ಜಿಲ್ಲೆಗಳು

‘ಕನ್ನಡ ನರ್ಸರಿ ಶಾಲೆ ಮರು ನಿರ್ಮಾಣಕ್ಕೆ 25 ತಿಂಗಳಾದ್ರೂ ಅನುಮತಿ ಇಲ್ಲ’

ಲೈಸೆನ್ಸ್ ಮತ್ತು ಪ್ಲಾನ್ ನೀಡುವಂತೆ ಕೇಳಿ ೨೫ ತಿಂಗಳಾಯಿತು: ರಾಮಕೃಷ್ಣ ಅಳಲು

ಮೈಸೂರು: ‘ಕುಸಿದಿರುವ ಕನ್ನಡ ಶಾಲೆಯೊಂದನ್ನು ಮರು ನಿರ್ಮಾಣ ಮಾಡಲು ಲೈಸೆನ್ಸ್ ಮತ್ತು ಪ್ಲಾನ್ ನೀಡುವಂತೆ ಕೋರಿ ೨೫ ತಿಂಗಳಾದ್ರೂ ನಗರಪಾಲಿಕೆ ವತಿಯಿಂದ ಇನ್ನು ಅನುಮತಿ ನೀಡಿಲ್ಲ’ ಎಂದು ಶ್ರೀ ವಿದ್ಯಾಶಂಕರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಾಮಕೃಷ್ಣ ಅಳಲು ತೋಡಿಕೊಂಡರು.
ನಗರದ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ಬುಧವಾರ ಮೈಸೂರು ನಗರಪಾಲಿಕೆಯ ಶ್ರೀ ಜಯಚಾಮರಾಜ ಒಡೆಯರ್ ಸಭಾಂಗಣದಲ್ಲಿ ‘ಅಂತಿಮ ಪಾಲಿಕೆ ಅದಾಲತ್’ನಲ್ಲಿ ಸಮಸ್ಯೆಗಳನ್ನು ತಿಳಿಸಿದರು.

೧೯೭೫ರಿಂದ ಉದಯಗಿರಿ ಮತ್ತು ಸಿದ್ಧಾರ್ಥನಗರದಲ್ಲಿ ಶ್ರೀವಿದ್ಯಾಶಂಕರ ಶಿಕ್ಷಣ ಸಂಸ್ಥೆಯು ಸಂಪೂರ್ಣ ಉಚಿತವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದೆ. ಸಿದ್ದಾರ್ಥನಗರದಲ್ಲಿನ ಮೈಸೂರ್ ಒನ್ ಬಳಿ ಇರುವ ಸಂಸ್ಥೆಯ ಕನ್ನಡ ನರ್ಸರಿ ಶಾಲೆಯ ಕಟ್ಟಡ ೨೦೧೬-೧೭ರಲ್ಲಿ ಕುಸಿದಿತ್ತು. ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲು ೨೦೨೦ರಲ್ಲಿಯೇ ಲೈಸೆನ್ಸ್ ಮತ್ತು ಪ್ಲಾನ್ ನೀಡುವಂತೆ ಅರ್ಜಿ ಹಾಕಿದ್ದೆ. ಶಿಲ್ಪನಾಗ್ ಅವರು ಮತ್ತು ಇಂದಿನ ಪಾಲಿಕೆ ಆಯುಕ್ತರಾದ ಲಕ್ಷೀಕಾಂತ್ ರೆಡ್ಡಿ ಅವರು ತಲಾ ಎರಡು ಬಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ನಾನಾ ಕಾರಣಗಳನ್ನು ಹೇಳಿ ಇನ್ನೂ ಲೈಸೆನ್ಸ್ ಮತ್ತು ಪ್ಲಾನ್ ಅನ್ನು ನೀಡಿಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಶಿವಕುಮಾರ್ ಮತ್ತು ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಅವರು ‘ ಡಿ.೮ರಂದು ನಡೆಯುವ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡಲಾಗುವುದು’ ಎಂದು ಭರವಸೆ ನೀಡಲಾಗುವುದು ಎಂದರು.

ಗಾಯಿತ್ರಿಪುರಂನ ಕೃಷ್ಣ ಎಂಬವರು ಓರಿಯಂಟಲ್ ವಿಮೆ ಕಾನೂನು ಅನ್ವಯ ಹಣಕಟ್ಟಿ ರಸ್ತೆಯೊಂದನ್ನು ನಿರ್ವಹಣೆ ಮಾಡಲು ಎನ್‌ಒಸಿ ನೀಡುವಂತೆ ಕೇಳಿದರು. ಇದಕ್ಕೆ ಆಯುಕ್ತ ಲಕ್ಷೀಕಾಂತ್ ರೆಡ್ಡಿ, ಹಾಗೆ ನೀಡಲು ಅವಕಾಶವಿಲ್ಲ ಎಂದು ಪ್ರತಿಕ್ರಿಯಿಸಿದರು. ೨೦೧೮ರಲ್ಲಿ ಬೋಗಾದಿಯ ಸಿಎಫ್‌ಟಿಆರ್‌ಐ ಲೇಔಟ್‌ನಲ್ಲಿ ರಸ್ತೆ ನಿರ್ವಹಣೆ ಮಾಡಲು ವಾಸು ಎಂಬವರಿಗೆ ಎನ್‌ಒಸಿ ನೀಡಿ ಅವಕಾಶ ನೀಡಲಾಗಿದೆ. ನಮಗೆ ಯಾಕೆ ನೀಡುವುದಿಲ್ಲ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀಕಾಂತ್ ರೆಡ್ಡಿ, ಈಗ ಹೀಗೆ ನೀಡಬಹುದಾದ ಯಾವುದೇ ನಿಯಮವಿಲ್ಲ. ಹಾಗಾಗಿ, ಕೊಡಲಾಗುವುದಿಲ್ಲ ಎಂದರು.

 

 

 

andolana

Recent Posts

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

13 mins ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

29 mins ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

52 mins ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

1 hour ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

1 hour ago

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ: ಆರು ನಿರ್ಣಯಗಳನ್ನು ಮಂಡಿಸಿದ ಕಸಾಪ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡ ಸಾಹಿತ್ಯ…

2 hours ago