ತಿ.ನರಸೀಪುರ ಪ್ರಾದೇಶಿಕ ಅರಣ್ಯ ಇಲಾಖೆಯ ಆವರಣದಲ್ಲಿ ಕ್ರೂರ ನರಭಕ್ಷಕ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ರೈತ ಸಂಘ, ಹಸಿರು ಸೇನೆ ಹಾಗೂ ದಸಂಸ ನೇತೃತ್ವದಲ್ಲಿ ವಿವಿಧ ಗ್ರಾಮಗಳ ಜನರು ಪ್ರತಿಭಟನೆ ನಡೆಸಿದರು.
ಪ್ರಾದೇಶಿಕ ಅರಣ್ಯ ಇಲಾಖೆ ಎದುರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ
ತಿ.ನರಸೀಪುರ: ತಾಲ್ಲೂಕಿನ ಎಂ.ಎಲ್.ಹುಂಡಿ ಗ್ರಾಮದ ಯುವಕನನ್ನು ಬಲಿ ಪಡೆದ ನರಭಕ್ಷಕ ಚಿರತೆ ಸೆರೆ ಹಿಡಿಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಪಟ್ಟಣದ ಪ್ರಾದೇಶಿಕ ಅರಣ್ಯ ಇಲಾಖೆಯ ಆವರಣದಲ್ಲಿ ರೈತ ಸಂಘ, ಹಸಿರು ಸೇನೆ ಹಾಗೂ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ವಿವಿಧ ಗ್ರಾಮಗಳ ಜನರು ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ ನಲ್ಲಿರುವ ಪ್ರಾದೇಶಿಕ ಅರಣ್ಯ ಇಲಾಖೆಯ ಆವರಣದಲ್ಲಿ ಹಲವು ಮಠಾಧೀಶರೊಂದಿಗೆ ಜವಾವಣೆಗೊಂಡ ಹತ್ತಾರು ಗ್ರಾಮಗಳ ರೈತರು, ಯುವಕರು ಹಾಗೂ ಸಂಘಟನೆಗಳ ಕಾರ್ಯಕರ್ತರು, ಅಮಾಯಕ ಯುವಕನೋರ್ವನ ಚಿರತೆಗೆ ಬಲಿಯಾಗಿ ತಿಂಗಳಾಗಿದೆ. ನಿತ್ಯವೂ ಒಂದಲ್ಲ ಒಂದು ಜಾನುವಾರು ಚಿರತೆಗೆ ಬಲಿಯಾಗುತ್ತಿವೆ. ರಾತ್ರಿಯಾದರೆ ಊರೊಳಗೆ ಚಿರತೆಗಳು ಅಡ್ಡಾಡುತ್ತವೆ. ಜೀವ ಭಯದಲ್ಲಿ ದಿನ ನೂಕುತ್ತಿದ್ದರೂ ಯಾವುದೇ ಗಂಭೀರ ಕಾರ್ಯಾಚರಣೆ ನಡೆಸದೆ ಅಮಾಯಕ ಜನರ ಬದುಕಿನ ಜೊತೆ ಚೆಲ್ಲಾಟ ಆಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಮದ್ಗಾರ ಲಿಂಗಯ್ಯನ ಹುಂಡಿ ಮಠದ ಶ್ರೀ ಗೌರಿಶಂಕರ ಸ್ವಾಮೀಜಿ, ವಿದ್ಯಾರ್ಥಿಯನ್ನು ಚಿರತೆ ಬಲಿ ಪಡೆದು ತಿಂಗಳು ಕಳೆಯುತ್ತಾ ಬಂದಿದ್ದರೂ ನರಹಂತಕ ಚಿರತೆಯನ್ನು ಬಂಧಿಸದಿರುವುದು ಅರಣ್ಯ ಇಲಾಖೆಯ ವೈಫಲ್ಯವನ್ನು ಎತ್ತಿತೋರಿಸುತ್ತದೆ. ಹಾಗಾಗಿ ಅರಣ್ಯ ಇಲಾಖೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬಂಧಿಸಬೇಕು. ಇಲ್ಲವಾದಲ್ಲಿ ಮುಂದೆ ನಡೆಯುವ ಅನಾಹುತಗಳಿಗೆ ಇಲಾಖೆಯನ್ನೇ ನೇರ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಘಟನೆ ನಡೆದು ತಿಂಗಳು ಕಳೆದರೂ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಸೌಜನ್ಯ ತೋರಿಸಿಲ್ಲ. ಇದು ಅವರು ಜನರ ಮೇಲಿಟ್ಟಿರುವ ಅಸಡ್ಡೆ ಪ್ರವೃತ್ತಿಯನ್ನು ತೋರಿಸುತ್ತದೆ ಎಂದರು.
