ಮೈಸೂರು: ನಗರದ ಲಲಿತಮಹಲ್ ಅರಮನೆ ಬಳಿ ಇರುವ ಮೈದಾನದಲ್ಲಿ 5 ಲಕ್ಷಕ್ಕೂ ಅಧಿಕ ರುದ್ರಾಕ್ಷಿಗಳಿಂದ ನಿರ್ಮಿಸಿರುವ ತ್ರೀಡಿಯಿಂದ ಕಣ್ಮನ ಸೆಳೆಯುವ 21 ಅಡಿ ಎತ್ತರದ ಶಿವಲಿಂಗ ನಿರ್ಮಿಸಲಾಗಿದೆ.
ಮಹಾಶಿವರಾತ್ರಿ ಅಂಗವಾಗಿ ಫೆ.22ರವರೆಗೆ ಹರಿದ್ವಾರದಿಂದ ತಂದು ನಿರ್ಮಿಸಿರುವ ರುದ್ರಾಕ್ಷಿಯ ಬೃಹತ್ ಶಿವಲಿಂಗ ಸಾರ್ವಜನಿಕರ ಉಚಿತ ದರ್ಶನಕ್ಕೆ ನಿತ್ಯ ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಆಲನಹಳ್ಳಿ ಸೇವಾ ಕೇಂದ್ರದಿಂದ ಹಿವಾಚ್ಛಾದಿತ ಕೈಲಾಸ ಪರ್ವತದೊಂದಿಗೆ ನಿರ್ಮಾಣಗೊಂಡಿರುವ ಶಿವಲಿಂಗ ತ್ರೀಡಿ ಎಫೆಕ್ಟ್ ಇರುವುದು ವಿಶೇಷ ಹಿಮಾಲಯದ ಪ್ರತಿಕೃತಿ ನಿರ್ಮಿಸಿ, ಅದರ ಮೇಲೆ 21 ಅಡಿ ಎತ್ತರ, 20 ಅಡಿ ಅಗಲದ ಶಿವಲಿಂಗವನ್ನು 5,16,108 ರುದ್ರಾಕ್ಷಿಗಳಿಂದ ನಿರ್ಮಿಸಲಾಗಿದ 100 100 ಅಡಿ ಪ್ರದೇಶದಲ್ಲಿ ಪಿಒಪಿ, ಮರದ ಕಟ್ಟಿಗೆ ಗೋಣಿಯನ್ನು ಬಳಸಿ ಹಿವಾಚ್ಛಾದಿತ ಕೈಲಾಸ ಪರ್ವತದ ಪ್ರತಿಕೃತಿ ಸಿದ್ಧವಾಗಿದೆ. 50 ಕ್ಕೂ ಅಧಿಕ ಮಂದಿ ವಾರಕ್ಕೂ ಹೆಚ್ಚು ಕಾಲ ಪ್ರತಿಕೃತಿ ನಿರ್ಮಾಣ ಕಾರ್ಯ ನಡೆಸಿದ್ದಾರೆ.
ದ್ವಾದಶ ಲಿಂಗದರ್ಶನ: ಬೃಹತ್ ರುದ್ರಾಕ್ಷಿ ಶಿವಲಿಂಗದ ಜತೆಗೆ ದ್ವಾದಶ ಲಿಂಗ ದರ್ಶನ ಮಾದರಿಯನ್ನು ಪ್ರತಿಷ್ಠಾಪಿಸಲಾಗಿದೆ. ಮಹಾಶಿವರಾತ್ರಿಯಂದು ಭಾರತದಾದ್ಯಂತ ಜನರು ಹಿಮಾಲಯ, ಕೇದಾರನಾಥ, ಕಾಶಿ ವಿಶ್ವನಾಥ ಸೇರಿದಂತೆ ಸ್ಥಳೀಯ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಅದರಂತೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಅಷ್ಟು ದೂರ ತೆರಳಲು ಸಾಧ್ಯವಾಗದ ಜನರಿಗೆ ಅಲ್ಲಿನ ಪ್ರತಿಕೃತಿಗಳನ್ನು ಮೈಸೂರಿನ ಕೆಲವೆಡೆ ವಿಭಿನ್ನವಾಗಿ ನಿರ್ಮಿಸಿ, ವಿಶೇಷ ಅನುಭವವನ್ನು ನೀಡುತ್ತಿದೆ. ಕಳೆದ ಬಾರಿ ಬೃಹತ್ ತೆಂಗಿನಕಾಯಿ ಶಿವಲಿಂಗ ನಿರ್ಮಾಣ ಮಾಡಿ ಎಲ್ಲರ ಗಮನ ಸೆಳೆದಿತ್ತು. ಕೈಲಾಸ ಪರ್ವತದ ಮಾದರಿಯ ಒಳ ಭಾಗದಲ್ಲಿ ಧ್ಯಾನ ಗುಹೆಯೂ ನಿರ್ಮಾಣಗೊಳ್ಳುತ್ತಿದ್ದು, ಅದರ ಸುತ್ತಲೂ ಜೋರ್ತಿಲಿಂಗ ಮತ್ತು ಆಧ್ಯಾತ್ಮಿಕ ಚಿಂತನೆ, ಶಿವ ಚರಿತ್ರೆಗಳು ಇವೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ರಂಗನಾಥ್ ತಿಳಿಸಿದ್ದಾರೆ.
ಧನುರ್ಮಾಸ ಆರಂಭವಾದ ಕೂಡಲೇ ಎಲ್ಲೆಡೆ ದೇವಸ್ಥಾನಗಳಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ ಜಾವ ಪೂಜೆ ಆರಂಭವಾಗುತ್ತದೆ. ಮಹಿಳೆಯರು ಬೆಳಗಿನ ಚಳಿಯಲ್ಲಿಯೇ ದೇವಾಲಯಗಳಿಗೆ…
ಮೈಸೂರು : ಚಲಿಸುತ್ತಿದ್ದ ವೇಳೆಯೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊತ್ತಿ ಉರಿದಿರುವ ಘಟನೆ…
ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ಪಟ್ಟಣದಿಂದ ಊಟಿ ಮತ್ತು ಸುಲ್ತಾನ್ ಬತ್ತೇರಿಗೆ ಹಾದು ಹೋಗಿರುವ ರಸ್ತೆಗಳಲ್ಲಿ ಮತ್ತು…
ಮೈಸೂರು ನಗರದ ಸಬ್ ಅರ್ಬನ್ ಬಸ್ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ಬಳಿ ಆಟೋಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿದ್ದು,…
ಹೊಸದಿಲ್ಲಿ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಶಿಲ್ಪಿ ರಾಮ್ ಸುತಾರ್ ಗುರುವಾರ ( 100) ವಿಧಿವಶರಾಗಿದ್ದಾರೆ. ಮಹಾರಾಷ್ಟ್ರದ ಧುಲೆ…
ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವದ ೩೦ನೇ ಆವೃತ್ತಿ ಕಳೆದ ಶುಕ್ರವಾರ ಉದ್ಘಾಟನೆಯಾಗಿ ಇಂದು ಕೊನೆಯಾಗುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಮಾನ್ಯತೆ ಪಡೆದ ಐದು…