ಕೆ.ಆರ್.ಆಸ್ಪತ್ರೆಯಲ್ಲಿ ೨೪ ಗಂಟೆಗಳೂ ಕಾರ್ಯನಿರ್ವಹಿಸಲು ಅಗತ್ಯ ಸಿದ್ಧತೆ
ಮೈಸೂರು: ಬೆಳಕಿನ ಹಬ್ಬ ದೀಪಾವಳಿ ವೇಳೆಯಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತಗಳನ್ನು ತಡೆಯಲು ನಗರದ ದೊಡ್ಡಾಸ್ಪತ್ರೆ ಸಜ್ಜಾಗಿದ್ದು, ದಿನದ ೨೪ ಗಂಟೆಗಳೂ ಕಾರ್ಯನಿರ್ವಹಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪಟಾಕಿ ಸಿಡಿತದ ಗಾಯಾಳುಗಳಿಗೆ ತುರ್ತು ಸೇವೆ ಒದಗಿಸಲು ವೈದ್ಯರು, ಶುಶ್ರೂಷಕರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯ ವೈದ್ಯ ಹಾಗೂ ವೈದ್ಯೇತರ ಸಿಬ್ಬಂದಿ ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸಲಿದ್ದಾರೆ.
ಕಳೆದ ಬಾರಿ ಜಿಲ್ಲೆಯಲ್ಲಿ ೭ ಮಂದಿ ಪಟಾಕಿ ಸಿಡಿತದಿಂದ ತೀವ್ರ ಗಾಯಗೊಂಡಿದ್ದರು. ೧೦ ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು. ಅವರೆಲ್ಲ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಮುಂಜಾಗ್ರತೆ ಕ್ರಮಗಳು
* ಮಕ್ಕಳು ಪಟಾಕಿ ಸಿಡಿಸುವಾಗ ಹಿರಿಯರು ಜತೆಯಲ್ಲಿರಬೇಕು
* ಪಟಾಕಿ ಹಚ್ಚಲು ಮಕ್ಕಳಿಗೆ ಉದ್ದದ ಅಗರಬತ್ತಿ ನೀಡಬೇಕು
* ಪಟಾಕಿ ಸಿಡಿಸುವವಾಗ ಕಾಟನ್ ಬಟ್ಟೆಗಳನ್ನು ಧರಿಸಬೇಕು
* ಪಟಾಕಿ ಹಚ್ಚಿ ಪರೀಕ್ಷಿಸುವ ಕುತೂಹಲ ಬೇಡ
* ಕೈಯಲ್ಲಿ ಹಿಡಿದು ಪಟಾಕಿ ಹಚ್ಚುವ ಸಾಹಸ ಬೇಡ
* ಬಾಂಬ್‌ಗಳು ಹಾಗೂ ಪ್ಲವರ್ ಪಾಟ್ಸ್, ರಾಕೆಟ್ ಹೆಚ್ಚು ಹಾನಿ
* ಪಟಾಕಿ ಕಿಡಿ ಕಣ್ಣಿಗೆ ಬಡಿದಾಗ ಉಜ್ಜಿಕೊಳ್ಳಬಾರದು, ತಕ್ಷಣ ತಣ್ಣೀರಿನಿಂದ ತೊಳೆಯಬೇಕು ನಂತರ ಸಮೀಪದ ಕಣ್ಣಿನ ಆಸ್ಪತ್ರೆ ಹೋಗಿ ಚಿಕಿತ್ಸೆ ಪಡೆಯಬೇಕು.
ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿ ಮಾಡಿಕೊಂಡವರಿಗೆ ಚಿಕಿತ್ಸೆ ನೀಡಲು ಕೆ.ಆರ್.ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಆರಂಭಿಸುವ ಜತೆಗೆ ೫೦ರಿಂದ ೬೦ ಬೆಡ್‌ಗಳನ್ನು ಮೀಸಲಿಡಲಾಗಿದೆ. ಸುಮಾರು ೧೨ ಮಂದಿ ತಜ್ಞ ವೈದ್ಯರು, ೩೦ ಪಿಜಿ ವೈದ್ಯರು, ನರ್ಸ್‌ಗಳು, ಡಿ ಗ್ರೂಪ್ ನೌಕರರು ಸೇವೆಗೆ ಸಜ್ಜಾಗಿದ್ದಾರೆ. ಚಿಕಿತ್ಸೆಗೆ ಅಗತ್ಯ ಔಷಧ, ಶಸ್ತ್ರಚಿಕಿತ್ಸೆ ಉಪಕರಣಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ.
–ಡಾ.ಸತೀಶ್ ಕುಮಾರ್, ಮುಖ್ಯಸ್ಥರು, ಕೆ.ಆರ್.ಆಸ್ಪತ್ರೆಯ ಕಣ್ಣಿನ ವಿಭಾಗ.
ಬೆಂಗಳೂರು: ನವೆಂಬರ್ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ ಎಂದು ರಾಜ್ಯ ಸರ್ಕಾರ…
ಗುಂಡ್ಲುಪೇಟೆ: ತಾಲ್ಲೂಕಿನ ವಡಯ್ಯನಪುರ ಹಾಗೂ ಬೊಮ್ಮಲಾಪುರ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ. ಬೊಮ್ಮಲಾಪುರ…
ಹನೂರು: ತಾಲ್ಲೂಕಿನ ಗುಂಡಾಪುರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ದನ-ಕುರಿ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ…
ಮೈಸೂರು: ಮೈಸೂರಿನಲ್ಲಿ ಕಳೆದ ವರ್ಷದ ದಸರಾ ವೇಳೆ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು…
ಮೈಸೂರು: ದಸರಾ ದೀಪಾಲಂಕಾರದ ನಡುವೆ ಅವಘಡವೊಂದು ಸಂಭವಿಸಿದೆ. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ಕುಸಿದು ಬಿದ್ದಿದ್ದು,…
ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್ಗಳ ವಿಚಾರ…