ಶಾಸಕರಿಗೆ ಅನಾರೋಗ್ಯ; ಮಳೆ ಹಾನಿ ಪರಿಹಾರಕ್ಕಾಗಿ ಕಚೇರಿಗೆ ಅಲೆದಾಡುತ್ತಿರುವ ನೊಂದವರು
ಮಂಜು ಕೋಟೆ
ಎಚ್.ಡಿ.ಕೋಟೆ: ಕ್ಷೇತ್ರದ ಶಾಸಕರಿಗೆ ಅನಾರೋಗ್ಯವಿದ್ದರೆ ಅಧಿಕಾರಿಗಳ ಕಾರುಬಾರು ನಡೆಸುತ್ತಿದ್ದು, ಇತ್ತ ಮಳೆ ಹಾನಿಯ ಪರಿಹಾರಕ್ಕಾಗಿ ರೈತರು ಮತ್ತು ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಹಿಂದುಳಿದ ತಾಲ್ಲೂಕಿನಲ್ಲಿ ಮಹಾಮಳೆಯ ಆರ್ಭಟದಿಂದ ಅನೇಕ ಮನೆಗಳು ರೈತರ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ಹಾಳಾಗಿ ರೈತರು ಮತ್ತು ಜನಸಾಮಾನ್ಯರು ಬೀದಿಪಾಲಾಗುವ ಪರಿಸ್ಥಿತಿ ಬಂದಿದೆ. ಇವರುಗಳಿಗೆ ಸ್ಪಂದಿಸಬೇಕಾಗಿದ್ದ ಅಧಿಕಾರಿ ವರ್ಗ ಆನೆ ನಡೆದಿದ್ದೇ ದಾರಿ ಎಂಬಂತೆ ಕಾರ್ಯವಹಿಸುತ್ತಿರುವುದರಿಂದ ನೊಂದವರಿಗೆ ಮತ್ತು ಬಡವರಿಗೆ ದಿಕ್ಕೇ ತೋಚದಂತಾಗಿದೆ.
ಕಳೆದ ಹತ್ತು ದಿನಗಳಿಂದ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ತಾಲ್ಲೂಕಿನಲ್ಲಿರುವ ಅಧಿಕಾರಿಗಳಿಗೆ ಯಾರೂ ಹೇಳುವವರು ಕೇಳುವವರು ಇಲ್ಲವಾಗಿದೆ. ಅಧಿಕಾರಿಗಳು ಹೇಳುವ ಮಾತುಗಳೇ ಅಂತಿಮವಾಗಿದೆ. ಇದರಿಂದಾಗಿ ಮಳೆ ಹಾನಿಯಿಂದ ಅನಾಹುತವಾಗಿಮನೆ ಮತ್ತು ಬೆಳೆ ಕಳೆದುಕೊಂಡವರು ಅಧಿಕಾರಿಗಳು ಕೇಳಿದ ಎಲ್ಲಾ ದಾಖಲಾತಿಗಳು ಮತ್ತು ಹಣ ಕೊಟ್ಟು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಪ್ರತಿನಿತ್ಯ ಸರಗೂರು ಮತ್ತು ಕೋಟೆ ತಾಲ್ಲೂಕು ಕಚೇರಿಗಳಿಗೆ ಆ ಗ್ರಾಮ ಪಂಚಾಯಿತಿಗಳು ಕಂದಾಯ ಅಧಿಕಾರಿಗಳ ಜಿಲ್ಲಾ ಪಂಚಾಯಿತಿ ಅಧಿಕಾರಿಗಳನ್ನು ಸಂಪರ್ಕಿಸಿ ಕಚೇರಿಗೆ ನೂರಾರು ಮಂದಿ ಅಲೆದಾಡಿದರೂ ಕೆಲವರ ಕೆಲಸ ಕಾರ್ಯಗಳು ಮಾತ್ರ ಆಗುತ್ತಿದ್ದು ಉಳಿದವರ ಕೆಲಸ ಕಾರ್ಯಗಳು ಹಾಗೇ ಉಳಿದುಕೊಳ್ಳುತ್ತಿವೆ.
