ಜಿಲ್ಲೆಗಳು

‘ಯಾವ ತಾಯಿಗೂ ಇಂತಹ ಸ್ಥಿತಿ ಬರಬಾರದು…’

ಮುರುಘಾ ಶ್ರೀ ಲೈಂಗಿಕ ದೌರ್ಜನ್ಯ ಎಸಗಿರುವ ಬಾಲಕಿಯರ ತಾಯಿಯ ನೋವಿನ ನುಡಿ

ಮೈಸೂರು: ಅದೊಂದು ಮನಕಲಕುವ ಸನ್ನಿವೇಶ… ಮುಗ್ಧವಾಗಿ, ಆಟ- ಪಾಠಗಳಲ್ಲಿ ತಲ್ಲೀನವಾಗಿದ್ದ ನನ್ನ ಅಪ್ರಾಪ್ತ ಮಗಳನ್ನು ಸ್ವಾಮೀಜಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ವಿಚಾರ ಗೊತ್ತಾದರೂ ಕೂಡ ಅಸಹಾಯಕಳಾಗಿದ್ದೆ . ಯಾವ ತಾಯಿಗೂ ಇಂತಹ ಸ್ಥೀತಿ ಬರಬಾರದು ಎಂದು ಗದ್ಗದಿತ ಕಂಠದಿಂದ ಆ ಮಹಿಳೆ ಹೇಳುತ್ತಿದ್ದರೆ, ಕೇಳುತ್ತಿದ್ದವರು ಸಂತೈಸಲು ಪದಗಳಿಲ್ಲದೆ, ಮೌನವಾಗಿಯೇ ಆಕೆಯ ನೋವಿಗೆ ಮಮ್ಮಲ ಮರುಗಿದರು.

ಜನರ ಬಡತನವನ್ನೇ ಬಂಡವಾಳ ಮಾಡಿಕೊಂಡಿದ್ದ  ಸ್ವಾಮೀಜಿ ನನ್ನ ಮಕ್ಕಳಂತೆ ಇತರೆ ಮಕ್ಕಳನ್ನೂ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂಬ ಸತ್ಯ ಅಲ್ಲಿರುವವರಿಗೆ ಗೊತ್ತಿತ್ತು. ಆದರೂ ಕೂಡ ಆ ಪೋಷಕರೆಲ್ಲರೂ ಮೌನಕ್ಕೆ ಶರಣಾಗಿದ್ದುದು ದುರಂತ ಎಂದು ಆಕೆ ಆಕ್ರೋಶದಿಂದ ನುಡಿದರು.

ಹಲವಾರು ವರ್ಷಗಳಿಂದ ಮಠದಲ್ಲಿ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ದುಷ್ಕೃತ್ಯ ನಿರಂತರವಾಗಿತ್ತು. ಸ್ವಾಮೀಜಿಯು ವಸತಿ ನಿಲಯದಲ್ಲಿದ್ದ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಅನೇಕ ಮಕ್ಕಳು ನನ್ನ ಬಳಿ ನೋವು ತೋಡಿಕೊಂಡಿದ್ದರು. ಪ್ರಭಾವಿಯಾದ ಸ್ವಾಮೀಜಿ ವಿರುದ್ಧ ಮಾತನಾಡುವ ಧೈರ್ಯ ನನಗಿರಲಿಲ್ಲ . ಅದೊಂದು ದಿನ ನನ್ನ ಬಳಿಗೆ ಬಂದ ಮಗಳು ಅಳುತ್ತಲೇ ನಡೆಯುತ್ತಿರುವ ವಿಚಾರ ಹೇಳಿದ್ದಳು. ಸ್ವಾಮೀಜಿ ನನ್ನನ್ನು ಮಧ್ಯಾಹ್ನದ ವೇಳೆೆಯೇ ಅವರ ಕೊಠಡಿಗೆ ಕರೆಸಿಕೊಳ್ಳುತ್ತಾರೆ. ನನಗೆ ಇನ್ನಿಲ್ಲದ ಹಿಂಸೆ ನೀಡುತ್ತಾರೆ. ನನಗೆ ಹಾಸ್ಟೆನಲ್ಲಿ ಇರಲು ಇಷ್ಟವಿಲ್ಲ ಎಂದು ಹೇಳಿದಳು. ಆದರೂ ಅಸಹಾಯಕಳಾದ ನಾನು,  ಮಗಳನ್ನು ಮತ್ತೆ ಹಾಸ್ಟಲ್‌ಗೆ ಕಳುಹಿಸಿದೆ ಎಂದಾಗ ಧ್ವನಿಯಲ್ಲಿ ದುಃಖ ಚಾಚಿಕೊಂಡಿತ್ತು.

ಇದೀಗ ಸತ್ಯವನ್ನು ಹೇಳಿರುವ ನನಗೆ ಅಲ್ಲಿನವರು ತೊಂದರೆ ಉಂಟುವಾಡಬಹುದು. ಹೀಗಾಗಿ ಸರ್ಕಾರ ನನ್ನ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ವಸತಿ ವ್ಯವಸ್ಥೆಯನ್ನು ಮಾಡಿಕೊಡಬೇಕು. ನನಗೆ ಸೂಕ್ತ ರಕ್ಷಣೆಯನ್ನು ನೀಡಬೇಕು. ನನಗೆ ಒಂದು ಉದ್ಯೋಗ ನೀಡಬೇಕು ಎಂದು ಮನವಿ ಮಾಡಿದರು.

ಮಠದಲ್ಲಿರುವ ಮಗು ಯಾರದ್ದು? 

ಇಂತಹುದೊಂದು ಪ್ರಶ್ನೆ ಇದೀಗ ಎಲ್ಲರಲ್ಲಿ ಕುತೂಹಲ ಮೂಡಿಸಿದೆ. ಮುರಘಾ ಮಠದಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗುವೊಂದಿರುವ ಬಗ್ಗೆ ಒಡನಾಡಿಯ ಪರಶು ಅವರಿಗೆ ಮಾಹಿತಿ ದೊರಕಿದೆ. ಮಗುವಿನ ತಂದೆ ಯಾರೂ ಎಂಬುದು ಮಠದ ಎಲ್ಲರಿಗೂ ಗೊತ್ತಿದೆ ಎಂದು ಕೆಲವರು ವಾಹಿತಿ ನೀಡಿದ್ದಾರೆ.

ಈ ಸಂಬಂಧ ಮಗುವಿನ ಮಗ್ಗೆ ವಾಹಿತಿ ಪಡೆಯುವ ಉದ್ದೇಶದಿಂದ ಪರಶು ಅವರು ನ್ಯಾಯಾಲಯದ ಗಮನಕ್ಕೆ ಈ ವಿಚಾರವನ್ನು ತಂದಿದ್ದಾರೆ. ಇದೀಗ ಮಠಕ್ಕೆ ತೆರಳಿರುವ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಮಗುವನ್ನು ಕರೆತಂದಿದ್ದಾರೆ.

‘ಸಿಬಿಐ ತನಿಖೆಯಾಗಲಿ’

ಈ ಪ್ರಕರಣದ ಸಂಬಂದ ಮಾತನಾಡಿದ ಒಡನಾಡಿ ಸಂಸ್ಥೆಯ ನಿರ್ದೇಶಕರಲ್ಲೊಬ್ಬರಾದ ಪರಶುರಾಮ್ ಅವರು, ಇದೊಂದು ದೊಡ್ಡ ಪ್ರಕರಣವಾಗಿದೆ.  ಸ್ವಾಮೀಜಿಯು ಕನಿಷ್ಠ ಮೂವತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago