ಕಾಮಗಾರಿ ಸ್ಥಳದಲ್ಲೇ ಹೂತ ವಾಹನಗಳು; ತಮಿಳುನಾಡು ಸಂಪರ್ಕಿಸುವ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ
ಚಾಮರಾಜನಗರ: ನಗರ ಹೊರವಲಯದ ಸೋಮವಾರಪೇಟೆ ಮೂಲಕ ತಮಿಳುನಾಡಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಯುತ್ತಿದ್ದ ಚರಂಡಿ ನೀರು ತಪ್ಪಿಸಲು ೨ ದಿನಗಳ ಹಿಂದೆಯಷ್ಟೇ ಅಳವಡಿಸಿದ್ದ ಸಿಮೆಂಟ್ ಪೈಪ್ ಜೋಡಣೆ ಕಾಮಗಾರಿ ಸ್ಥಳದಲ್ಲೇ ಭಾರೀ ವಾಹನಗಳು ಶನಿವಾರ ಹೂತು ಕೊಂಡು ಕಿ.ಮೀ.ಗಿಂತಲೂ ಹೆಚ್ಚು ದೂರ ಟ್ರಾಫಿಕ್ ಜಾಂ ಸಮಸ್ಯೆ ಉಂಟಾಗಿತ್ತು.
ಬೆಳಿಗ್ಗೆ ೮ರಿಂದ ೯ ಘಂಟೆಯವರೆಗೆ ಟ್ರಾಫಿಕ್ ಜಾಂ ಉಂಟಾದ ಪರಿಣಾಮ ಕರ್ನಾಟಕ ಮತ್ತು ತಮಿಳುನಾಡು ನಡುವೆ ಸಂಚರಿಸುವ ವಾಹನಗಳು ನಿಂತಲ್ಲೇ ನಿಲ್ಲುವಂತಾಗಿತ್ತು.
ಏನಿದು ಸಮಸ್ಯೆ :
ರಾಷ್ಟ್ರೀಯ ಹೆದ್ದಾರಿಯಲ್ಲಿ(೨೦೯) ಬರುವ ಸೋಮವಾರಪೇಟೆ ಮತ್ತು ಹರದನಹಳ್ಳಿ ಮಧ್ಯೆದ ಸೇತುವೆ ಅಡಿಯಲ್ಲಿ ಸರಾಗವಾಗಿ ಹರಿದು ಹೋಗುತ್ತಿದ್ದ ನೀರಿನ ಕಾಲುವೆ ರಸ್ತೆ ಕಾಮಗಾರಿ ಸಂದರ್ಭದಲ್ಲಿ ಮುಚ್ಚಿ ಹೋಗಿದೆ. ಹೀಗಾಗಿ ಕಳೆದ ೬ ತಿಂಗಳಿಂದ ರಸ್ತೆ ಮೇಲೆೆಯೇ ಚರಂಡಿ ನೀರುಹರಿದು ಪ್ರಯಾಣಿಕರಿಗೆ ತೊಂದರೆಯಾಗಿ ಅಪಘಾತಗಳಿಗೂ ಕಾರಣವಾಗಿತ್ತು.
ಈ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಸೂಚನೆ ಮೇರೆಗೆ ನಗರಸಭೆಯಿಂದ ಸಿಮೆಂಟ್ ಪೈಪ್‌ಗಳನ್ನು ೨ ದಿನಗಳ ಹಿಂದೆಯಷ್ಟೇ ಅಳವಡಿಸಿ ರಸ್ತೆ ಮೇಲೆ ಚರಂಡಿ ನೀರು ಹರಿಯುವುದನ್ನು ತಪ್ಪಿಸಲಾಗಿತ್ತು. ಶಾಸಕರೂ ಕಾಮಗಾರಿ ವೀಕ್ಷಣೆ ವಾಡಿದ್ದರು.
ಈ ಕಾಮಗಾರಿ ಸ್ಥಳದಲ್ಲಿ ಅಂದರೆ ಪೈಪ್‌ಗಳನ್ನು ಹಾಕಿರುವ ಜಾಗದ ಮೇಲ್ಭಾಗದಲ್ಲಿ ಸಿಮೆಂಟ್, ಜಲ್ಲಿ ಕಾಂಕ್ರೀಟ್ ಹಾಕದೆ ಕೇವಲ ಮಣ್ಣನ್ನಷ್ಟೇ ಹಾಕಿದ್ದರಿಂದ ಮಳೆಯ ಕಾರಣ ಭಾರೀ ವಾಹನಗಳು ಶನಿವಾರ ಹೂತುಕೊಂಡು ರಸ್ತೆ ಬಂದ್ ಆಗಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.
ನಂತರ ಹೂತಿದ್ದ ವಾಹನವೊಂದನ್ನು ದುಸ್ಸಾಹಸ ವಾಡಿ ಪಕ್ಕಕ್ಕೆ ಸರಿಸಲಾಗಿ ಸ್ವಲ್ಪ ಸ್ಥಳಾವಕಾಶವಾಯಿತು. ಈ ರಸ್ತೆಗೆ ಹೊಂದಿಕೊಂಡಂತೆ ಬೈಪಾಸ್ ರಸ್ತೆ ಇದ್ದು, ಅದೂ ತುಂಬಾ ಹಾಳಾಗಿದೆ. ಈ ಕಡೆಯಿಂದಲೂ (ತಾವರೆಕಟ್ಟೆಮೋಳೆ ವಾರ್ಗ) ವಾಹನಗಳು ಕೆಸರಿನ ಮಧ್ಯೆ ಸಂಚರಿಸಬೇಕಾಯಿತು.
ಸೋಮವಾರಪೇಟೆ, ದೊಡ್ಡಮೋಳೆ, ಚಿಕ್ಕಮೋಳೆ, ಹರದನಹಳ್ಳಿ, ವೆಂಕಟಯ್ಯನ ಛತ್ರ, ಅಮಚವಾಡಿ, ಬಸವಾಪುರ, ಬಿಸಲವಾಡಿ, ಅಟ್ಟುಗೂಳಿಪುರ ಮೊದಲಾದ ಗ್ರಾಮದವರು ಈ ವಾರ್ಗದಲ್ಲಿಯೇ ನಗರಕ್ಕೆ ಬಂದು ಹೋಗಬೇಕಿದ್ದು ರಸ್ತೆ ಅವ್ಯವಸ್ಥೆ ಗೊತ್ತಿದ್ದರೂ ಹೆದ್ದಾರಿ ಇಂಜಿನಿಯರ್‌ಗಳು ಮೌನ ವಹಿಸಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಾರ್ಗದಲ್ಲಿ ಟ್ರಾಫಿಕ್ ಜಾಂ ಸಮಸ್ಯೆ ಇದೇ ಮೊದಲಲ್ಲ. ಗುರುವಾರ ಸಂಜೆ ೬.೩೦ರಲ್ಲೂ ಉಂಟಾಗಿತ್ತು. ಅದರ ಹಿಂದೆಯೂ ಆಗಿತ್ತು. ವಾಹನ ಸವಾರರು ಪರಸ್ಪರ ಹಿಂದೆ -ಮುಂದೆ ನೋಡಿ ಕೊಂಡು, ವಾತನಾಡಿಕೊಂಡು ಸಂಚಾರ ಮಾಡಬೇಕಿತ್ತು ಹಾಗೂ ಟ್ರಾಫಿಕ್ ಜಾಂ ಆಗುತ್ತಿದೆ. ಅಂತರರಾಜ್ಯ ಸಂಪರ್ಕಿಸುವ ಈ ರಸ್ತೆ ಸ್ಥಿತಿ ನೋಡಿ ತಮಿಳುನಾಡು ಪ್ರಾಯಾಣಿಕರು ಹೇಸುವಂತಾಗಿದೆ ಎಂದು ದೊಡ್ಡಮೋಳೆ ಹನುರಾಜು ಕಟುವಾಗಿ ಟೀಕಿಸಿದ್ದಾರೆ.
ಹೆದ್ದಾರಿಯಲ್ಲಿ ಹರಿಯುತ್ತಿದ್ದ ಚರಂಡಿ ನೀರು ತಡೆಯಲು ಸಿಮೆಂಟ್ ಪೈಪ್‌ಗಳನ್ನು ಅಳವಡಿಸಿರುವ ಸ್ಥಳದಲ್ಲಿ ಕಾಂಕ್ರೀಟ್ ಹಾಕದೇ ಮಳೆಯ ಈ ಸಂದರ್ಭದಲ್ಲಿ ಮಣ್ಣು ಹಾಕಿದ್ದು ವಾಹನಗಳು ಹೂತು ಕೊಂಡು ಟ್ರಾಫಿಕ್ ಜಾಂ ಉಂಟಾಗಲು ನೇರ ಕಾರಣ. ಕೂಡಲೇ ಅಲ್ಲಿಗೆ ಕಾಂಕ್ರೀಟ್ ಹಾಕಿ ಹೆದ್ದಾರಿಯಲ್ಲಿ ಇನ್ನಾದರೂ ಸುಗಮವಾಗಿ ಸಂಚರಿಸುವಂತೆ ಮಾಡದಿದ್ದರೆ ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಗುವುದು.
–ಹನುರಾಜ್,ದೊಡ್ಡಮೋಳೆ.
ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಜಗಮಗಿಸುವ ದೀಪಾಲಂಕಾರ, ಫಲಪುಷ್ಪ ಪ್ರದರ್ಶನದ ಸೊಬಗಿನ ಮಧ್ಯೆ ಪಾರಂಪರಿಕ ಪೊಲೀಸ್ ಬ್ಯಾಂಡ್‌ನ ಸದ್ದಿನೊಂದಿಗೆ…
ಕೊಳ್ಳೇಗಾಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಸಾಕಮ್ಮಾಸ್ ಕಾಫಿ ಪುಡಿ ಅಂಗಡಿ ಬುಧವಾರ ರಾತ್ರಿ ಸಂಪೂರ್ಣ…
ಮೈಸೂರು: ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದ 25 ಮಂದಿ ಐಪಿಎ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ನೀಡಿದೆ. ಅವರಲ್ಲಿ…
ಕೊಡಗು: ಕರ್ನಾಟಕ ಸರ್ಕಾರದ ಆದೇಶದಂತೆ ಕೊಡಗಿನ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರನ್ನು ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಖಾಲಿಯಾದ ಸ್ಥಳಕ್ಕೆ…
ಬೆಂಗಳೂರು: ಸಣ್ಣ ವಯಸ್ಸಿನಿಂದಲೇ ಬರವಣಿಗೆ ರೂಢಿಸಿಕೊಂಡು 9ನೇ ವಯಸ್ಸಿಗೆ 'ಟೇಲ್ಸ್ ಬೈ ಪರಿ' ಪುಸ್ತಕವನ್ನು ಬರೆದು ಹೆಸರು ಮಾಡಿರುವ ನಮ್ಮ…
ನವದೆಹಲಿ: ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಿಗಳಿಗೆ ಮನೆ ನೀಡುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ದಡ್ಡತನದ ಪರಮಾವಧಿ ಎಂದು ಕೇಂದ್ರ ಸಚಿವ…