ಐನೆಕ್ಸ್-ಡಿಆರ್‌ಸಿ ಚಿತ್ರಮಂದಿರಗಳಲ್ಲಿ ೭ ದಿನಗಳ ಕಾಲ ೧೧೦ ಸಿನಿಮಾ ಪ್ರದರ್ಶನ
ಮೈಸೂರು: ಏಳು ದಿನಗಳ ಕಾಲ ನಡೆದ ದಸರಾ ಚಲನಚಿತ್ರೋತ್ಸವಕ್ಕೆ ಸೋಮವಾರ ಸಂಭ್ರಮದ ಕ್ಷಣಗಳೊಂದಿಗೆ ತೆರೆ ಎಳೆಯಲಾಯಿತು. ಐನೆಕ್ಸ್ ಚಿತ್ರಮಂದಿರದ ೨ನೇ ಸ್ಕ್ರೀನ್‌ನಲ್ಲಿ ಗರುಡಗಮನ ವೃಷಭ ವಾಹನ, ೩ನೇ ಸ್ಕ್ರೀನ್‌ನಲ್ಲಿ ‘ದಿ ಕ್ಲೌಡ್ ಆ?ಯಂಡ್ ದಿ ಮ್ಯಾನ್’, ೪ನೇ ಸ್ಕ್ರೀನ್‌ನಲ್ಲಿ ‘ಪೋಟ್ರೆಟ್ ಆಫ್ ಅ ಲೇಡಿ ಆನ್ ಫಯರ್’ ಹಾಗೂ ಡಿಆರ್‌ಸಿ ಚಿತ್ರಮಂದರಿದಲ್ಲಿ ‘ಪುಕ್ಸೆಟ್ಟೆ ಲೈಫು’ ಚಿತ್ರಗಳು ಚಲನಚಿತ್ರೋತ್ಸವ ಕೊನೆಯ ಸಿನಿಮಾಗಳಾಗಿ ಪ್ರದರ್ಶನ ಕಂಡವು.
ಐನೆಕ್ಸ್‌ನಲ್ಲಿ ಸೋಮವಾರ ಮಧ್ಯಾಹ್ನ ಪ್ರದರ್ಶನಗೊಂಡ ‘ನಮ್ಮ ಚಿಲ್ಡ್ರನ್ ಇಂಡಿಯಾ.ಕಾಂ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಚಿತ್ರ ಪ್ರದರ್ಶನದ ನಂತರ ನಡೆಸಿದ ಸಂವಾದದಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಎನ್.ಆರ್.ನಂಜುಂಡೇಗೌಡ ಅವರು ಮಾತನಾಡಿ, ಈ ಚಿತ್ರವು ಪ್ರಸ್ತುತ ಕಾಲಘಟ್ಟದಲ್ಲಿ ಕಂಡಿರುವ ಜ್ವಲಂತ ಸಮಸ್ಯೆಗಳನ್ನು ಚಿಕಿತ್ಸಕ ದೃಷ್ಟಿಕೋನದಿಂದ ನೋಡುತ್ತದೆ ಎಂದು ತಿಳಿಸಿದರು.
ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಸಲಹೆಗಾರರರಾದ ಎಂ.ಕೆ.ಕೆಂಪೇಗೌಡ, ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ.ರಂಗಸ್ವಾಮಿ, ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಮತ್ತಿತರರು ಚಿತ್ರವನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವ ಸಿನಿಮಾಗಳಿಗೆ ಮುಗಿಬಿದ್ದ ಜನ: ಐನೆಕ್ಸ್‌ನ ೪ನೇ ಸ್ಕ್ರೀನ್‌ನಲ್ಲಿ ಪ್ರದರ್ಶನಗೊಂಡ ವಿಶ್ವ ಸಿನಿಮಾಗಳಿಗೆ ಜನರು ಮುಗಿಬಿದ್ದರು. ಭಾರತೀಯ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿದ್ದ ೩ನೇ ಸ್ಕ್ರೀನ್‌ನಲ್ಲೂ ಪ್ರೇಕ್ಷಕರಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಯಿತು. ಆದರೆ ಐನೆಕ್ಸ್ ಮತ್ತು ಡಿಆರ್‌ಸಿಯ ಒಂದೊಂದು ಸ್ಕ್ರೀನ್‌ನಲ್ಲಿ ಪ್ರದರ್ಶನಗೊಂಡ ಕನ್ನಡ ಸಿನಿಮಾಗಳಿಗೆ ಹೇಳಿಕೊಳ್ಳುವಷ್ಟು ಪ್ರೇಕ್ಷಕರು ಬರಲಿಲ್ಲ.
ವಿಶ್ವ ಸಿನಿಮಾದ ವಿಭಾಗದಲ್ಲಿ ಪ್ರದರ್ಶನಗೊಂಡ ಚಲನಚಿತ್ರಗಳು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗಿರುವ ಚಿತ್ರಗಳಾಗಿದ್ದವು. ಅಲ್ಲದೇ ಭಾರತೀಯ ಸಿನಿಮಾ ವಿಭಾಗದಲ್ಲಿ ಬೇರೆ-ಬೇರೆ ಭಾಷೆಯ ಚಿತ್ರಗಳು ಪ್ರದರ್ಶನಗೊಂಡ ಹಿನ್ನೆಲೆಯಲ್ಲಿ ಪ್ರೇಕ್ಷಕರು ಆ ಕಡೆ ಒಲವು ತೋರಿಸಿದರು. ಆದರೆ ಕನ್ನಡ ಸಿನಿಮಾಗಳು ಇತ್ತೀಚಿಗಷ್ಟೇ ಬಿಡುಗಡೆಗೊಂಡು ಆಗ ತಾನೇ ಎಲ್ಲರೂ ನೋಡಿರುತ್ತಾರೆ. ಅಲ್ಲದೇ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸಿಗುವುದರಿಂದ ಸಿನಿಮಾ ಮಂದಿರದಲ್ಲಿ ಪ್ರೇಕ್ಷಕರ ಕೊರತೆ ಇತ್ತು ಎಂದು ಚಿತ್ರೋತ್ಸವ ಆಯೋಜಕರು ವಾಸ್ತವಾಂಶವನ್ನು ಮುಂದಿಟ್ಟರು.
ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಕನ್ನಡ ಸಿನಿಮಾಗಳಾದ ದೊಡ್ಡಟ್ಟಿ ಬೋರೇಗೌಡ ಸಿನಿಮಾ ಹೌಸ್‌ಫುಲ್ ಆಗಿತ್ತು. ಅಪ್ಪು ನಟಿಸಿರುವ ಬೆಟ್ಟದ ಹೂವು, ರಾಜಕುಮಾರ ಚಿತ್ರಗಳೂ ತುಂಬಿದ ಗೃಹದ ಪ್ರದರ್ಶನ ಕಂಡವಲ್ಲದೇ ಭಾವುಕತೆಯ ಕ್ಷಣಗಳಿಗೂ ಸಾಕ್ಷಿಯಾದವು.
ಜಾಗೃತಿ-ಅರಿವಿನ ಸಮಾಗಮ
ಮೈಸೂರು: ಐನೆಕ್ಸ್‌ನಲ್ಲಿ ಭಾನುವಾರ ಜಾಗೃತಿ ಮತ್ತು ಅರಿವಿನ ಸಮಾಗಮದ ಚಿತ್ರಗಳು ಪ್ರದರ್ಶನಗೊಂಡು, ಒಂದು ಚೈತನ್ಯದಾಯಕ ವಾತಾವರಣ ಸೃಷ್ಟಿಯಾಗಿತ್ತು. ಮಯೂರ್ ಪಟೇಲ್ ನಿರ್ದೇಶನದ ‘ತಮಟೆ’ ಹಾಗೂ ಅಬ್ದುಲ್ ಕರೀಂ ನಿರ್ದೇಶನದ ‘ಶ್ರೀ ಸುತ್ತೂರು ಕ್ಷೇತ್ರ ಗುರುಪರಂಪರೆ’ ಆ?ಯನಿಮೇಷನ್ ಸಿನಿಮಾಗಳು ಅಕ್ಕಪಕ್ಕದ ಸ್ಕ್ರೀನ್‌ಗಳಲ್ಲಿ ಪ್ರದರ್ಶನಗೊಂಡವು.
೭೦ರ ದಶಕದಲ್ಲಿ ಬಂದ ಕನ್ನಡದ ಹೊಸ ಅಲೆಯ ಸಿನಿಮಾಗಳನ್ನು ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಮಾಡಬೇಕು ಎನ್ನುವ ಅಭಿಲಾಷೆ ಇತ್ತು. ಆದರೆ ಆ ಚಿತ್ರಗಳು ಈಗಿನ ತಂತ್ರಜ್ಞಾನವಾದ ಡಿಜಿಟಿಲ್ ಪ್ಲಾಟ್‌ಫಾರ್ಮ್‌ನಲ್ಲಿ ಸಿಗುವುದಿಲ್ಲ. ಬೆಟ್ಟದ ಹೂವು ಸಿನಿಮಾವನ್ನು ನಾವೇ ಡಿಸಿಪಿಗೆ ರೂಪಾಂತರಗೊಳಿಸಿ ಪ್ರದರ್ಶನ ಮಾಡಿದ್ದೆವು. ತನ್ಮೂಲಕ ಒಂದು ಉತ್ತಮ ಗುಣಮಟ್ಟದ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಿದ ಖುಷಿ ನಮಗಾಯಿತು. -ಮನು, ಚಲನಚಿತ್ರೋತ್ಸವದ ಸಂಯೋಜಕರು
ಕನ್ನಡ ಸಿನಿಮಾಗಳು ವಿಶ್ವದ ಸಿನಿಮಾಗಳ ಮಟ್ಟದಲ್ಲಿ ತಯಾರಾಗುತ್ತಿವೆ. ಹೊಸ ಹುಡುಗರು ನಿರ್ದೇಶನ ಮಾಡಿರುವ ಸಿನಿಮಾಗಳು ಚೆನ್ನಾಗಿ ಮೂಡಿ ಬರುತ್ತಿವೆ. ಕನ್ನಡ ಸಿನಿಮಾ ರಂಗ ಒಂದು ರೀತಿ ವಿಕಸನದ ಹಾದಿಯಲ್ಲಿ ಹೊಗುತ್ತಿದೆ. –ಜೆ.ಬಿ.ರಂಗಸ್ವಾಮಿ, ನಿವೃತ್ತ ಪೊಲೀಸ್ ಅಧಿಕಾರಿ.
ದಸರಾ ಚಲನಚಿತ್ರೋತ್ಸವದಲ್ಲಿ ಉತ್ತಮ ಸಿನಿಮಾಗಳನ್ನು ವೀಕ್ಷಣೆ ಮಾಡುವ ಅವಕಾಶ ನಮಗೆ ದೊರೆಕಿತು. ವಿಶ್ವದ ಅತ್ಯುತ್ತಮ ಸಿನಿಮಾಗಳು, ಭಾರತೀಯ ಸಿನಿಮಾಗಳನ್ನು ಅಕ್ಕಪಕ್ಕದ ಸ್ಕ್ರೀನ್‌ಗಳಲ್ಲಿ ನೋಡುವ ಸೌಲಭ್ಯವನ್ನು ಕಲ್ಪಿಸಿದ ಆಯೋಜಕರಿಗೆ ಧನ್ಯವಾದ. -ಲಕ್ಷ್ಮೀನಾರಾಯಣ ನಾಯಕ್, ಸಿನಿಮಾ ಪ್ರೇಮಿ
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…