ಮೈಸೂರು: ನರೇಂದ್ರ ಮೋದಿಯವರು ಬೆಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಮೈಸೂರಿನಿಂದ ಚೆನ್ನೈಗೆ ತೆರಳುವ ನೂತನ ರೈಲು ಗಾಡಿಗೆ ಚಾಲನೆ ನೀಡಿದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಇಂದು ಮೈಸೂರಿನ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಯುವ ಭಾರತ್ ಸಂಘಟನೆಯ ವತಿಯಿಂದ ಪ್ರಯಾಣಿಕರನ್ನು ಸ್ವಾಗತಿಸಿ ರೈಲಿನ ಚಾಲಕರಿಗೆ ಸನ್ಮಾನಿಸಿ ಸಿಹಿ ವಿತರಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದ ಪ್ರತಾಪ್ ಸಿಂಹ ರವರಿಗೆ ಘೋಷಣೆ ಕೂಗಿ ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಸಂಘಟನೆಯ ಸಂಚಾಲಕ ರಾದ ಜೋಗಿಮಂಜು ಮೈಸೂರಿನಿಂದ ಚೆನ್ನೈಗೆ ಕಡಿಮೆ ಅವಧಿಯಲ್ಲಿ ತಲುಪಲಿದ್ದು ಇದರಿಂದ ನಿತ್ಯ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಮೈಸೂರಿನಿಂದ ಪ್ರತಿದಿನ ಸಾವಿರಾರು ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಾರೆ ,ಈ ದಿನ ತುಂಬಾ ಸಂತೋಷದ ದಿನ ದಕ್ಷಿಣ ಭಾರತದ ಅಂತರ್ ರಾಜ್ಯ ದ ತಮಿಳು ನಾಡು ಹಾಗೂ ಕರ್ನಾಟಕ ಬಾಂಧವ್ಯ ಇನ್ನೂ ಹೆಚ್ಚಿಸುತ್ತಿದೆ ಹಾಗೇ ಮೈಸೂರು, ಮಂಡ್ಯ,ಹಾಸನ,ಚಾಮರಾಜನಗರ, ಕೊಡಗು ಭಾಗದ ಜನರಿಗೆ ಹಾಗೂ ಈ ಭಾಗದ ಪ್ರವಾಸೋದ್ಯಮ,ಕೈಗಾರಿಕೆ ಗೆ ಹೆಚ್ಚು ಪ್ರೊತ್ಸಾಹ ಹೆಚ್ಚಾಗುತ್ತದೆ,ಈ ರೈಲು ಕೇವಲ 1.30 ನಿಮಿಷ ಕ್ಕೆ ಬೆಂಗಳೂರು ತಲುಪುತ್ತವೆ, ಈ ಕಾರ್ಯಕ್ಕೆ ಹೆಚ್ಚು ಸಹಕಾರ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ , ಜೀ ಹಾಗೂ ಸಂಸದ ಪ್ರತಾಪ್ ಸಿಂಹ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ರವರಿಗೆ ಅಭಿನಂದನೆಗಳು ಸಲ್ಲಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಯುವ ಭಾರತ ಸಂಘಟನೆಯ ಅಧ್ಯಕ್ಷರಾದ ಜೋಗಿ ಮಂಜು ,ಕೇಬಲ್ ಮಹೇಶ್ ,ಅಪೂರ್ವ ಸುರೇಶ್ ,ಸಂದೇಶ ,ಅಜಯ್ ಶಾಸ್ತ್ರಿ ,ಪ್ರಮೋದ್ ಗೌಡ, ಉಮೇಶ್,ರವಿತೇಜಾ,ಸುರೇಂದ್ರ, ಶಿವಪ್ರಕಾಶ್, ನಂದಕುಮಾರ್, ಸಂದೀಪ್ , ಶರತ್ ,ಮಹೇಂದ್ರ ಶೈವ ,ಧರ್ಮೇಂದ್ರ ,ಹಾಗೂ ಇನ್ನಿತರರು ಹಾಜರಿದ್ದರು
ಬೆಂಗಳೂರು: ಸಚಿವ ಜಮೀರ್ ಅಹಮ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಮನೆ ಸೇರಿ 10 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು…
ನವದೆಹಲಿ: ಕೇಂದ್ರ ಸರ್ಕಾರದ ವತಿಯಿಂದ ಇತ್ತೀಚೆಗೆ ಜಾರಿಗೊಳಿಸಲಾದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ 2026ರ ಫೆಬ್ರವರಿ.12ರಂದು ದೇಶವ್ಯಾಪಿ…
ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದು, ಬ್ಲೂಬರ್ಡ್ ಬ್ಲಾಕ್-2 ವಿದೇಶಿ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ…
ಹಾಸನ: ರಾಜ್ಯದಲಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಶಾಲಾ ವ್ಯಾನ್ ಚಾಲಕನಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿರುವ…
ಹುಣಸೂರು: ಟ್ರಾಕ್ಟರ್‌ನಲ್ಲಿ ಜಮೀನು ಉಳುಮೆ ಮಾಡುತ್ತಿದ್ದ ಚಾಲಕನ ಹುಲಿಗಳ ದಾಳಿಯಿಂದ ಬಚಾವಾಗಿರುವ ಘಟನೆ ತಾಲ್ಲೂಕಿನ ಹನಗೋಡು ಹೋಬಳಿಯ ನೇಗತ್ತೂರು ಗ್ರಾಮದಲ್ಲಿ…
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಪಕ್ಕದ ರಸ್ತೆಯಲ್ಲಿರುವ ಸಾರ್ವಜನಿಕ ಶೌಚಾಲಯ ಪಕ್ಕದಲ್ಲಿರುವ ಮೋರಿಯೊಳಗೆ ಕಸದ…