ಮೈಸೂರು : ನಾಡಗೀತೆ ಗಾಯನಕ್ಕೆ ಶೈಲಿಯ ದಾಟಿ ಮತ್ತು 2:30ನಿಮಿಷ ಕಾಲಮಿತಿಯನ್ನ ನಿಗದಿಪಡಿಸಿ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯನ್ನ ಅಧಿಕೃತಗೊಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರಿಗೆ ನಗರದ ನಿರೂಪಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರಾದ ಅಜಯ್ ಶಾಸ್ತ್ರಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಮುಂದುವರಿದು, ಮೈಸೂರು ರಾಜ್ಯವಿದ್ದಾಗ ಬಸಪ್ಪಶಾಸ್ತ್ರಿಗಳು ರಚಿಸಿದ ಕಾಯೌ ಗೌರಿ ನಾಡಗೀತೆಯಾಗಿ ಎಲ್ಲೆಡೆ ಹಾಡಲಾಗುತ್ತಿತ್ತು, ನಂತರ ಕರ್ನಾಟಕ ರಾಜ್ಯ ರಚನೆಯಾದ ಬಳಿಕ ಕುವೆಂಪು ರವರು ರಚಿಸಿದ ಭಾರತಜನನೀಯ ತನುಜಾತೆ ಹಾಡುತ್ತಿದ್ದಾದರೂ ಅದು ಅಧಿಕೃತವಾಗಿ ರಾಜ್ಯ ಸರ್ಕಾರ ನಾಡಗೀತೆಯೆಂದು ಘೋಷಿಸಿರಲಿಲ್ಲ ರಾಷ್ಟ್ರಕವಿ ಕುವೆಂಪು ರವರು 1924ರಲ್ಲಿ ಭಾರತಜನನಿಯ ತನುಜಾತೆ ಗೀತೆಯನ್ನ ‘ಕಿಶೋರಚಂದ್ರವಾಣಿ’ ಎಂಬ ಕಾವ್ಯನಾಮದಡಿ ಬರೆದರು. ರಾಷ್ಟ್ರಕವಿ ಕುವೆಂಪು ರವರು ರಚಿಸಿರುವ ಭಾರತಜನನಿಯ ತನುಜಾತೆ ಗೀತೆಯನ್ನ ಮೈಸೂರು ಅನಂತಸ್ವಾಮಿ ರವರು ರಾಗಸಂಯೋಜಿಸಿ ರಾಜ್ಯದ ಎಲ್ಲೆಡೆ ಹಾಡುವ ಮೂಲಕ ಜನಸಮೂಹ ಹಾಡುವಂತೆ ಪ್ರೇರೇಪಿಸಿ ಜನಪ್ರಿಯಗೊಳಿಸಿದ್ದರು, 2004 ಫೆಬ್ರವರಿ 23ರಂದು ಕುವೆಂಪು ರವರ ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಭಾರತಜನನಿಯ ತನುಜಾತೆ ಗೀತೆಯನ್ನು ರಾಜ್ಯದ ಅಧಿಕೃತ ನಾಡಗೀತೆಯನ್ನಾಗಿ ನಿರ್ಧರಿಸಿ ಘೋಷಿಸಿತು.
ಇತ್ತೀಚಿನ ದಿನಗಳಲ್ಲಿ ಟ್ರಾಕ್ ಸಂಪ್ರದಾಯ ಬಂದ ಬಳಿಕ ನಾಡಗೀತೆಯನ್ನ ಯಾವ ಶೈಲಿಯ ರಾಗದಲ್ಲಿ ಹಾಡಬೇಕು, ದಾಟಿ ಮತ್ತು ಸಮಯ ನಿಗಧಿಯನ್ನು ಸಹ ರಾಜ್ಯ ಸರ್ಕಾರ ನಿಗಧಿಪಡಿಸಿರಲಿಲ್ಲ, ಇದೀಗ ಸಂಗೀತ ವಿದೂಷಿ ಎಚ್. ಆರ್ ಲೀಲಾವತಿ ರವರ ಅಧ್ಯಕ್ಷತೆಯಲ್ಲಿ ಸಮಿತಿ ಶಿಫಾರಸು ಮಾಡಿದ ಪ್ರಕಾರ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ವೇದಿಕೆಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಹಾಡುವಾಗ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ 2:30ನಿಮಿಷ ಇನ್ನೂ ಮುಂದೆ ನಾಡಗೀತೆಯನ್ನ ಹಾಡಬೇಕೆಂದು ಅಧಿಕೃತಗೊಳಿಸಿದೆ ನಮ್ಮ ಮೈಸೂರಿನ ಸಾಂಸ್ಕೃತಿಕತೆಗೆ ಕಲಾವಿದರ ತವರೂರಿಗೆ ಸಂದ ಗೌರವವಾಗಿದೆ, ಮೈಸೂರು ಕಲಾವಿದರ ಬಹಳ ವರ್ಷದ ಮಹದಾಸೆ ಈಡೇರಿದೆ ನಿರ್ಧಾರ ಕೈಗೊಂಡು ಅನುಮೋದನೆ ಮಾಡಿದೆ ಎಂದು ರಾಜ್ಯ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…