ಪ್ರಭಾರ ಅಧಿಕಾರಿಯಾಗಿ ಅಹವಾಲು ಆಲಿಸಲು ಆಗಮಿಸಿದ್ದ ಎಸಿಎಫ್ ಕೆ.ಎಸ್.ಶಿವರಾಮು ಅವರ ವಿರುದ್ಧವೂ ಪ್ರತಿಭಟನಾನಿರತರು ಹರಿಹಾಯ್ದರು.
ದಸಂಸ ಜಿಲ್ಲಾ ಸಂಚಾಲಕ ಡಾ.ಆಲಗೂಡು ಚಂದ್ರಶೇಖರ್ ಮಾತನಾಡಿ, ತಾಲ್ಲೂಕಿನಾದ್ಯಂತ ಚಿರತೆಗಳ ಹಾವಳಿ ವ್ಯಾಪಕವಾಗಿದೆ. ಚಿರತೆಗಳು ಕಂಡ ತಕ್ಷಣವೇ ಸೆರೆ ಹಿಡಿಯುವ ತುರ್ತು ಕಾರ್ಯಾಚರಣೆ ನಡೆಸದ ಅಧಿಕಾರಿಗಳ ಬೇಜವಾಬ್ದಾರಿಯ ಪರಿಣಾಮ ಅವುಗಳ ಸಂಖ್ಯೆ ಹೆಚ್ಚಾಗಿದೆ ಎಂದು ದೂರಿದರು.
ಸ್ಥಳಕ್ಕೆ ಆಗಮಿಸಿದ ಶಾಸಕ ಎಂ.ಅಶ್ವಿನ್ ಕುಮಾರ್, ಪ್ರತಿಭಟನಾ ನಿರತರ ಅಹವಾಲು ಆಲಿಸಿ, ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಚಿರತೆಗಳ ಹಾವಳಿಯನ್ನು ತಡೆಗಟ್ಟಲು ಗಂಭೀರ ಕಾನೂನು ರೂಪಿಸುವ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರುತ್ತೇನೆ. ಚಿರತೆಗೆ ಬಲಿಯಾಗಿರುವ ಎಂಎಲ್ ಹುಂಡಿ ಯುವಕನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕಲ್ಪಿಸಿಕೊಡಲು ಈಗಲೂ ಬದ್ಧನಾಗಿದ್ದೇನೆ. ಅರಣ್ಯ ಅಧಿಕಾರಿಗಳು ಚಿರತೆಗಳ ಸೆರೆಗೆ ಕಠಿಣ ಕ್ರಮವನ್ನ ತೆಗೆದುಕೊಳ್ಳಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿಭಟನೆಯಲ್ಲಿ ಹಲವಾರು ಮಠದ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಕಳ್ಳಿಪುರ ಮಠದ ಚಿದಾನಂದ ಶಿವಾಚಾರ್ಯ ಸ್ವಾಮೀಜಿ, ಸೇತುವೆ ಮಠದ ಸಹಜಾನಂದ ಸ್ವಾಮೀಜಿ, ನರಗ್ಯಾತನಹಳ್ಳಿ ಮಠದ ಶಿವಕುಮಾರ ಸ್ವಾಮೀಜಿ, ಅಂಗರಪುರ ಮಠದ ಬಸವಲಿಂಗ ಸ್ವಾಮೀಜಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಗೌರವಾಧ್ಯಕ್ಷ ಕೆ. ಜಿ. ಶಿವಪ್ರಸಾದ್, ಜಿಲ್ಲಾ ಸಂಚಾಲಕ ಕಳ್ಳಿಪುರ ಮಹದೇವಸ್ವಾಮಿ, ವಿದ್ಯಾಸಾಗರ್, ಇವ್ಮಾವು ರಘು, ಹೊಳೆಸಾಲು ಪ್ರದೀಪ್, ಅತ್ತಹಳ್ಳಿ ಸ್ವಾಮಿ ರಾಜು, ಗೋಪಿ, ಸಂಪತ್ತು, ದಸಂಸ ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರ ಮೂರ್ತಿ, ಕನ್ನಾಯಕನಹಳ್ಳಿ ಮರಿಸ್ವಾಮಿ, ಕೆಂಪಯ್ಯನಹುಂಡಿ ರಾಜು, ನರಗ್ಯಾತನಹಳ್ಳಿ ಮನೋಜ್, ಮಹೇಶ್, ಸುನಿಲ್, ಕುಮಾರ್, ರಾಜಪ್ಪ, ಅಯ್ಯಪ್ಪ ಸಿದ್ದಲಿಂಗಮೂರ್ತಿ, ಶಾಂತರಾಜು, ಜೈರಾಮು, ಮೂಗೂರು ಚೇತನ್, ಕುಪ್ಯ ಗವಿಸಿದ್ದಯ್ಯ, ಚಂದ್ರಪ್ಪ, ಕೊಡಗಹಳ್ಳಿ ಪ್ರತಾಪ್, ಕೃಷ್ಣಪ್ಪ, ಪರಶುರಾಮ್ ಹಾಗೂ ವಿವಿಧ ಗ್ರಾಮಗಳ ರೈತರು ಭಾಗವಸಿದ್ದರು.
ತಾಲ್ಲೂಕಿನ ಯಾವುದೇ ಭಾಗದಲ್ಲಿ ಚಿರತೆ ದಾಳಿಯಿಂದ ಯಾರೇ ಸಾವನ್ನಪ್ಪಿದರೂ ಅವರ ಮೃತ ದೇಹವನ್ನು ಅರಣ್ಯ ಅಧಿಕಾರಿಗಳ ಟೇಬಲ್ ಮೇಲೆ ಇಡುತ್ತೇವೆ. ಇಲಾಖೆ ಆವರಣದಲ್ಲಿಯೇ ಮೃತರ ಅಂತ್ಯಸಂಸ್ಕಾರ ನೆರವೇರಿಸಿ ಸ್ಮಾರಕವನ್ನಾಗಿಸುತ್ತೇವೆ. -ಪ್ರತಿಭಟನಾಕಾರರು
ಮೈಸೂರು: ವೈಚಾರಿಕ, ವೈಜ್ಞಾನಿಕ ಶಿಕ್ಷಣ ಪಡೆಯದಿದ್ದರೆ ನಾವೆಲ್ಲಾ ಮೌಡ್ಯಕ್ಕೆ ದಾಸರಾಗುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಮಾನಸ…
ಮೈಸೂರು: 2028ರವರೆಗೂ ಸಿದ್ದರಾಮಯ್ಯ ತಮ್ಮ ಅವಧಿಯನ್ನು ಪೂರೈಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು. ಈ ಕುರಿತು…
ಬೆಂಗಳೂರು: ಸಿದ್ದರಾಮಯ್ಯ ಇಲ್ಲ ಅಂದರೆ ಕಾಂಗ್ರೆಸ್ ಇಲ್ಲ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ…
ಬಳ್ಳಾರಿ: ನಗರದಲ್ಲಿ ನಡೆದ ಗಲಭೆಯಲ್ಲಿ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಸಾಂತ್ವನ…
ನವದೆಹಲಿ: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆಯರ ನಾಪತ್ತೆ, ಅನಾಥ ಶವಗಳ ಪತ್ತೆ…
ತಮಿಳುನಾಡು: ಕರೂರು ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ.12ರಂದು ವಿಚಾರಣೆಗೆ ಹಾಜರಾಗುವಂತೆ ನಟ ಹಾಗೂ ರಾಜಕಾರಣಿ ವಿಜಯ್‌ಗೆ ಕೇಂದ್ರ ತನಿಖಾ…