ಮಳೆಹಾನಿ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡಿರುವ ಕೆಲ ದಲ್ಲಾಳಿಗಳು ಹಣ ಪಡೆದು ಅಧಿಕಾರಿಗಳು ಮೂಲಕ ಕೆಲಸ ಕಾರ್ಯಗಳನ್ನು ಭರದಿಂದ ಮಾಡಿಸಿಕೊಡುವಲ್ಲಿ ಮುಂದಾಗುತ್ತಾರೆ. ಆದರೆ, ನೊಂದವರಿಗೆ ಮತ್ತು ರೈತರ ಪರವಾಗಿ ಅಧಿಕಾರಿಗಳು ಕೆಲಸ ನಿರ್ವಹಿಸಿದಾಗ ಮಾತ್ರ ಸರ್ಕಾರ ನೀಡುವ ೋಂಜನೆಗಳು ಹಿಂದುಳಿದ ತಾಲ್ಲೂಕಿನಲ್ಲಿ ಸಮರ್ಪಕವಾಗಿ ಸದ್ಬಳಕೆಯಾಗಲು ಸಾಧ್ಯವಾಗಲಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್, ಶಾಸಕ ಅನಿಲ್ ಚಿಕ್ಕಮಾದು ಮಳೆ ಹಾನಿಯ ಪರಿಹಾರದ ವಿಚಾರದಲ್ಲಿ ಹೆಚ್ಚಿನ ರೀತಿ ಗಮನಹರಿಸಬೇಕಾಗಿದೆ.
ತಿ.ನರಸೀಪುರ: ಜಿಲ್ಲಾ ಉಸ್ತುವಾರಿ ಸಚಿವರು ನಾಳೆ(ಗುರುವಾರ)ಯೇ ಮುಖ್ಯಮಂತ್ರಿಗಳೊಂದಿಗೆ ಸಭೆಯನ್ನು ನಡೆಸಿ ದಕ್ಷಿಣ ಭಾರತದ ಕುಂಭಮೇಳ ನಡೆಯುವ ತ್ರಿವೇಣಿ ಸಂಗಮದಲ್ಲಿನ ಪೂರ್ವಸಿದ್ಧತೆಗಳು…
ಶ್ರೀರಂಗಪಟ್ಟಣ: ತಾಲೂಕಿನ ಆರತಿ ಉಕ್ಕಡದ ಅಹಲ್ಯಾದೇವಿ ಮಾರಮ್ಮ ದೇವಾಲಯಕ್ಕೆ ನಟ ದರ್ಶನ್ ಬುಧವಾರ ಕುಟುಂಬ ಸದಸ್ಯರೊಂದಿಗೆ ಭೇಟಿ ನೀಡಿದರು. ಪತ್ನಿ…
ಹರಿಯಾಣ: ವಿಜಯ್ ಹಜಾರೆ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕರ್ನಾಟಕ, ಹರಿಯಾಣ ತಂಡವನ್ನು ಐದು ವಿಕೆಟ್‌ಗಳಿಂದ…
ಎಚ್.ಡಿ.ಕೋಟೆ: ಪತ್ನಿಯ ನಡವಳಿಕೆಯಿಂದ ಬೇಸತ್ತ ಪತಿ ಪತ್ನಿಯನ್ನೇ ಕತ್ತು ಕೊಯ್ದು ಕೊಲೆ ಮಾಡಿ ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ನಡೆದಿದೆ.…
ಬೆಂಗಳೂರು: ಜಾತಿ ಗಣತಿ ವರದಿ ಇಟ್ಟುಕೊಂಡು ಒಕ್ಕಲಿಗ, ಲಿಂಗಾಯತರನ್ನು ಡಿ ಗ್ರೇಡ್ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಕುಮಾರಸ್ವಾಮಿ…
ಬೆಂಗಳೂರು: ಬಾಕಿ ಬಿಲ್ ಪಾವತಿ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೆಂಡರ್ಸ್ ಪತ್ರ ಬರೆದಿರುವ ಪ್ರಕರಣ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ…