ಯುವ ದಸರಾದಲ್ಲಿ ಮಳೆಗೂ ಸೆಡ್ಡು ಹೊಡೆದು ಯುವ ಸಮೂಹ ಕುಣಿತ
ಮೈಸೂರು: ‘ಕಣ್ಣು ಹೊಡಿಯಾಕ ಮೊನ್ನೆ ಕಲತೀನಿ…ನಿನ್ನ ನೋಡಿ ಸುಮ್ನೆಂಗಿರ್ಲಿ’ ಎಂದು ಹಾಡುತ್ತಾ ಯುವ ದಸರಾ ವೇದಿಕೆಗೆ ಆಗಮಿಸಿದ ದಕ್ಷಿಣ ಭಾರತದ ಖ್ಯಾತ ಗಾಯಕಿ ಮಂಗ್ಲಿ, ನೆರೆದಿದ್ದ ಕಲಾಭಿಮಾನಿಗಳನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು.
ಯುವ ದಸರಾದ ಐದನೇ ದಿನದ ಕಾರ್ಯಕ್ರಮದಲ್ಲಿ ಮಳೆಗೂ ಸೆಡ್ಡು ಹೊಡೆದ ಯುವ ಸಮೂಹ ಗಾಯನ ರಸಸ್ವಾದ ಸವಿದರು. ಈ ವೇಳೆ ಮಾತನಾಡಿದ ಮಂಗ್ಲಿ ‘ನಾನು ಮೈಸೂರಲ್ಲಿ ನೀಡುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ. ನನಗೆ ಮೈಸೂರು ಎಂದರೇ ಬಹಳ ಇಷ್ಟ. ತೆಲುಗು ಒಂದು ಮನೆಯಾದರೆ, ಕನ್ನಡವೂ ನನ್ನ ಇನ್ನೊಂದು ಮನೆ’ ಎಂದು ಹೇಳಿದ್ದಕ್ಕೆ ಮೈಸೂರಿಗರು ಪಿಧಾ ಆದರು.
ಏಕ್ ಲವ್ ಯಾ ಚಿತ್ರದ ‘ಎಣ್ಣೆಗೂ…ಹೆಣ್ಣಿಗೂ…’, ‘ಯಕ್ಕಾ ಸಕ್ಕಾ’ ಹಾಡುಗಳ ಜೊತೆಗೆ ತೆಲುಗಿನ ಗೀತೆಗಳನ್ನು ಹಾಡಿದರು. ಪುನೀತ್ ರಾಜ್ ಕುಮಾರ್ ಚಿತ್ರದ ‘ಬೊಂಬೆ ಹೇಳುತೈತೆ ನೀನೆ ರಾಜಕುಮಾರ್’ ಹಾಡು ಹಾಡಿದರು. ಇವರಿಗೆ ಗಾಯಕ ಅನಿರುದ್ಧ ಸಾಥ್ ನೀಡಿದರು.
ನಟಿ ಹರ್ಷಿಕಾ ಪೂಣಚ್ಚ ಅವರು ತಮ್ಮ ನೃತ್ಯದ ಮೂಲಕ ಎಲ್ಲರ ಮನಸೂರೆಗೊಂಡರು. ‘ನೀನಾದೆನಾ, ನೀನಾದೆನಾ… ನಿನ್ನೊಂದಿಗೆ ಈ ಜೀವನ…’, ‘ಕಣ್ಣು ಹೊಡಿಯಾಕ ಮೊನ್ನೆ ಕಲತೀನಿ’ ‘ಯಕ್ಕ ಸಕ್ಕಾ’ ಹಾಡುಗಳಿಗೆ ನೃತ್ಯ ಪ್ರದರ್ಶಿಸಿದರು. ಬಾಲಿವುಡ್ ಗಾಯಕ, ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಮತ್ತು ತಂಡದವರು ಸಂಗೀತ ರಸಮಂಜರಿ ಹಿಂದೆ ಹಾಡುಗಳು ಪ್ರೇಕ್ಷಕರ ಮನ ಗೆದ್ದವು.
ಮೈಸೂರಿನವರೇ ಆದ ನಟಿ ಪಾಯಲ್ ಅವರು ‘ಜೋಕೆ… ನಾನು ಬಳ್ಳಿಯ ಮಿಂಚು’ ಮತ್ತು ‘ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ಅಪ್ಪು’ ಹಾಡುಗಳಿಗೆ ಹೆಜ್ಜೆ ಹಾಕಿದರು. ರಂಗಿತರಂಗ ಖ್ಯಾತಿಯ ನಟಿ ರಾಧಿಕಾ ನಾರಾಯಣ್ ಅವರು ಅಪ್ಪು ಹಾಡುಗಳಿಗೆ ನೃತ್ಯ ಪ್ರದರ್ಶಿಸಿದರು. ಗಾಯಕ ಶಶಾಂಕ್ ಶೇಷಗಿರಿ, ಗಾಯಕಿ ಇಂಚರ ಹಾಡಿ ರಂಜಿಸಿದರು.
ಕಾರ್ಯಕ್ರಮದ ಆರಂಭದಲ್ಲಿಯೇ ಮಳೆ ತನ್ನ ಆಟ ಶುರು ಮಾಡಿತು. ೫ ನಿಮಿಷಗಳ ಕಾಲ ಬಿರುಸಾಗಿ ಸುರಿದ ಮಳೆ, ನಂತರ ತುಂತುರಾಗಿ ಉದುರಲಾರಂಭಿಸಿತು. ಆಸನದ ವ್ಯವಸ್ಥೆ ಇಲ್ಲದೆ, ಹಿಂದೆ ನಿಂತು ಕಾರ್ಯಕ್ರಮ ನೋಡುತ್ತಿದ್ದ ಪ್ರೇಕ್ಷಕರು ಕೊಡೆ ಹಿಡಿದು ಕಾರ್ಯಕ್ರಮ ಎಂಜಾಯ್ ಮಾಡಿದರು.
ಬೆಂಗಳೂರು : ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಬುಧವಾರ (ಜನವರಿ 7) ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ…
ಮೈಸೂರು : ಮಾದಕ ವ್ಯಸನಿಗಳಾದ ನಾಲ್ವರು ಯುವಕರ ತಂಡ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ನಗದು ಹಾಗೂ ಮೊಬೈಲ್…
ಸಾವಿರಾರು ಹೆಜ್ಜೆಗಳೊಂದಿಗೆ ಆರೋಗ್ಯದ ಸಂದೇಶ ಜ.11ರಂದು ನಡೆಯಲಿರುವ ಜಾಗೃತಿ ಅಭಿಯಾನ ಮೈಸೂರು : ಹಲವು ಮೊದಲುಗಳಿಗೆ ನಾಂದಿ ಹಾಡಿರುವ ಸಾಂಸ್ಕೃತಿಕ…
ರಾಂಚಿ : ಉತ್ತರ ಭಾರತವು ತೀವ್ರ ಶೀತಗಾಳಿಗೆ ತತ್ತರಿಸಿದ್ದು, ಭಾರೀ ಹಿಮಪಾತದಿಂದ ಪಟ್ಟಣಗಳು, ದೇವಾಲಯಗಳು ಮತ್ತು ಸುತ್ತಮುತ್ತಲಿನ ಬೆಟ್ಟಗಳು ದಟ್ಟ…
ಸಿದ್ದಾಪುರ : ವಿರಾಜಪೇಟೆ ತಾಲೂಕು ಮಠ ಗ್ರಾಮದಲ್ಲಿ ಬುಧವಾರ ಸಂಜೆ ಹುಲಿಯೊಂದು ಹಾಲು ಕರೆಯುವ ಹಸುವಿನ ಮೇಲೆ ದಾಳಿ ನಡೆಸಿ…
ಹಾವೇರಿ : ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ಕ್ಯಾನ್ಸರ್, ಟ್ರಾಮಾ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ…