚಿಸುವಂತಹ ಆಧುನಿಕ ಸೌಲಭ್ಯಗಳನ್ನು…

8 hours ago

ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಜಾಗ ನೀಡುವಂತೆ ಸಿಎಂಗೆ ಪತ್ರ ಬರೆದಿದ್ದೇನೆ : ಎಚ್‌ಡಿಕೆ

ಬೃಹತ್ ಕೈಗಾರಿಕೆ ಸಚಿವಾಲಯ ಅಧೀನದ ಎಆರ್‌ಎಐ ಘಟಕ ಸ್ಥಾಪನೆಗೆ ಪರಿಶೀಲನೆ ನಡೆಯುತ್ತಿದೆ : ಕುಮಾರಸ್ವಾಮಿ ಮಂಡ್ಯ : ಜಿಲ್ಲೆಯಲ್ಲಿ ಕೈಗಾರಿಕೆ…

8 hours ago

ರಾಜ್ಯವೇ ನನ್ನ ಪರಿಮಿತಿ, ಜನ ಬಯಸಿದ ಕಡೆ ಸ್ಪರ್ಧೆ : ಎಚ್‌.ಡಿ.ಕುಮಾರಸ್ವಾಮಿ

ಮಂಡ್ಯ : ಕರ್ನಾಟಕ ರಾಜ್ಯವೇ ನನ್ನ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಮಾಡುತ್ತಾರೆ ಅಲ್ಲಿಂದ ನನ್ನ ಸ್ಪರ್ಧೆ ಮಾಡುತ್ತೇನೆ ಎನ್ನುವ…

8 hours ago